Saturday, Oct 24 2020 | Time 20:49 Hrs(IST)
 • ದಸರಾ-ಮೆರವಣಿಗೆ: ನಿಗದಿತ ಕಲಾತಂಡಗಳ ನಿಯೋಜನೆ
 • ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪುತ್ರನಿಗೆ ಇಡಿ ಸಮನ್ಸ್
 • ಜಿಯೋಫೋನ್‌ನಲ್ಲಿ ಹೊಸ ಜಿಯೋ ಕ್ರಿಕೆಟ್ ಆಪ್: ಬಹುಮಾನ ಗೆಲ್ಲಲು ಅವಕಾಶ
 • ರಾಜಕಾಲುವೆ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಆರ್ ಅಶೋಕ
 • ಜಂಬೂಸವಾರಿ 40 ನಿಮಿಷಕ್ಕೆ ಸೀಮಿತ: 300 ಜನರಿಗೆ ಮಾತ್ರ ಪ್ರವೇಶ; ಡಾ ಚಂದ್ರಗುಪ್ತ
 • ಎನ್‌ಸಿಬಿ ಅಧಿಕಾರಿಗಳ ಸೋಗಿನಲ್ಲಿ ಬೆಳ್ಳುಳ್ಳಿಯ ವ್ಯಾಪಾರಿಯ ದರೋಡೆ
 • ಚರ್ಚ್ ಕುಸಿದು 22 ಮಂದಿ ಸಾವು
 • ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು: ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ
 • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
Karnataka Share

ಕೆಆರ್ ಎಸ್ ಪಕ್ಷದ ‘ಚಲಿಸು ಕರ್ನಾಟಕ’ ಸೈಕಲ್ ಯಾತ್ರೆ ತಾತ್ಕಾಲಿಕ ಸ್ಥಗಿತ

ಬೆಂಗಳೂರು, ಸೆ.18(ಯುಎನ್ಐ) ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಸ್ಥಾಪನೆಯ ಕೆ.ಆರ್.ಎಸ್ ಪಕ್ಷ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ “ಉಜ್ವಲ ಭವಿಷ್ಯದೆಡೆಗೆ, ಸುಭದ್ರ ಕರ್ನಾಟಕದೆಡೆ ಹೆಸರಿನ”ಚಲಿಸು ಕರ್ನಾಟಕ ಸೈಕಲ್ ಯಾತ್ರೆ’ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸೈಕಲ್ ಜಾಥಾ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿಗೆ ಅಭಿಯಾನದ ವೇಳೆ ಅಪಘಾತಕ್ಕೀಡಾಗಿದ್ದರಿಂದ ಅಭಿಯಾನ ಸ್ಥಗಿತಗೊಂಡಿದೆ.
ಕೋಲಾರದಿಂದ ಆರಂಭವಾಗಿದ್ದ ಸೈಕಲ್ ಯಾತ್ರೆ ವೇಳೆ ರವಿಕೃಷ್ಣಾರೆಡ್ಡಿ ಗುರುವಾರ ಆನೇಕಲ್-ಹಾರೋಹಳ್ಳಿ ನಡುವೆ ಸಂಚರಿಸುತ್ತಿದ್ದರು. ಕಣಿವೆಯಲ್ಲಿ ತಟ್ಟಿಗೆರೆ ಬಳಿ 40 ಕಿ.ಮೀ ವೇಗದಲ್ಲಿ ಸೈಕಲ್ ತುಳಿಯುತ್ತಿದ್ದ ರವಿಕೃಷ್ಣಾರೆಡ್ಡಿ ಇಳಿಜಾರಿನಲ್ಲಿ ಬಿದ್ದಿದ್ದರಿಂದ ಪಕ್ಕದಲ್ಲಿದ್ದ ಟೆಂಪೊವೊಂದು ರಸ್ತೆಗುಂಡಿಗಳನ್ನು ತಪ್ಪಿಸಲು ಹೋಗಿ ಎಡಕ್ಕೆ ಬಂದ ಪರಿಣಾಮ ಸೈಕಲ್ ಅವರ ಮುಂದೆ ಎಗರಿಬಿದ್ದಿದ್ದರಿಂದ ರವಿಕೃಷ್ಣಾರೆಡ್ಡಿ ಹತ್ತಾರು ಅಡಿ ಜಾರಿಬಿದ್ದು ಗಾಯಗೊಂಡಿದ್ದಾರೆ.
ಬಳಿಕ ಜೊತೆಗಾರರು ರವಿಕೃಷ್ಣಾರೆಡ್ಡಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಕಾಡುಪ್ರದೇಶದಿಂದ ಚಂದಾಪುರಕ್ಕೆ ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ತರಲಾಯಿತು. ಅಪಘಾತದಲ್ಲಿ ಅವರ ಬಲಭುಜದ ಮೂಳೆ ಮುರಿದಿದ್ದು, ಅದೃಷ್ಟವಶಾತ್ ತಲೆಗೆ ಗಾಯವಾಗುವುದು ತಪ್ಪಿದೆ. ಕಣಿವೆ ದಾಟಿದ್ದರೆ ಯಾತ್ರೆಯನ್ನು ಜಯಿಸಿದಂತಾಗುತ್ತಿತ್ತು. ಆದರೆ ಕೊನೆಯಲ್ಲಿ ಪರಿಸ್ಥಿತಿ ಹೀಗಾಯಿತು ಎಂದು ರವಿಕೃಷ್ಣಾರೆಡ್ಡಿ ಬೇಸರ ವ್ಯಕ್ತಪಡಿಸಿ ಘಟನೆ ಬಗ್ಗೆ ವಿವರಿಸಿದರು.
ರವಿಕೃಷ್ಣಾರೆಡ್ಡಿಗೆ ಯಾತ್ರೆ ಮುಂದುವರೆಸಲಾಗದ ಪರಿಣಾಮ ಪಕ್ಷದ ಕಾರ್ಯಕರ್ತರು ರಾಜ್ಯಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಐದನೇ ದಿನದಿಂದ ಚಲಿಸು ಕರ್ನಾಟಕ ಯಾತ್ರೆಯನ್ನು ತಾತ್ಕಾಲಿಕ ನಿಲ್ಲಿಸಿ ಮುಂದೂಡುವ ತೀರ್ಮಾನ ಕೈಗೊಂಡಿದ್ದಾರೆ.
ಕಳೆದ ನಾಲ್ಕು ದಿನಗಳ ಯಾತ್ರೆಯಲ್ಲಿ 235 ಕಿ.ಮೀ. ದೂರ ಕ್ರಮಿಸಿ ಹಾರೋಹಳ್ಳಿ ತಲುಪಲಾಗಿತ್ತು. ಅಪಘಾತವಾದಾಗ 215 ಕಿ.ಮೀ. ಕ್ರಮಿಸಲಾಗಿತ್ತು. ತಮ್ಮಿಂದಾಗಿ ಯಾತ್ರೆ ನಿಲ್ಲುವ ಪರಿಸ್ಥಿತಿ ಬಂದಿದ್ದು ನೋವುಂಟು ಮಾಡಿದೆ ಎಂದು ರವಿಕೃಷ್ಣಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದು, ಕೋವಿಡ್ ಫಲಿತಾಂಶದ ನಿರೀಕ್ಷೆಯಲ್ಲಿ ಕೆಆರ್.ಎಸ್ ರಾಜ್ಯಾಧ್ಯಕ್ಷರಿದ್ದಾರೆ.
ಈ ಎಲ್ಲಾ ಅನಿಶ್ಚಿತತೆ ಮತ್ತು ಸಮಸ್ಯೆಗಳ ನಡುವೆ ಪಕ್ಷದ ಚಟುವಟಿಕೆಗಳು ಮುಂದುವರೆಯಬೇಕಾಗಿದೆ. ರಾಜ್ಯ ಕಾರ್ಯಕಾರಿ ಸಮಿತಿಯು ಸಂದರ್ಭಾನುಸಾರ ಕೆಲವು ತೀರ್ಮಾನಗಳನ್ನು ತೆಗೆದುಕೊಂಡು ಕಾರ್ಯ ನಿಭಾಯಿಸಲಿದ್ದಾರೆ. ತಾವು ಸಹ ಒಂದೆರಡು ವಾರದ ನಂತರ ವರ್ಚುವಲ್ ಸಭೆಗಳಲ್ಲಿ ಭಾಗವಹಿಸುವ ಆಶಾಭಾವನೆ ಹೊಂದಿದ್ದು, ಎಂದಿನಂತೆ ಫೇಸ್ಬುಕ್ ಮೂಲಕ ಸಂವಹನ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಲಾಗುವುದು. ಬರುವ ಫೋನ್ ಕರೆಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಾಗಲಿ ಅಥವಾ ಸಂದೇಶಗಳಿಗೆ ಉತ್ತರಿಸುವ ಸ್ಥಿತಿಯಲ್ಲಾಗಲಿ ಇಲ್ಲ ಎಂದು ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.
ಯುಎನ್ಐ ಯುಎಲ್ ಎಎಚ್ 1410