Wednesday, Oct 28 2020 | Time 16:12 Hrs(IST)
  • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
  • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
  • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
  • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
  • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
  • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
  • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
  • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
  • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
  • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
  • ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೇಲಿನ ನಿಷೇಧ ವಿಸ್ತರಣೆ
  • ಕಳ್ಳನ ಬಂಧನ: 8 37 ಲಕ್ಷ ಮೌಲ್ಯದ ಚಿನ್ನಾಭರಣ ವಶ
  • ಮತ್ತಿಬ್ಬರು ಐಸಿಸ್ ಶಂಕಿತರು ಎಎನ್ಐ ವಶಕ್ಕೆ
  • ರಾಜ್ಯ,ದೇಶದಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವುದು ಅಸಾಧ್ಯವಾಗಿದೆ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
  • ನವಂಬರ್ 5 ರಂದು ಮೂರು ರಫೇಲ್ ವಿಮಾನಗಳ ಆಗಮನ
National Share

ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ; ಮೋದಿ

ನವದೆಹಲಿ, ಸೆ 18 (ಯುಎನ್ಐ) ಕೃಷಿ ಸಂಬಂಧಿತ ಮಸೂದಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ದೇಶದ ಜನತೆಯ ದಾರಿ ತಪ್ಪಿಸುತ್ತಿದೆ ಎಂದು ಶುಕ್ರವಾರ ಗಂಭೀರ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಂಬಂಧ ರೈತ ಸಮುದಾಯಗಳು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋಸಿ ರೈಲು ಮೆಗಾ ಸೇತುವೆ ಲೋಕಾರ್ಪಣೆಗೊಳಿಸಿದ ಮೋದಿ, "ಹೊಸ ಕೃಷಿ ಮಸೂದೆ ಕ್ರಾಂತಿಕಾರಿಯಾಗಿದೆ. ಇನ್ನು ಮುಂದೆ ನನ್ನ ರೈತ ಸಹೋದರ ಮತ್ತು ಸಹೋದರಿಯರು ಕೇವಲ ಕೆಲವರಿಗೆ ಮಾತ್ರ ತಮ್ಮ ಉತ್ಪನ್ನ ಮಾರಾಟ ಮಾಡಲು ಪರದಾಡಬೇಕಿಲ್ಲ. ಈ ಮಸೂದೆಗಳನ್ನು ಜಾರಿಗೊಳಿಸಿದ ನಂತರ, ಅವರು ಲಭ್ಯವಿರುವ ಉತ್ತಮ ದರದಲ್ಲಿ ಯಾರಿಗೆ ಬೇಕಾದರೂ ಬೆಳೆಗಳನ್ನು ಮಾರಾಟ ಮಾಡಬಹುದು. ದೇಶದ ಯಾವುದೇ ಮೂಲೆಯ ಮಾರುಕಟ್ಟೆಗೆ ಕೂಡ ಬೆಳೆಯನ್ನು ರವಾನಿಸಬಹುದು" ಎಂದರು.
ವಿಪಕ್ಷ ಕಾಂಗ್ರೆಸ್‌ ಅನ್ನು ಉಲ್ಲೇಖಿಸಿದ ಮೋದಿ, "ಆದರೆ, ದೇಶವನ್ನು ದಶಕಗಳ ಕಾಲ ಆಳಿದ ಜನರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ" ಎಂದು ಆರೋಪಿಸಿದರು.
ಸರ್ಕಾರ ಲೋಕಸಭೆಯಲ್ಲಿ ಗುರುವಾರ 'ರೈತರ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ಸೌಲಭ್ಯ) ಮಸೂದೆ 2020' ಮತ್ತು ರೈತರು (ಸಬಲೀಕರಣ ಮತ್ತು ರಕ್ಷಣೆ) ದರದ ಖಾತರಿಯ ಒಪ್ಪಂದ ಮತ್ತು ರೈತರ ಸೇವಾ ಮಸೂದೆ 2020 ಅನ್ನು ಮಂಡಿಸಿತ್ತು.
ಈ ಮಸೂದೆ ರೈತರಿಗೆ ರಕ್ಷಣಾ ಕವಚವಾಗಲಿದೆ. ಅವರಿಗೆ ಈಗ ತಮ್ಮ ಬೆಲೆಗಳ ಮಾರಾಟದ ಆಯ್ಕೆ ಮತ್ತು ಅವಕಾಶಗಳಿವೆ. ಮಧ್ಯವರ್ತಿಗಳಿಂದ ಈ ರಕ್ಷಣೆ ನೀಡುವುದು ಅನಿವಾರ್ಯವಾಗಿತ್ತು ಎಂದರು.
ಪ್ರಧಾನ ಮಂತ್ರಿ ಕಿಸಾನ್‌ ಕಲ್ಯಾಣ್‌ ಯೋಜನೆಯಡಿ 1 ಲಕ್ಷ ಜನರಿಗೆ 10 ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ದೇಶಾದ್ಯಂತ ಆಹಾರ ಸಂಸ್ಕರಣಾ ಕೇಂದ್ರಗಳು ಮತ್ತು ಶೀತಲ ಸಂಗ್ರಹಣಾ ಸಂಪರ್ಕ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.
ಯುಎನ್ಐ ಎಸ್ಎಚ್ 1603
More News
ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

28 Oct 2020 | 3:32 PM

ನವದೆಹಲಿ, ಅ 28 (ಯುಎನ್‍ಐ) ದೇಶದ ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 Sharesee more..
ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

27 Oct 2020 | 9:18 PM

ನವದೆಹಲಿ, ಅ 27 (ಯುಎನ್ಐ) ಫೇಸ್ ಬುಕ್ ಕಾರ್ಯಾಚರಣೆಗಳ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರದೇಶಗಳ ಸಾರ್ವಜನಿಕ ನೀತಿಗಳ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಆಂಖಿ ದಾಸ್ ಮಂಗಳವಾರ ಫೇಸ್ ಬುಕ್ ಕಂಪನಿಗೆ ರಾಜಿನಾಮೆ ನೀಡಿದ್ದಾರೆ.

 Sharesee more..
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಪೊಂಪಿಯೊ, ಎಸ್ಪೆರ್

ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಪೊಂಪಿಯೊ, ಎಸ್ಪೆರ್

27 Oct 2020 | 9:06 PM

ನವದೆಹಲಿ, ಅ 27 (ಯುಎನ್‌ಐ) ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಭಾರತದೊಂದಿಗೆ ಸದೃಢ ಸಂಬಂಧವನ್ನು ಬೆಳೆಸುವಲ್ಲಿ ಹಾಗೂ ಪರಸ್ಪರ ಗುರಿ ಮತ್ತು ದೂರದೃಷ್ಟಿಗಳು ಸಕಾರಗೊಳ್ಳಲು ಒಟ್ಟಾಗಿ ಕಾರ್ಯನಿರ್ವಹಿಸುವ ಟ್ರಂಪ್ ಆಡಳಿತದ ನಿರಂತರ ಆಸಕ್ತಿಯ ಬಗ್ಗೆ ವಿವರಿಸಿದ್ದಾರೆ.

 Sharesee more..