ಹೈದರಾಬಾದ್ , ಡಿ 4 (ಯುಎನ್ಐ) ಹೈದರಾಬಾದ್ ಗ್ರೇಟರ್ ಮುನ್ಸಿ ಪಲ್ ಕಾರ್ಫೋರೆಷನ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡ ಹಿನ್ನಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಉತ್ತಮ್ ಕುಮಾರ್ ರೆಡ್ಡಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
56 ವಾರ್ಡ್ ಗಳಲ್ಲಿ ಟಿ ಆರ್ ಎಸ್ ಗೆಲುವು ಸಾಧಿಸಿದ್ದರೆ , ಬಿಜೆಪಿ 47 , ಎಐಎಮ್ಐಎಮ್ 42 ವಾರ್ಡ್ ಗಳಲ್ಲಿ ಗೆಲವು ಸಾಧಿಸಿದೆ. ಕಳಪೆ ಪ್ರದರ್ಶನ ಸಾಧಿಸಿರುವ ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮಾತ್ರ ಗೆಲವು ಸಾಧಿಸಿದೆ. 150 ವಾರ್ಡ್ ಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಳದೆ 2 ರಂದು ಮತದಾನ ನಡೆದಿತ್ತು.
ಈ ಚುನಾವಣೆಯನ್ನು ಬಿಜೆಪಿ ಬಹಳ ಪ್ರಮುಖವಾಗಿ ಪರಿಘಣಿಸಿತ್ತು ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಚುನಾವಣಾ ಪ್ರಚಾರಕ್ಕೆ ಧುಮುಕಿ ಅಚ್ಚರಿಗೂ ಕಾರಣವಾಗಿದ್ದರು.
ಯುಎನ್ಐ ಕೆಎಸ್ಆರ್ 2044