Thursday, Jan 21 2021 | Time 04:51 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
National Share

ಕೇಂದ್ರದ ವಿರುದ್ಧ ಸಿಡಿದೆದ್ದ ಅನ್ನದಾತ- ಡಿ 8 ರಂದು ಭಾರತ್ ಬಂದ್ ಗೆ ಕರೆ

ನವದೆಹಲಿ, ಡಿ 4 (ಯುಎನ್ಐ) ಕೇಂದ್ರದ ಕೃಷಿ ಸುಧಾರಣಾ ತಿದ್ದುಪಡಿ ಕಾಯಿದೆಗಳ ವಿರುದ್ಧ ಸಿಡಿದಿರುವ ವಿವಿಧ ರೈತ ಸಂಘಟನೆಗಳ ನಾಯಕರು ಬರುವ ಮಂಗಳವಾರ 8 ರಂದು 'ಭಾರತ್ ಬಂದ್ ನಡೆಸಲು ತೀರ್ಮಾನಿಸಿದ್ದಾರೆ.
ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕೆಂದು ಬಿಗಿಪಟ್ಟು ಹಾಕಿದ್ದಾರೆ ಇದರೊಂದಿಗೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಡಿ.8ಕ್ಕೆ ಭಾರತ್ ಬಂದ್ ಗೆ ಕರೆ ನೀಡಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಹರ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಪ್ರತಿಭಟನೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲೇಬೇಕಿದೆ. ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯಿದೆ ರದ್ದುಪಡಿಸಬೇಕು ಅಲ್ಲಿಯವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನಾಮ್ ಮೊಲ್ಲಾ ಹೇಳಿದ್ದಾರೆ.
ಒಂದು ವೇಳೆ ಸರ್ಕಾರ ನಾಳೆ ನಡೆಯಲಿರುವ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸದಿದ್ದರೆ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ನಾಯಕ ಛದೋನಿ ಸಹ ಎಚ್ಚರಿಕೆ ನೀಡಿದ್ದಾರೆ.ಈಗಾಗಲೇ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಮಾತುಕತೆಗಳು ನಡೆದಿದ್ದರೂ ಫಲಪ್ರದವಾಗಿಲ್ಲ. ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪಲು ತಯಾರಿಲ್ಲ. ಇತ್ತ ರೈತರು ಸಹ ತಮ್ಮ ನಿಲುವನ್ನು ಬಿಟ್ಟುಕೊಡುತ್ತಿಲ್ಲ.
ಸರ್ಕಾರದ ಪರವಾಗಿ ರೈತರ ಜತೆ ಮಾತನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಎಲ್ಲರ ಸಲಹೆಗಳನ್ನು ಸರ್ಕಾರದೊಂದಿಗೆ ಚರ್ಚಿಸಿ, ಮುಕ್ತ ಮನಸ್ಸಿನಿಂದ ಪರಿಗಣಿಸಲಾಗುವುದು ಭರವಸೆ ನೀಡಿದ್ದರು ಕೃಷಿ ಕಾನೂನುಗಳಲ್ಲಿ ಸಾಕಷ್ಟು ದೋಷಗಳಿವೆ. ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ರೈತರು ಬಿಗಿಪಟ್ಟು ಹಿಡಿದಿದ್ದಾರೆ. ನಾಳಿನ ಸಭೆಯಲ್ಲಿ ರೈತರ ಬೇಡಿಕೆ ಬಗ್ಗೆ ಸರ್ಕಾರ ಖಚಿತ ತೀರ್ಮಾನ ಪ್ರಕಟಿಸಬಹುದು ಎಂಬ ಆಶಯ ಗರಿಕೆದರಿದೆ.
ಯುಎನ್ಐ ಕೆಎಸ್ಆರ್ 2138