Saturday, Dec 5 2020 | Time 02:00 Hrs(IST)
Karnataka Share

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮತ್ತೊಮ್ಮೆ ಸಿಬಿಐ ಸಮನ್ಸ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮತ್ತೊಮ್ಮೆ ಸಿಬಿಐ ಸಮನ್ಸ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮತ್ತೊಮ್ಮೆ ಸಿಬಿಐ ಸಮನ್ಸ್

ಬೆಂಗಳೂರು, ನ.21(ಯುಎನ್ಐ) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.

ಬೆಂಗಳೂರಿನಲ್ಲಿಂದು ಈ ಬಗ್ಗೆ ತಿಳಿಸಿದ ಶಿವಕುಮಾರ್, ಬೆಂಗಳೂರು ಸಿಬಿಐ ಕಚೇರಿಯಿಂದ ಅಕ್ಟೋಬರ್ 5 ರಂದು ತಮ್ಮ ನಿವಾಸದ ಮೇಲೆ ನಡೆದಿದ್ದ ದಾಳಿ ಸಂಬಂಧ ತಮಗೆ ನ.19 ರಂದು ಸಮನ್ಸ್ ಜಾರಿಯಾಗಿರುವುದು ನಿಜ. ನವೆಂಬರ್ 23 ರಂದು ಹಾಜರಾಗಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಸಿಬಿಐ ನೋಟಿಸ್ ಸಮನ್ಸ್ ನೀಡಿದೆ. ನ.19ರಂದು ಮಗಳ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರಿಂದ ಸಿಬಿಐ ಕಚೇರಿಗೆ ಹಾಜರಾಗಲಾಗಲಿಲ್ಲ ಹಾಗೂ ನ.22 ರಿಂದ ತಾವು ಉತ್ತರ ಕರ್ನಾಟಕ ಪ್ರವಾಸದಲ್ಲಿರುವುದರಿಂದ ಅಂದು ಕೂಡ ಹಾಜರಾಗಲು ಆಗುವುದಿಲ್ಲ. ಅದರ ಬದಲಾಗಿ ನ.25 ರಂದು ಸಂಜೆ 4 ಗಂಟೆಗೆ ಸಿಬಿಐ ಕಚೇರಿ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿದ್ದು ಇದಕ್ಕೆ ಸಿಬಿಐ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.

ಯುಎನ್ಐ ಯುಎಲ್ ಎಎಚ್ 1226

More News
6 ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ; ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಆದೇಶ

6 ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ; ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಆದೇಶ

04 Dec 2020 | 9:12 PM

ಬೆಂಗಳೂರು, ಡಿ 4 (ಯುಎನ್ಐ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಹಸಿರು ನಿಶಾನೆ ತೋರಿರುವ ಹೈಕೋರ್ಟ್‌, ಹಿಂದಿನಂತೆ 198 ವಾರ್ಡ್‌ಗಳಿಗೆ ಆರು ವಾರಗಳಲ್ಲಿ ಚುನಾವಣೆ ನಡೆಸುವಂತೆ ಮಹತ್ವದ ಆದೇಶ ಹೊರಡಿಸಿದೆ.

 Sharesee more..