EntertainmentPosted at: Nov 22 2019 3:57PM Shareಕ್ರಿಕೆಟ್ ತರಬೇತಿ ಪಡೆಯುತ್ತಿರುವ ಶಾಹಿದ್ಮುಂಬೈ, ನ 22 (ಯುಎನ್ಐ) ಬಾಲಿವುಡ್ ಚಾಕಲೇಟ್ ಹೀರೋ ಶಾಹಿದ್ ಕಪೂರ್ ತಮ್ಮ ಮುಂಬರುವ ಚಿತ್ರಕ್ಕಾಗಿ ಭಾರಿ ಕಸರತ್ತು ನಡೆಸಿದ್ದು, ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ತೆಲುಗಿನ 'ಜೆರ್ಸಿ' ರಿಮೇಕ್ ನಲ್ಲಿ ಶಾಹಿದ್ ನಟಿಸುತ್ತಿದ್ದು, ಹಿಂದಿ ಚಿತ್ರಕ್ಕೂ ಜೆರ್ಸಿ ಎಂದೇ ನಾಮಕರಣ ಮಾಡಲಾಗಿದೆ.ಕಳೆದ ಬಾರಿ ಶಾಹಿದ್, ತೆಲುಗಿನ 'ಅರ್ಜುನ್ ರೆಡ್ಡಿ' ಹಿಂದಿ ರಿಮೇಕ್ 'ಕಬೀರ್ ಸಿಂಗ್ ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಹಿಂದಿಯ 'ಜರ್ಸಿ' ಚಿತ್ರದಲ್ಲಿ ಶಾಹಿದ್, ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತಮ್ಮ ಪಾತ್ರಕ್ಕಾಗಿ ನ್ಯಾಯ ಒದಗಿಸಲು ಚಿತ್ರೀಕರಣ ಆರಂಭವಾಗುವುದಕ್ಕಿಂತ ಮುಂಚೆಯೇ ಅವರು ಕ್ರಿಕೆಟ್ ಕಲಿಯಲು ಮಗ್ನರಾಗಿದ್ದಾರೆ. ಈ ಚಿತ್ರಕ್ಕೂ ಮುನ್ನ ಶಾಹಿದ್ , 'ದಿಲ್ ಬೋಲೆ ಹಡಿಪ್ಪಾ' ಚಿತ್ರದಲ್ಲಿಯೂ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದರು. 30 ನೇ ವರ್ಷದಲ್ಲಿಯೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆಟಗಾರನೋರ್ವ ನಡೆಸುವ ಕಸರತ್ತೇ ಜರ್ಸಿ ಚಿತ್ರದ ಕಥಾವಸ್ತು. 'ಸೂಪರ್ 30' ಚಿತ್ರದಲ್ಲಿ ಅಭಿನಯಿಸಿದ ಮೃಣಾಲ್ ಠಾಕೂರ್ ಈ ಚಿತ್ರದಲ್ಲಿ ಶಾಹಿದ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಯುಎನ್ಐ ಪಿಕೆ ಎಎಚ್ 1555