SportsPosted at: Jan 20 2021 8:20PM Shareಕಾರ್ತಿಕ್, ರಸ್ಸೆಲ್, ನರೈನ್ ರನ್ನು ಉಳಿಸಿಕೊಂಡ ಕೆಕೆಆರ್, ಐದು ಆಟಗಾರರ ಬಿಡುಗಡೆನವದೆಹಲಿ, ಜ.20 (ಯುಎನ್ಐ)- ಐಪಿಎಲ್ 2021 ಋತುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮಾಜಿ ನಾಯಕ ದಿನೇಶ್ ಕಾರ್ತಿಕ್, ವೆಸ್ಟ್ ಇಂಡೀಸ್ ಆಲ್ರೌಂಡರ್ ಆಂಡ್ರೆ ರಸ್ಸೆಲ್ ಮತ್ತು ಸ್ಪಿನ್ ಬೌಲರ್ ಸುನಿಲ್ ನರೈನ್ ಅವರನ್ನು ಉಳಿಸಿಕೊಂಡಿದೆ. ಕೋಲ್ಕತಾ ಐದು ಆಟಗಾರರನ್ನು ಬಿಡುಗಡೆ ಮಾಡಿದೆ ಮತ್ತು ಈಗ 17 ಸದಸ್ಯರ ತಂಡದೊಂದಿಗೆ ತಂಡ ಹರಾಜಿನಲ್ಲಿ ಭಾಗಿಯಾಗಲಿದೆ. ಎರಡು ಬಾರಿ ವಿಜೇತ ಕೋಲ್ಕತಾ ಟಾಮ್ ಬೆಂಟನ್ ಮತ್ತು ಕ್ರಿಸ್ ಗ್ರೀನ್ ಅವರನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಆಟಗಾರರು: ಎಂ ಸಿದ್ಧಾರ್ಥ್, ನಿಖಿಲ್ ನಾಯಕ್, ಸಿದ್ಧೇಶ್ ಲಾಡ್, ಕ್ರಿಸ್ ಗ್ರೀನ್ ಮತ್ತು ಟಾಮ್ ಬೆಂಟನ್ ಉಳಿಸಿಕೊಂಡ ಆಟಗಾರರು: ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಗೌರ್ಡ್ ಫರ್ಗುಸನ್, ನಿತೀಶ್ ರಾಣಾ, ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಭಮನ್ ಗಿಲ್, ಸುನಿಲ್ ನಾರಾಯಣ್, ಇಯಾನ್ ಮೊರ್ಗಾನ್ (ನಾಯಕ) ಮತ್ತು ವರುಣ್ ಚಕ್ರವರ್ತಿ. ಯುಎನ್ಐ ವಿಎನ್ಎಲ್ 2020