Health -LifestylePosted at: Dec 2 2020 12:15PM Shareಕೊರೋನಾ : ಗುಜರಾತ್ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ನಿಧನಚೆನ್ನೈ, ಡಿ 02 (ಯುಎನ್ಐ) ಪೋಸ್ಟ್ ಕೋವಿಡ್ 19 ತೀವ್ರ ನ್ಯುಮೋನಿಯಾದಿಂದಾಗಿ ರಾಜ್ಯಸಭೆ ಗುಜರಾತ್ ಸದಸ್ಯ ಅಭಯ್ ಭಾರದ್ವಾಜ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಂಗಳವಾರ ಸಂಜೆ ವಿಧಿವಶರಾಗಿದ್ದಾಗಿ, ಎಂಜಿಎಂ ಹೆಲ್ತ್ಕೇರ್ ಹೊರಡಿಸಿದ ಬುಲೆಟಿನ್ ತಿಳಿಸಿದೆ. ಅಕ್ಟೋಬರ್ 9ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಶ್ವಾಸಕೋಶಗಳು ಕೋವಿಡ್ ನಿಂದಾಗಿ ನಾಶವಾಗಿತ್ತು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ನರಳಿ, ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ಅವರ ಕುಟುಂಬಕ್ಕೆ ನಾವು ಹೃತ್ಪೂರ್ವಕ ಸಂತಾಪ ಸೂಚಿಸುತ್ತೇವೆ” ಎಂದು ಆಸ್ಪತ್ರೆಯ ಬುಲೆಟಿನ್ ಹೇಳಿದೆ. ಯುಎನ್ಐ ಎಸ್ಎ 1213