Sunday, Apr 5 2020 | Time 16:20 Hrs(IST)
 • ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಕಳುಹಿಸಿ; ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಮನವಿ
 • ಕರ್ಫ್ಯೂ ಉಲ್ಲಂಘಿಸಿದ ಆಟಗಾರನಿಗೆ 3 ತಿಂಗಳು ಗೃಹ ದಿಗ್ಬಂಧನ
 • ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಿಂದ ಥಾಯ್ಲೆಂಡ್, ಮಲೇಷ್ಯಾಅಮಾನತು
 • ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳ ಜತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
 • ಪಿಎಂ ಕೇರ್ಸ್ ನಿಧಿಗೆ ೧೦೦ ಕೋಟಿ, ಕರ್ನಾಟಕಕ್ಕೆ ೫ ಕೋಟಿ ನೆರವು ಪ್ರಕಟಿಸಿದ ಡಿಮಾರ್ಟ್
 • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
Karnataka Share

ಕೊರೋನಾ ತಡೆಗೆ 2 ಕೋಟಿ ರೂ ದೇಣಿಗೆ ನೀಡಿದ ಎಂಜಿ ಮೋಟಾರ್ ಇಂಡಿಯಾ

ಕೊರೋನಾ ತಡೆಗೆ 2 ಕೋಟಿ ರೂ ದೇಣಿಗೆ ನೀಡಿದ ಎಂಜಿ ಮೋಟಾರ್ ಇಂಡಿಯಾ
ಕೊರೋನಾ ತಡೆಗೆ 2 ಕೋಟಿ ರೂ ದೇಣಿಗೆ ನೀಡಿದ ಎಂಜಿ ಮೋಟಾರ್ ಇಂಡಿಯಾ

ಬೆಂಗಳೂರು, ಮಾ.25 (ಯುಎನ್ಐ) ಕೊರೊನಾ ಸೋಂಕು ಹರಡದಂತೆ ಸರ್ಕಾರದ ಜೊತೆ ಕೈಜೋಡಿಸಿ ಸಹಾಯ ಮಾಡುವ ಉದ್ದೇಶದಿಂದ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು 2 ಕೋಟಿ ರೂಪಾಯಿಯನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಒದಗಿಸಿದೆ.

ವೈಸರ್ ಹರಡುವಿಕೆ ಪ್ರಯತ್ನಕ್ಕೆ ಭಾರತ ಸರ್ಕಾರಕ್ಕೆ ಭಾರಿ ಸಂಪನ್ಮೂಲಗಳು ಬೇಕಾಗುತ್ತವೆ ಎಂದು ಸಂಸ್ಥೆಯು ಮನಗಂಡಿದೆ. ಸಾಮಾಜಿಕ ಜವಾಬ್ದಾರಿಯುತ ಸಂಘಟನೆಯಾಗಿ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಕಾರು ತಯಾರಕ ಸೌಲಭ್ಯಗಳು ಇರುವ ಗುರುಗ್ರಾಮ್ ಮತ್ತು ಹ್ಯಾಲೊಲ್ (ವಡೋದರಾ) ಪ್ರದೇಶದಲ್ಲಿರುವ ಆಸ್ಪತ್ರೆಗೆ ಈ ನೆರವು ನೀಡಿದೆ.

ವೈದ್ಯಕೀಯ ಸಿಬ್ಬಂದಿ ಮತ್ತು ಸಮಾಜದ ಹಿಂದುಳಿದ ವರ್ಗಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಈ ನೆರವು ಅನುಕೂಲಕಾರಿ.

1 ಕೋಟಿ ರೂ ಅನ್ನು ಸಂಸ್ಥೆಯು ಒದಗಿಸಿದೆ ಮತ್ತು ಉಳಿದ ಇನ್ನೊಂದು ಕೋಟಿ ರೂ ಅನ್ನು ಸಂಸ್ಥೆಯ ಉದ್ಯೋಗಿಗಳು ನೀಡಿದ್ದಾರೆ. ಗುರುಗ್ರಾಮ್ ಮತ್ತು ಹ್ಯಾಲೊಲ್ (ವಡೋದ್ರಾ) ದಲ್ಲಿ ವೈದ್ಯಕೀಯ ನೆರವು ನೀಡುವ ನಿರ್ದಿಷ್ಟ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಸಂಸ್ಥೆಗಳ ಅಗತ್ಯಕ್ಕೆ ಅನುಗುಣವಾಗಿ ಹ್ಯಾಂಡ್ ಗ್ಲೋಸ್ ಗಳು, ಮಾಸ್ಕ್, ವೆಂಟಿಲೇಟರ್‌ಗಳು, ಔಷಧಿಗಳು ಮತ್ತು ಹಾಸಿಗೆಗಳು ಈ ನೆರವಿನಲ್ಲಿ ಒಳಗೊಂಡಿದೆ.

ಮಾರಾಟಗಾರರು ಮತ್ತು ಕಾರ್ಯಾಗಾರಗಳಲ್ಲಿ ಸಿಬ್ಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಬಗೆಗಿನ ಅದರ ಬದ್ಧತೆಯ ಭಾಗವಾಗಿ ಕಾರು ತಯಾರಕರು ದೇಶಾದ್ಯಂತ ತಮ್ಮ 5000 ಉದ್ಯೋಗಿಗಳಿಗೆ ವರ್ಧಿತ ವಿಮಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಿತರಕರನ್ನು ಸನ್ಮಾನಿಸುತ್ತಿದ್ದಾರೆ ಮತ್ತು ಸಲಹೆ ನೀಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಯುಎನ್ಐ ಎಎಚ್ 2006

More News