Friday, May 29 2020 | Time 14:52 Hrs(IST)
 • ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ- ಬಿ ಸಿ ಪಾಟೀಲ್
 • ಕೊರೋನ ಸೋಂಕಿತ ದೇಶಗಳ ಪೈಕಿ ಈಗ ಭಾರತಕ್ಕೆ 9 ನೆ ಸ್ಥಾನ
 • ಸಂತೋಷ್, ಯೋಗೇಶ್ವರ್‌ಗೆ ಪಟ್ಟ , ಬಿಜೆಪಿಯಲ್ಲಿ ಭುಗಿಲೆದ್ದ ಶಾಸಕರ ಆಕ್ರೋಶ
 • ಚಿತ್ರರಂಗಕ್ಕೆ ಅನುದಾನ ನೀಡುವಂತೆ ಸಿಎಂಗೆ ಮನವಿ: ಜೈರಾಜ್
 • ರೆಬಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ "ಬ್ಯಾಡ್ ಮ್ಯಾನರ್ಸ್" ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ
 • ಅಕ್ರಮ ಕಲ್ಲು ಗಣಿಗಾರಿಗೆ ತಡೆಗಟ್ಟಲು ಡ್ರೋನ್ ಸರ್ವೆಗೆ ಮುಖ್ಯಮಂತ್ರಿ ಸೂಚನೆ
 • ಸಂತೋಷ್ , ಯೋಗೇಶ್ವರ್ ಗೆ ಪಟ್ಟ , ಬಿಜೆಪಿಯಲ್ಲಿ ಭುಗಿಲೆದ್ದ ಶಾಸಕರ ಆಕ್ರೋಶ
 • ಹಿರಿಯ ನಾಗರಿಕ ಸಂಚಾರಕ್ಕೆ ನಿರ್ಬಂಧ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
 • ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೋರಿ ಸಿಎಂ ಭೇಟಿಯಾದ ನಿಯೋಗ
 • ಬಂಡಾಯವೆದ್ದಿಲ್ಲ, ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ; ಯತ್ನಾಳ ಸ್ಪಷ್ಟನೆ
 • ಭಾರತದಲ್ಲಿ ವಿಶ್ವದ ಅತಿದೊಡ್ಡ ಕೊರೊನಾ ಪರೀಕ್ಷಾ ಪ್ರಯೋಗಾಲಯ
 • ರೆಬೆಲ್‌ ಸ್ಟಾರ್ ಅಂಬರೀಶ್ ಜನ್ಮದಿನ: ಮುಖ್ಯಮಂತ್ರಿ, ಗಣ್ಯರಿಂದ ಗೌರವ ನಮನ
 • 58 ಕಾರ್ಮಿಕರ ಜೀವ ಉಳಿಸಿದ ಸಾಮಾಜಿಕ ಜಾಲತಾಣ
 • ಡ್ರಗ್ಸ್ ಮಾರಾಟ ದಂಧೆ: ನೈಜೀರಿಯಾ ಪ್ರಜೆಯ ಬಂಧನವನ್ನು ಎತ್ತಿಹಿಡಿದ ಹೈಕೋರ್ಟ್‌
 • ವಂದೇ ಭಾರತ್ ಮಿಷನ್: 45 ಸಾವಿರ ಭಾರತೀಯರು ತವರಿಗೆ
Entertainment Share

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್
ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಪುಣೆ, ಏ ೬(ಯುಎನ್‌ಐ) ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

ಪ್ರಸ್ತುತ ತಮ್ಮ ಪನ್ವೇಲ್ ತೋಟದ ಮನೆಯಲ್ಲಿರುವ ಸಲ್ಮಾನ್ ಖಾನ್, ಸಹೋದರ ಸೋಹಿಲ್ ಖಾನ್ ಪುತ್ರ ನಿರ್ವಾನ್ ನೊಂದಿಗೆ ಟ್ವೀಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತೋಟದ ಮನೆಗೆ ತೆರಳಿದ್ದೆವು. ದೇಶಾದ್ಯಂತ ಲಾಕ್ ಡೌನ್ ಘೋಷಣೆಯಿಂದಾಗಿ ಅಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ನಮಗೂ ಭಯವಾಗಿದೆ. ಮೂರು ವಾರಗಳಿಂದ ನನ್ನ ಅಪ್ಪನನ್ನು ನೋಡಲು ಸಾಧ್ಯವಾಗಿಲ್ಲ. ನಾವು ಇಲ್ಲಿದ್ದೇವೆ. ಅವರು ಮನೆಯಲ್ಲಿ ಒಬ್ಬರೇ ಇದ್ದಾರೆ ಎಂದು ವಿಡಿಯೋದಲ್ಲಿ ಸಲ್ಮಾನ್ ಖಾನ್ ಹೇಳಿದ್ದಾರೆ.

ಬಾಲಿವುಡ್ ಹಳೆಯ ಜನಪ್ರಿಯ “ಶೋಲೆ” ಚಿತ್ರಕ್ಕೆ ತಮ್ಮ ತಂದೆ ಸಲೀಂ ಹಾಗೂ ಜಾವೆದ್ ಅಖ್ತರ್ ಬರೆದಿದ್ದ ಸಂಭಾಷಣೆಯನ್ನು ಸಲ್ಮಾನ್ ಖಾನ್ ಉಚ್ಚರಿಸಿದ್ದು, “ಜೋ ಡರ್ ಗಯಾ ಸಮ್ ಜೋ ಮರ್ ಗಯಾ” ಸಂಭಾಷಣೆ ನೆನಪಿಗೆ ಬರುತ್ತಿದೆ. ಸಂಭಾಷಣೆ ನಾವಿರುವ ಪರಿಸ್ಥಿತಿಗೆ ಹೊಂದಿಕೆಯಾಗಿದ್ದರೂ, ನಾವು ಭಯಭೀತರಾಗಿದ್ದೇವೆ ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಅಷ್ಟೊಂದು ಧೈರ್ಯವಾಗಿರಬೇಡಿ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಜೋ ಡರ್ ಗಯಾ ಸಂಜೋ ವೋ ಬಚ್ಚ್ ಗಯಾ( ಭಯಪಡುವವನು ಉಳಿದುಕೊಳ್ಳುತ್ತಾನೆ) ಎಂಬ ಸಂಭಾಷಣೆ ಸಂದರ್ಭಕ್ಕೆ ಸೂಕ್ತ ವಾಗಿದೆ ಎಂದು ೫೪ ವರ್ಷದ ಸಲ್ಮಾನ್ ಖಾನ್ ಹೇಳಿದ್ದಾರೆ.

ಯುಎನ್‌ಐ ಕೆವಿಆರ್ ೧೩೩೬