Wednesday, Oct 28 2020 | Time 16:27 Hrs(IST)
 • ಕೋವಿಡ್‍-19: 4 39 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ರಾಜ್ಯದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಕೆ
 • ಕಾಶ್ಮೀರದಲ್ಲಿ 370ನೇವಿಧಿ ರದ್ದಾದ ಮೇಲೆ ಏನು ಬದಲಾಗಿದೆ: ಶಿವಸೇನೆ ಪ್ರಶ್ನೆ
 • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
 • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
 • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
 • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
 • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
 • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
 • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
 • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
 • ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೇಲಿನ ನಿಷೇಧ ವಿಸ್ತರಣೆ
 • ಕಳ್ಳನ ಬಂಧನ: 8 37 ಲಕ್ಷ ಮೌಲ್ಯದ ಚಿನ್ನಾಭರಣ ವಶ
National Share

ಕೊವಿಡ್- ದೇಶದಲ್ಲಿ ಒಂದೇ ದಿನ ೯೬ ಸಾವಿರ ಪ್ರಕರಣಗಳು ವರದಿ, ೫೨ ಲಕ್ಷ ದಾಟಿದ ಒಟ್ಟು ಸಂಖ್ಯೆ

ಕೊವಿಡ್- ದೇಶದಲ್ಲಿ ಒಂದೇ ದಿನ ೯೬ ಸಾವಿರ ಪ್ರಕರಣಗಳು ವರದಿ, ೫೨ ಲಕ್ಷ ದಾಟಿದ ಒಟ್ಟು ಸಂಖ್ಯೆ
ಕೊವಿಡ್- ದೇಶದಲ್ಲಿ ಒಂದೇ ದಿನ ೯೬ ಸಾವಿರ ಪ್ರಕರಣಗಳು ವರದಿ, ೫೨ ಲಕ್ಷ ದಾಟಿದ ಒಟ್ಟು ಸಂಖ್ಯೆ

ನವದೆಹಲಿ, ಸೆ ೧೮(ಯುಎನ್‌ಐ)- ದೇಶದಲ್ಲಿ ಶುಕ್ರವಾರ ಒಂದೇ ದಿನ ೯೬ ಸಾವಿರ ಹೊಸ ಕೊವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ೫೨ ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ ೨೪ ತಾಸಿನಲ್ಲಿ ಹೊಸ ೯೬,೪೨೪ ಪ್ರಕರಣಗಳ ಸೇರ್ಪಡೆಯೊಂದಿಗೆ ಸದ್ಯ, ಒಟ್ಟು ಪ್ರಕರಣಗಳ ಸಂಖ್ಯೆ ೫೨,೧೪,೬೭೮ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೧೦,೧೭,೭೫೪ರಷ್ಟಿದೆ.

ಕಳೆದ ೨೪ ತಾಸಿನಲ್ಲಿ ೮೭,೪೭೨ ಸೋಂಕಿತರು ಗುಣಮುಖರಾಗುವುದರೊಂದಿಗೆ ಒಟ್ಟು ಸಂಖ್ಯೆ ೪೧ ಲಕ್ಷ ದಾಟಿದೆ. ಸದ್ಯ, ಗುಣಮುಖರಾದವರ ಸಂಖ್ಯೆ ೪೧,೧೨,೫೫೨ರಷ್ಟಿದೆ.

ಕಳೆದ ೨೪ ತಾಸಿನಲ್ಲಿ ೧,೧೭೪ ಮಂದಿ ಸೋಂಕಿಗೆ ಬಲಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ೮೪,೩೭೨ಕ್ಕೆ ಏರಿದೆ ಎಂದು ಸರ್ಕಾರದ ಗುರುವಾರದ ಮಾಹಿತಿ ತಿಳಿಸಿದೆ.

ಸದ್ಯ, ಚೇತರಿಕೆ ಪ್ರಮಾಣ ಶೇ ೭೮.೮೬ರಷ್ಟಿದ್ದರೆ, ಸಾವಿನ ಪ್ರಮಾಣ ಶೇ ೧.೬೨ರಷ್ಟಿದೆ.

ಈ ಮಧ್ಯೆ, ಕಳೆದ ೨೪ ತಾಸಿನಲ್ಲಿ ೧೦,೦೬,೬೧೫ ಮಾದರಿಗಳನ್ನು ಪರೀಕ್ಷಿಸುವುದರೊಂದಿಗೆ ಒಟ್ಟು ಪರೀಕ್ಷೆಗಳ ಸಂಖ್ಯೆ ೬,೧೫,೭೨,೩೪೩ಕ್ಕೆ ಏರಿದೆ..

ಮಹಾರಾಷ್ಟ್ರ ಕೋವಿಡ್ ನಿಂದ ಹೆಚ್ಚು ಬಾಧಿತವಾಗಿದ್ದು, ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩ ಲಕ್ಷ ದಾಟಿದೆ.

ಜಾಗತಿಕವಾಗಿ ಅತಿಹೆಚ್ಚು ಬಾಧಿತವಾದ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಭಾರತ ಮತ್ತು ಬ್ರೆಜಿಲ್ ಇವೆ.

ಯುಎನ್‌ಐ ಎಸ್‌ಎಲ್‌ಎಸ್ ೧೩೫೧

More News
ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ

ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ

28 Oct 2020 | 3:51 PM

ಏಲೂರು, ಅ 28 (ಯುಎನ್‌ಐ) ಪಶ್ಚಿಮ ಗೋದಾವರಿ ಜಿಲ್ಲೆಯ ವೇಲೈರುಪಾಡು ಮಂಡಲದ ವಸಂತವಾಡ ಗ್ರಾಮದಲ್ಲಿ ಬುಧವಾರ ಈಜಲು ಹೋಗಿದ್ದ ಆರು ಬಾಲಕರು ಹೊಳೆಯಲ್ಲಿ ನೀರುಪಾಲಾಗಿದ್ದಾರೆ.

 Sharesee more..
ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

28 Oct 2020 | 3:32 PM

ನವದೆಹಲಿ, ಅ 28 (ಯುಎನ್‍ಐ) ದೇಶದ ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 Sharesee more..
ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

27 Oct 2020 | 9:18 PM

ನವದೆಹಲಿ, ಅ 27 (ಯುಎನ್ಐ) ಫೇಸ್ ಬುಕ್ ಕಾರ್ಯಾಚರಣೆಗಳ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರದೇಶಗಳ ಸಾರ್ವಜನಿಕ ನೀತಿಗಳ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಆಂಖಿ ದಾಸ್ ಮಂಗಳವಾರ ಫೇಸ್ ಬುಕ್ ಕಂಪನಿಗೆ ರಾಜಿನಾಮೆ ನೀಡಿದ್ದಾರೆ.

 Sharesee more..