Thursday, Jan 21 2021 | Time 04:53 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Health -Lifestyle Share

ಕೋವಿಡ್: ದೇಶದ ಸೋಂಕು ಪ್ರಕರಣ 24 ಗಂಟೆಯಲ್ಲಿ 35,551, ಚೇತರಿಕೆ ದರ ಶೇ 94.11

ಕೋವಿಡ್: ದೇಶದ ಸೋಂಕು ಪ್ರಕರಣ 24 ಗಂಟೆಯಲ್ಲಿ 35,551, ಚೇತರಿಕೆ ದರ ಶೇ 94.11
ಕೋವಿಡ್: ದೇಶದ ಸೋಂಕು ಪ್ರಕರಣ 24 ಗಂಟೆಯಲ್ಲಿ 35,551, ಚೇತರಿಕೆ ದರ ಶೇ 94.11

ನವದೆಹಲಿ, ಡಿ 03 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 35,551 ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಣ ತಿಳಿಸಿದೆ. ಇದರೊಂದಿಗೆದೇಶದ ಒಟ್ಟಾರೆ ಕೋವಿಡ್ ಪ್ರಕರಣವು 95 ಲಕ್ಷ ಮೀರಿದ್ದು, ಈ ಸಂಖ್ಯೆ 95,34,965ರಷ್ಟಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಕಳೆದ 24 ಗಂಟೆಗಳಲ್ಲಿ ಸಾಂಕ್ರಾಮಿಕ ರೋಗದಿಂದಾಗಿ 526 ಸಾವು ಸಂಭವಿಸಿದ್ದು, ಇದುವರೆಗಿನ ಸಾವಿನ ಸಂಖ್ಯೆ 1,38,648 ಕ್ಕೆ ತಲುಪಿದೆ.

ಕೊರೋನಾ ಸೋಂಕಿನ ಸಕ್ರಿಯ ಪ್ರಕರಣವು ಬುಧವಾರದಿಂದ 5,701 ರಷ್ಟು ಕುಸಿತ ಕಂಡುಬಂದಿದ್ದು, ಪ್ರಸ್ತುತ, ದೇಶವು 4,22,943 ಸಕ್ರಿಯ ಪ್ರಕರಣಗಳಿಗೆ ನೆಲೆಯಾಗಿದೆ.

ಏತನ್ಮಧ್ಯೆ, ಕಳೆದ ಒಂದು ದಿನದಲ್ಲಿ 40,726 ಕೋವಿಡ್ ರೋಗಿಗಳು ಗುಣಮುಖರಾಗಿದ್ದು, ಚೇತರಿಕೆಯ ಒಟ್ಟು ಸಂಖ್ಯೆ 89,73,373 ಕ್ಕೆ ಏರಿಕೆಯಾಗಿದೆ.

ಶೇಕಡಾವಾರು ಪ್ರಮಾಣದಲ್ಲಿ, ಸಕ್ರಿಯ ಪ್ರಕರಣಗಳು ಈಗ ಶೇಕಡಾ 4.44, ಗುಣಮುಖವಾಗಿ ಬಿಡುಗಡೆಯಾದ ಪ್ರಕರಣ 94.11 ಮತ್ತು ಕೋವಿಡ್ ನಿಂದ ಉಂಟಾದ ಸಾವು ಶೇ 1.45ರಷ್ಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಕೊರೋನಾ ಸೋಂಕು ಪತ್ತೆಗಾಗಿ 14,35,57,647 ಸಂಚಿತ ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.

ಯುಎನ್ಐ ಎಸ್‍ಎ 1140