Monday, Jan 18 2021 | Time 00:23 Hrs(IST)
Health -Lifestyle Share

ಕೋವಿಡ್: ಮಾರುಕಟ್ಟೆಗಳಲ್ಲಿ ಕಠಿಣ ನಿಯಮಕ್ಕೆ ಆರೋಗ್ಯ ಸಚಿವಾಲಯ ಸೂಚನೆ

ನವದೆಹಲಿ, ಡಿ 02 (ಯುಎನ್‍ಐ) ಕೊರೋನಾ ನಿಯಂತ್ರಿಸುವ ಸಲುವಾಗಿ ಮಾರುಕಟ್ಟೆಗಳಲ್ಲಿ ಕಠಿಣ ನಿಯಮ ಪಾಲಿಸುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ.
ಮಾಸ್ಕ್ ಧಾರಣೆ ಅಥವಾ ದೈಹಿಕ ಅಂತರದಂತಹ ಮಾನದಂಡಗಳನ್ನು ಅನುಸರಿಸದಿದ್ದಕ್ಕಾಗಿ ದಂಡ ವಿಧಿಸುವುದು, ಮಾರುಕಟ್ಟೆಗಳು ಹಾಗೂ ಅಂಗಡಿಗಳನ್ನು ಪರ್ಯಾಯ ದಿನಗಳಲ್ಲಿ ತೆರೆಯಲು ಅನುಮತಿಸುವ ದೇಶದಲ್ಲಿ ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ತಡೆಗಟ್ಟುವ ಕ್ರಮಗಳ ಕುರಿತು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ತಮ್ಮ ದೈನಂದಿನ ಅಗತ್ಯತೆಗಳು, ಶಾಪಿಂಗ್, ಮನರಂಜನೆ ಮತ್ತು ಆಹಾರ ಪದಾರ್ಥಗಳಿಗಾಗಿ ಹೆಚ್ಚಿನ ಸಂಖ್ಯೆಯ ಜನರು ಮಾರುಕಟ್ಟೆ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಮಾರುಕಟ್ಟೆಯು ಕೋವಿಡ್ ಸೋಂಕು ಹರಡುವ ತಾಣವಾಗದಂತೆ ಜಾಗ್ರತೆ ವಹಿಸಬೇಕು.
ಜನರು ಆದಷ್ಟು ಆನ್ ಲೈನ್ ಮುಖೇನ ತರಕಾರಿ ಮೊದಲಾದ ಪದಾರ್ಥಗಳನ್ನು ಮನೆಗೆ ತರಿಸಿಕೊಂಡಲ್ಲಿ ಸೋಂಕಿನಿಂದ ಆದಷ್ಟು ದೂರವಿರಬಹುದು. ರೈಲ್ವೆ ನಿಲ್ದಾಣಗಳಲ್ಲಿಯೂ ಜನರು ಗುಂಪುಗಟ್ಟದಂತೆ ನೋಡಿಕೊಳ್ಳಬೇಕು ಎಂದು ಸಚಿವಾಲಯ ಸೂಚಿಸಿದೆ.
ಯುಎನ್ಐ ಎಸ್‍ಎ 1648