Tuesday, Oct 20 2020 | Time 13:56 Hrs(IST)
 • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
 • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
 • ನಾಳೆ ಕೇಂದ್ರ ಸಂಪುಟ ಸಭೆ
 • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
 • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
 • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
 • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
 • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
 • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
 • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
 • ಸಿಎಸ್‌ಕೆ ಸೋಲಿನ ಬಳಿಕ ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾದ ಕೇದಾರ್ ಜಾಧವ್‌
 • ಮೂರು ತಿಂಗಳ ಚಳಿಗಾಲದಲ್ಲಿ ಮತ್ತಷ್ಟು ಕಾಡಲಿರುವ ಕೊರೋನ: ಎಚ್ಚರ, ಎಚ್ಚರ !!
 • ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವೂ ಇಳಿಕೆ
Sports Share

ಕೋವಿಡ್‌ ಹೀರೋಗಳಿಗೆ ಗೌರವ ಸೂಚಕ ಜೆರ್ಸಿ ತೊಡಲಿರುವ ಆರ್‌ಸಿಬಿ ಆಟಗಾರರು

ದುಬೈ, ಸೆ 18 (ಯುಎನ್‌ಐ) ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ಗೌರವ ಸಲ್ಲಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು 'ಮೈ ಕೋವಿಡ್ ಹೀರೋಸ್' ಎಂದು ಬರೆದಿರುವ ಐಪಿಎಲ್‌ ಜರ್ಸಿಗಳೊಂದಿಗೆ ಆಡಲಿದ್ದಾರೆ.
ಮಾರಣಾಂತಿಕ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವವರಿಗೆ ಗೌರವ ಸೂಚಿಸಲು "ಕೋವಿಡ್ ಹೀರೋಸ್" ಎಂಬ ಪದವನ್ನು ಪಂದ್ಯದ ಜೆರ್ಸಿ ಹಾಗೂ ತರಬೇತಿ ಜೆರ್ಸಿಗಳಲ್ಲಿ ಮುದ್ರಣ ಮಾಡಲಾಗಿದೆ ಎಂದು ಗುರುವಾರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಿಳಿಸಿದೆ.
"ಈ ಋತುವಿನ ಮೊದಲ ಆರ್‌ಸಿಬಿ ಪಂದ್ಯದ ಸಮಯದಲ್ಲಿ ಆಟಗಾರರು ಧರಿಸಿರುವ ಜರ್ಸಿಗಳ ಹರಾಜಿನಿಂದ ಬರುವ ಹಣವನ್ನು ದಾನ ಮಾಡುವ ಮೂಲಕ ಆರ್‌ಸಿಬಿ ಗಿವ್‌ಇಂಡಿಯಾ ಫೌಂಡೇಶನ್‌ಗೆ ಸಹಕರಿಸಲಿದೆ" ಎಂದು ಹೇಳಿಕೆ ತಿಳಿಸಿದೆ.
ಈ ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಆರ್‌ಸಿಬಿ ಮುಖ್ಯಸ್ಥ ಸಂಜೀವ್ ಚುರಿವಾಲಾ, ನಾಯಕ ವಿರಾಟ್ ಕೊಹ್ಲಿ, ಪಾರ್ಥಿವ್ ಪಟೇಲ್ ಮತ್ತು ಯುವ ಓಪನರ್ ದೇವದತ್ ಪಡಿಕ್ಕಲ್ ಭಾಗವಹಿಸಿದ್ದರು.
"ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವಾಗಲೂ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಧೈರ್ಯದಿಂದ ಆಡುವುದಕ್ಕಾಗಿ ನಿಂತಿದೆ ಮತ್ತು ಇದೀಗ ಈ ಕೋವಿಡ್ ಹೀರೋಗಳು ಹೆಚ್ಚಿನ ಉದ್ದೇಶಕ್ಕಾಗಿ ಪಟ್ಟುಬಿಡದೆ ಹೋರಾಡುವ ಮೂಲಕ ಈ ಉದ್ದೇಶವನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ನಾವು ನಂಬುತ್ತೇವೆ," ಎಂದು ಆರ್‌ಸಿಬಿ ಮುಖ್ಯಸ್ಥ ತಿಳಿಸಿದ್ದಾರೆ.
"ಮಾನವೀಯತೆಯು ಅನೇಕ ತಲೆಮಾರುಗಳಿಂದ ಅವರಿಗೆ ಕೃತಜ್ಞರಾಗಿರಬೇಕು ಮತ್ತು ಈ ಅಭಿಯಾನದ ಮೂಲಕ, ಮೈದಾನದಲ್ಲಿ ಮತ್ತು ಹೊರಗೆ ಅವರ ಸವಾಲಿನ ಮನೋಭಾವಕ್ಕೆ ಗೌರವ ಸಲ್ಲಿಸಿದವರಲ್ಲಿ ನಾವು ಮೊದಲಿಗರಾಗಬೇಕೆಂದು ನಾವು ಬಯಸಿದ್ದೇವೆ," ಎಂದು ಸಂಜೀವ್‌ ಚುರಿವಾಲಾ ಹೇಳಿದ್ದಾರೆ.
ಅತ್ಯುತ್ತಮ ಸಮತೋಲನದಿಂದ ಕೂಡಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಈ ಭಾರಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ತುಡಿತದಲ್ಲಿದೆ. ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಸೆ. 21 ರಂದು ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ಮೊದಲ ಪಂದ್ಯವಾಡಲಿದೆ.
ಯುಎನ್‌ಐ ಆರ್‌ಕೆ 1205