Health -LifestylePosted at: Dec 4 2020 1:14PM Shareಕೋವಿಡ್ 19: ದೇಶದಲ್ಲಿ ಒಂದೇ ದಿನ 36,594 ಪ್ರಕರಣ, ಚೇತರಿಕೆ ದರ ಶೇ 94.20ನವದೆಹಲಿ, ಡಿ 04 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 36,594 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ದೇಶದ ಒಟ್ಟಾರೆ ಕೋವಿಡ್ ಪ್ರಕರಣವು 95,71,559 ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದಾಗಿ 540ಕ್ಕೂ ಹೆಚ್ಚಿನ ಸಾವು ಸಂಭವಿಸಿದ್ದು, ಸಾವಿನ ಒಟ್ಟು ಸಂಖ್ಯೆ 1,39,188 ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನ ಸಕ್ರಿಯ ಪ್ರಕರಣಗಳು ಗುರುವಾರದಿಂದ 6,861 ರಷ್ಟು ಕುಸಿತ ಕಂಡುಬಂದಿದ್ದು, ಪ್ರಸ್ತುತ 4,16,082ರಷ್ಟಿದೆ. ಏತನ್ಮಧ್ಯೆ, ಕಳೆದ ಒಂದು ದಿನದಲ್ಲಿ 42,916 ಕೋವಿಡ್ ರೋಗಿಗಳು ಗುಣಮುಖರಾಗಿದ್ದು, ಚೇತರಿಕೆಯ ಸಂಖ್ಯೆ 90,16,289 ರಷ್ಟಿದೆ. ಶೇಕಡಾವಾರು ಪ್ರಮಾಣದಲ್ಲಿ, ಸಕ್ರಿಯ ಪ್ರಕರಣಗಳು ಶೇಕಡಾ 4.35, ಗುಣಮುಖರಾದವರ ಸಂಖ್ಯೆ ಶೇ 94.20, ಶೇಕಡಾ 1.45 ರಷ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಕೋವಿಡ್ ಸೋಂಕು ಪತ್ತೆಗಾಗಿ ಆರಂಭದಿಂ ದಇಲ್ಲಿಯವರೆಗೆ 14,47,27,749 ಸಂಚಿತ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಯುಎನ್ಐ ಎಸ್ಎ 1313