Saturday, Jul 11 2020 | Time 09:12 Hrs(IST)
Health -Lifestyle Share

ಕೋವಿಡ್ 19 : ದೇಶಾದ್ಯಂತ 5.5 ಲಕ್ಷ ಪ್ರಕರಣ, 16,475 ಸಾವು

ಕೋವಿಡ್ 19 : ದೇಶಾದ್ಯಂತ 5.5 ಲಕ್ಷ ಪ್ರಕರಣ, 16,475 ಸಾವು
ಕೋವಿಡ್ 19 : ದೇಶಾದ್ಯಂತ 5.5 ಲಕ್ಷ ಪ್ರಕರಣ, 16,475 ಸಾವು

ನವದೆಹಲಿ, ಜೂನ್ 29 (ಯುಎನ್‍ಐ) ದೇಶಾದ್ಯಂತ ಮಾರಕ ಕೋವಿಡ್ 19 ಸೋಂಕು ಪ್ರಕರಣ 5.5 ಲಕ್ಷಕ್ಕೇರಿದ್ದು, ಮೃತರ ಸಂಖ್ಯೆ 16,475ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ 19,459 ಪ್ರಕರಣಗಳ ತೀವ್ರ ಏರಿಕೆ ಕಂಡ ನಂತರ, ಭಾರತದ ಕೋವಿಡ್ -19 ಸಂಖ್ಯೆ 5.5 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಭಾನುವಾರದಿಂದ 380 ಸಾವುಗಳು ದಾಖಲಾದ ನಂತರ ದೇಶಾದ್ಯಂತ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 5,48,318 ಆಗಿದ್ದು, 16,475 ರೋಗಿಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ.

ಇದುವರೆಗೆ 3,21,723 ಕೋವಿಡ್ 19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ವಿರುದ್ಧ ದಿನದಿಂದ ದಿನಕ್ಕೆ ಸುಧಾರಿಸುತ್ತಿರುವ ಚೇತರಿಕೆ ದರವು ಪ್ರಸ್ತುತ ಶೇಕಡ 58.67 ರಷ್ಟಿದೆ.

ಭಾನುವಾರದವರೆಗೆ ದೇಶಾದ್ಯಂತ 82,98,362 ಮಾದರಿಗಳನ್ನು ವೈರಸ್‌ಗಾಗಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ.

ಯುಎನ್‍ಐ ಎಸ್‍ಎ ವಿಎನ್ 1121