Friday, Apr 10 2020 | Time 08:47 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Special Share

ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ

ಶ್ರೀನಗರ, ಫೆ.26 (ಯುಎನ್ಐ) ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮೂವರು ಉಗ್ರರ ಮನೆಗಳಿಗೆ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪುಲ್ವಾಮಾ ಜಿಲ್ಲೆಯ ಕರೀಮಾಬಾದ್ ಪ್ರದೇಶವನ್ನು ಮುಂಜಾನೆ ವಿವಿಧ ಭದ್ರತಾ ಸಂಸ್ಥೆಗಳ ಸಿಬ್ಬಂದಿ ಸುತ್ತುವರೆದಿದ್ದಾರೆ. ಸ್ಥಳದಲ್ಲಿ ಯಾವುದೇ ರೀತಿಯ ಪ್ರತಿಭಟನೆಯನ್ನು ತಡೆಯಲು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ನಂತರ, ಭದ್ರತಾ ಪಡೆಗಳು ಜಾಹಿದ್‌ ಮನೆ ಸೇರಿದಂತೆ ಮೂವರು ಉಗ್ರರ ಮನೆಗಳ ಮೇಲೆ ದಾಳಿ ನಡೆಸಿವೆ.
ಅಲ್ಲಿಂದ ಕೊನೆಯ ಬಾರಿಗೆ ವರದಿಗಳು ಬಂದಾಗ ದಾಳಿಗಳು ಮುಂದುವರಿದಿವೆ ಎಂದು ಅವರು ಹೇಳಿದರು.
ಮಂಗಳವಾರ ತಡರಾತ್ರಿ ಪುಲ್ವಾಮಾದ ಗುಲ್‌ಬುಗ್ ಪ್ರದೇಶದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರ ಸಂಘಟನೆಯ ತಳಮಟ್ಟದ ಕಾರ್ಯಕರ್ತನನ್ನು (ಒಜಿಡಬ್ಲ್ಯು) ಪೊಲೀಸರು ಬಂಧಿಸಿದ್ದರು. ಇದಾದ ಸುಮಾರು 24 ಗಂಟೆಗಳ ನಂತರ ಈ ದಾಳಿ ನಡೆಸಲಾಗಿದೆ.
ಈ ಕಾರ್ಯಕರ್ತರನ್ನು ರತ್ನಿಪೋರಾ ಪುಲ್ವಾಮಾ ನಿವಾಸಿ ಅಕ್ವಿಬ್ ಮಕ್ಬೂಲ್ ಲೋನ್ ಮತ್ತು ಗುಲ್ಬುಗ್ ಪುಲ್ವಾಮಾ ನಿವಾಸಿ ನಸೀರ್ ಅಹ್ಮದ್ ಹುರ್ರಾ ಎಂದು ಗುರುತಿಸಲಾಗಿದೆ.
ಪುಲ್ವಾಮಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ರಿಯ ಉಗ್ರರಿಗೆ ಸಹಾಯ ಮಾಡುವಲ್ಲಿ ಒಜಿಡಬ್ಲ್ಯುಗಳು ಭಾಗಿಯಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ಕಳೆದ ರಾತ್ರಿ ತಿಳಿಸಿದ್ದಾರೆ. ಸ್ಫೋಟಕ ವಸ್ತು ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯುಎನ್ಐ ಎಎಚ್ 1015
More News
ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

09 Apr 2020 | 3:51 PM

ಭುವನೇಶ್ವರ, ಏ.9 (ಯುಎನ್ಐ) ಒಡಿಸ್ಸಾ ಸರ್ಕಾರ ಕೋವಿಡ್‌ 19 ಲಾಕ್‌ಡೌನ್‌ ಅನ್ನು ಮತ್ತೆ ಏಪ್ರಿಲ್‌ 30ರವರೆಗೆ ವಿಸ್ತರಿಸಿದೆ. ಮಾತ್ರವಲ್ಲ ಏಪ್ರಿಲ್ 30ರವರೆಗೆ ವಿಮಾನ ಮತ್ತು ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

 Sharesee more..

J'khand records first COVID-19 death, positive cases reach 12

09 Apr 2020 | 9:53 AM

 Sharesee more..