Wednesday, Jul 15 2020 | Time 03:19 Hrs(IST)
National Share

ಕಾಶ್ಮೀರದಲ್ಲಿ ಹಿಮಪಾತದಿಂದ ಐವರು ಭದ್ರತಾ ಪಡೆ ಯೋಧರು ಹುತಾತ್ಮ

ಕಾಶ್ಮೀರದಲ್ಲಿ ಹಿಮಪಾತದಿಂದ ಐವರು ಭದ್ರತಾ ಪಡೆ ಯೋಧರು ಹುತಾತ್ಮ
ಕಾಶ್ಮೀರದಲ್ಲಿ ಹಿಮಪಾತದಿಂದ ಐವರು ಭದ್ರತಾ ಪಡೆ ಯೋಧರು ಹುತಾತ್ಮ

ಶ್ರೀನಗರ, ಜ 14(ಯುಎನ್‍ಐ)- ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಹಿಮಪಾತಗಳಿಂದ ನಾಲ್ವರು ಸೇನಾ ಯೋಧರು ಹಾಗೂ ಗಡಿ ಭದ್ರತಾ ಪಡೆಯ ಓರ್ವ ಯೋಧ ಹುತಾತ್ಮರಾಗಿದ್ದು, ಓರ್ವ ಯೋಧನನ್ನು ರಕ್ಷಿಸಲಾಗಿದೆ.

ಸೋಮವಾರ ಸಂಜೆ ಭಾರೀ ಹಿಮ ಸುರಿದಿದ್ದರಿಂದ ಮಚಿಲ್ ಸೆಕ್ಟರ್ ನ ಮುನ್ನೆಲೆ ಸೇನಾ ಶಿಬಿರದಲ್ಲಿ ಹಿಮಪಾತವಾಗಿದೆ ಎಂದು ಅಧಿಕೃತ ಮೂಲಗಳು ಯುಎನ್‍ಐಗೆ ತಿಳಿಸಿವೆ.

‘ಹಿಮದಲ್ಲಿ ಐವರು ಯೋಧರು ಜೀವಂತ ಸಮಾಧಿಯಾಗಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತಕ್ಷಣವೇ ಆರಂಭಿಸಲಾಯಿತು.’ ಎಂದು ಅವರು ಹೇಳಿದರು.

ತೀವ್ರ ಕಾರ್ಯಾಚರಣೆ ನಂತರ ನಾಲ್ವರು ಯೋಧರನ್ನು ಹೊರತೆಗೆಯಲಾಯಿತು. ಗಾಯಗೊಂಡ ಯೋಧರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಇವರಲ್ಲಿ ಮೂವರು ಆಗಲೇ ಮೃತಪಟ್ಟಿದ್ದರು ಎಂದು ಅವರು ಹೇಳಿದ್ದಾರೆ.

ನಾಪತ್ತೆಯಾಗಿರುವ ಯೋಧನ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ ಸೋಮವಾರ ಸಂಜೆ ನೌಗಾಮ್ ಸೆಕ್ಟರ್ ನ ಮುನ್ನೆಲೆ ಶಿಬಿರದಲ್ಲಿ ಹಿಮಪಾತದಿಂದ ಓರ್ವ ಬಿಎಸ್ ಎಫ್ ಸೈನಿಕ ಮೃತಪಟ್ಟಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸಿ ಮತ್ತೊರ್ವ ಯೋಧನನ್ನು ರಕ್ಷಿಸಿವೆ.

ಈ ಬಗ್ಗೆ ರಕ್ಷಣಾ ಸಚಿವಾಲಯ ವಕ್ತಾರರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಸಂಪರ್ಕ ಸಾಧ್ಯವಾಗಲಿಲ್ಲ.

ಯುಎನ್‍ಐ ಎಸ್ ಎಲ್ ಎಸ್ 1501

More News
ಕರೋನ ನಿಯಂತ್ರಣ: ಸರ್ಕಾರ  ಹೇಳುತ್ತಿರುವುದೇನು? ಮಾಡುತ್ತಿರುವುದೇನು?

ಕರೋನ ನಿಯಂತ್ರಣ: ಸರ್ಕಾರ ಹೇಳುತ್ತಿರುವುದೇನು? ಮಾಡುತ್ತಿರುವುದೇನು?

14 Jul 2020 | 8:55 PM

ನವದೆಹಲಿ,ಜುಲೈ 14 (ಯುಎನ್ಐ) ಸರಕಾರ ಕರೋನ ನಿಯಂತ್ರಣ ವಿಚಾರದಲ್ಲಿ ಹೇಳುತ್ತಿರುವುದೇನು? ಮಾಡುತ್ತಿರುವುದೇನು? ಸ್ಯಾನಿಟೈಜರ್ ಗಳಿಗೆ ಶೇಕಡ 18 ರಷ್ಟು ತೆರಿಗೆ ಹಾಕಲು ಹೊರಟಿರುವುದು ಯಾವ ನ್ಯಾಯ ? ನಿಜಕ್ಕೂ ಈಗಿನ ಸನ್ನಿವೇಶದಲ್ಲಿ ಈ ತೀರ್ಮಾನ ಸೂಕ್ತವೇ? ಸಮಜಂಸವೆ??.

 Sharesee more..