Monday, Sep 23 2019 | Time 01:58 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
International Share

ಕಾಶ್ಮೀರಿಗಳಿಗೆ ಬೆಂಬಲ: ಮುಜಫರಾಬಾದ್‌ನಲ್ಲಿ ಇಮ್ರಾನ್ ಸಮಾವೇಶ

ಕಾಶ್ಮೀರಿಗಳಿಗೆ ಬೆಂಬಲ: ಮುಜಫರಾಬಾದ್‌ನಲ್ಲಿ ಇಮ್ರಾನ್ ಸಮಾವೇಶ
ಕಾಶ್ಮೀರಿಗಳಿಗೆ ಬೆಂಬಲ: ಮುಜಫರಾಬಾದ್‌ನಲ್ಲಿ ಇಮ್ರಾನ್ ಸಮಾವೇಶ

ಇಸ್ಲಾಮಾಬಾದ್, ಸೆ 11(ಯುಎನ್ಐ) ಕಾಶ್ಮೀರಿಗಳಿಗೆ ನೈತಿಕ ಬೆಂಬಲ ನೀಡಲು ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿ ಶುಕ್ರವಾರ ಸಾರ್ವಜನಿಕ ಸಮಾವೇಶ ನಡೆಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.ಅಮೆರಿಕ ಮಾನವ ಹಕ್ಕುಗಳ ಅಧಿವೇಶನದಲ್ಲಿ ಭಾರತದ ವಿರುದ್ಧ ಪಾಕ್ ಅಭಿಯಾನ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ಕಾಣಿಸಿಕೊಂಡಿದೆ.

ಆಗಸ್ಟ್ 5 ರಂದು ಕೇಂದ್ರ ಸರಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಬಂಧ ಕೊನೆಗೊಳಿಸಿ, ಈ ಪ್ರದೇಶದಲ್ಲಿ ಮೂಲಭೂತ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯ ಪುನಃಸ್ಥಾಪಿಸುವಂತೆ ಪಾಕಿಸ್ತಾನ ಮಂಗಳವಾರ ವಿಶ್ವ ಮಾನವ ಹಕ್ಕು ಸಂಘಟನೆಗೆ ಮನವಿ ಮಾಡಿತ್ತು.

ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಭಾರತವು ಕಾಶ್ಮೀರವನ್ನು ಅತಿದೊಡ್ಡ ಜೈಲನ್ನಾಗಿ ಪರಿವರ್ತಿಸಿದೆ ಎಂದು ಆರೋಪಿಸಿ, ಇದರ ಬಗ್ಗೆ ಅಂತಾರಾಷ್ಟ್ರೀಯಮಟ್ಟದ ತನಿಖೆಗೆ ಪಟ್ಟು ಹಿಡಿದಿದ್ದಾರೆ.

ಇದೇ 13 ರಂದು ಮುಜಫರಬಾದ್ ನಲ್ಲಿ ದೊಡ್ಡ ಸಮಾವೇಶ ಮಾಡಿ,ಕಾಶ್ಮೀರದ ಜನರ ಜೊತೆ ಪಾಕಿಸ್ತಾನ ಗಟ್ಟಿಯಾಗಿ ನಿಂತಿದೆ ಎಂದು ಜಗತ್ತಿಗೆ ತೋರಿಸುವುದಾಗಿ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದಲ್ಲಿನ ಬದಲಾವಣೆ ಆಂತರಿಕ ವಿಷಯವೆಂದು ಭಾರತ ಬಣ್ಣಿಸಿದೆ ಮತ್ತು ಈ ವಿಷಯದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಸ್ಥಾನವಿಲ್ಲ ಮೇಲಾಗಿ ಮೂರನೆಯವರು ಮಧ್ಯಪ್ರವೇಶ ಮಾಡುವಂತಿಲ್ಲ ಪಾಕಿಸ್ತಾನದ ನಾಯಕತ್ವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸಲು ಈ ವಿಷಯವನ್ನು ಬಳಸುತ್ತಿದೆ ಎಂದೂ ಭಾರತ ಪ್ರಬಲ ವಿರೋಧ ವ್ಯಕ್ತಪಡಿಸಿದೆ.

ಯುಎನ್ಐ ಕೆಎಸ್ಆರ್ 1350