Sunday, Jan 17 2021 | Time 23:56 Hrs(IST)
 • ಬೈಡೆನ್‍ ಆಡಳಿತದಲ್ಲಿ ಇಪ್ಪತ್ತು ಭಾರತೀಯ ಅಮೆರಿಕನ್ನರಿಗೆ ಉನ್ನತ ಹುದ್ದೆ
 • ಜಿ-7 ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ
 • ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ,ಯಾರಿಗೂ ಅಡ್ಡ ಪರಿಣಾಮವಾಗಿಲ್ಲ: ಸಚಿವ ಡಾ ಕೆ ಸುಧಾಕರ್
 • ತಮಿಳುನಾಡು: ಜಲ್ಲಿಕಟ್ಟು ಘಟನೆಗಳಲ್ಲಿ ಗಾಯಗೊಂಡ ಇಬ್ಬರು ಸಾವು
 • ಆತ್ಮನಿರ್ಭರ ಭಾರತ ಸಾಧನೆಗೆ ಸ್ವದೇಶಿ ಉತ್ಪನ್ನಗಳನ್ನೇ ಬಳಸಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ
 • ಕೋವಿಡ್ ನಿಗ್ರಹದಲ್ಲಿ ರಾಜ್ಯ ಸರಕಾರಕ್ಕೆ ಶಹಬ್ಬಾಸ್ ಗಿರಿ: ಮುಖ್ಯಮಂತ್ರಿ ನಾಯಕತ್ವಕ್ಕೆ ಜೈ ಎಂದ ಅಮಿತ್ ಶಾ
 • ಐಕ್ಯತಾ ಪ್ರತಿಮೆಯನ್ನು ಸಂಪರ್ಕಿಸುವ ಎಂಟು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ
 • ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಕೊರೊನಾ ಪ್ರಕರಣಗಳ ಪ್ರಮಾಣ ಶೇ 2 ಕ್ಕಿಂತ ಕಡಿಮೆ
 • ಸೂರತ್‌, ಅಹಮದಾಬಾದ್‌ ಮೆಟ್ರೋ ರೈಲು ಯೋಜನೆಗಳಿಗೆ ನಾಳೆ ಪ್ರಧಾನಿಯಿಂದ ಶಂಕುಸ್ಥಾಪನೆ
 • ಆಟೋ ಚಾಲಕನ ಅಂತ್ಯಕ್ರಿಯೆಯಲ್ಲಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಭಾಗಿ; ಕುಟುಂಬಕ್ಕೆ ಪರಿಹಾರ ವಿತರಣೆ
 • ಪುದುಚೇರಿಯ ಬಿಜೆಪಿ ಶಾಸಕ ಹೃದಯಾಘಾತದಿಂದ ನಿಧನ
 • ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ, ಮೂವರ ಸಾವು
 • ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ 6,ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣ: ಸಚಿವ ಡಾ ಕೆ ಸುಧಾ ಕರ್
National Share

ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ

ನವದೆಹಲಿ, ನವೆಂಬರ್ 29 (ಯುಎನ್‌ಐ) ರೈತರ ಪ್ರತಿಭಟನೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ಘೋಷಿಸಿದ ಕೃಷಿ ಸುಧಾರಣೆಗಳಿಂದ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೊಸ ಆಯಾಮ ದೊರೆಯಲಿದೆ, ರೈತರಿಗೆ ಹೊಸ ಹಕ್ಕುಗಳು ಮತ್ತು ಮುಕ್ತ ಅವಕಾಶಗಳು ಸಹ ದೊರೆಯಲಿದೆ ಎಂದು ಪ್ರತಿಪಾದಿಸಿದ್ದಾರೆ.
ಮನ್ ಕಿಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದವುಗಳೊಂದಿಗೆ ಹೊಸ ಆಯಾಮ ಸೇರಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಡಲಾದ ಕೃಷಿ ಸುಧಾರಣೆಗಳಲ್ಲಿ ರೈತರಿಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆದಿದೆ. ಹಲವು ವರ್ಷಗಳಿಂದ ರೈತರ ಬೇಡಿಕೆಗಳನ್ನು ಪೂರ್ಣಗೊಳಿಸಲು ಒಂದಲ್ಲ ಒಂದು ಹಂತದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆಶ್ವಾಸನೆಯನ್ನು ನೀಡಿದ್ದವು, ಆ ಬೇಡಿಕೆಗಳು ಈಗ ಈಡೇರಿವೆ. ತುಂಬಾ ವಿಚಾರ-ವಿಮರ್ಶೆಯ ನಂತರ ಸಂಸತ್ತು ಕೃಷಿ ಸುಧಾರಣೆಗಳಿಗೆ ಒಂದು ಕಾನೂನಿನ ರೂಪ ನೀಡಿದೆ. ಈ ಸುಧಾರಣೆಗಳಿಂದ ಕೇವಲ ರೈತರು ಹಲವು ಬಂಧನಗಳಿಂದ ಮುಕ್ತವಾಗುವುದಲ್ಲದೆ ಅವರಿಗೆ ಹಲವು ಅಧಿಕಾರಗಳು ಲಭಿಸಿವೆ, ಹೊಸ ಅವಕಾಶಗಳು ಲಭಿಸಿವೆ. ಈ ಅಧಿಕಾರಗಳು ಬಹಳ ಕಡಿಮೆ ಸಮಯದಲ್ಲಿ ರೈತರ ಸಂಕಟಗಳನ್ನು ಕಡಿಮೆಗೊಳಿಸಲು ಪ್ರಾರಂಭಿಸಿವೆ ಎಂದು ಹೇಳಿದ್ದಾರೆ.
ಪ್ರತಿ ವರ್ಷ ದೆಹಲಿಯಲ್ಲಿ ಅಪಾರ ಪ್ರಮಾಣದ ಮಾಲಿನ್ಯಕ್ಕೆ ಕಾರಣವಾಗುವ ಕೃಷಿ ತ್ಯಾಜ್ಯ ಸುಡುವ ಸಮಸ್ಯೆಯನ್ನು ಉಲ್ಲೇಖಿಸಿದ ಪ್ರಧಾನಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೃಹತ್ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ವೀರೇಂದ್ರ ಯಾದವ್ ಎಂಬ ರೈತ ಮಾಡಿದ ಸಾಧನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ವೀರೇಂದ್ರ ಯಾದವ್ ಹಿಂದೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. 2 ವರ್ಷಗಳ ಹಿಂದೆ ಅವರು ಭಾರತಕ್ಕೆ ಬಂದಿದ್ದು, ಈಗ ಹರಿಯಾಣದ ಕೈಥಲ್ ನಲ್ಲಿ ಇದ್ದಾರೆ. ಇತರರಂತೆ ಕೃಷಿಯಲ್ಲಿ ಕೃಷಿ ತ್ಯಾಜ್ಯ ಅವರಿಗೆ ಒಂದು ದೊಡ್ಡ ಸಮಸ್ಯೆಯಾಗಿತ್ತು. ತ್ಯಾಜ್ಯ ಸಮಸ್ಯೆಯ ಪರಿಹಾರಕ್ಕೆ ವೀರೇಂದ್ರ ಒಣ ಹುಲ್ಲಿನ ಮೂಟೆಯನ್ನು ಕಟ್ಟುವಂಥ ಸ್ಟ್ರಾ ಬೇಲರ್ ಯಂತ್ರವನ್ನು ಖರೀದಿಸಿದರು. ಇದಕ್ಕಾಗಿ ಅವರಿಗೆ ಕೃಷಿ ಇಲಾಖೆಯಿಂದ ಆರ್ಥಿಕ ಸಹಾಯವೂ ಲಭಿಸಿತು. ಈ ಯಂತ್ರದಿಂದ ಅವರು ಒಣ ಹುಲ್ಲಿನ ಬ್ಲಾಕ್ ಗಳನ್ನು ತಯಾರಿಸಲಾರಂಭಿಸಿದರು. ಬ್ಲಾಕ್ ಗಳನ್ನು ತಯಾರಿಸಿದ ನಂತರ ಆ ತ್ಯಾಜ್ಯವನ್ನು ಪೇಪರ್ ಮಿಲ್ ಗಳು ಮತ್ತು ಆಗ್ರೊ ಎನರ್ಜಿ ಘಟಕಗಳಿಗೆ ಮಾರಾಟ ಮಾಡಿದರು. ವಿರೇಂದ್ರ ಅವರು ತ್ಯಾಜ್ಯದಿಂದ ಕೇವಲ 2 ವರ್ಷಗಳಲ್ಲಿ ಒಂದೂವರೆ ಕೋಟಿಗಿಂತ ಹೆಚ್ಚು ವ್ಯಾಪಾರ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು.
ಅದರಲ್ಲೂ ಸುಮಾರು 50 ಲಕ್ಷದಷ್ಟು ಲಾಭಗಳಿಸಿದ್ದಾರೆ. ಯಾರ ಹೊಲಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೋ ಆ ರೈತರಿಗೂ ಇದರ ಲಾಭವಾಗುತ್ತಿದೆ. ತ್ಯಾಜ್ಯಕ್ಕೆ ಪರಿಹಾರ ಒದಗಿಸಿ ಹಣ ಮತ್ತು ಪುಣ್ಯ ಎರಡನ್ನೂ ಗಳಿಸುವ ಒಂದು ಉತ್ತಮ ಉದಾಹರಣೆ ಇದಾಗಿದೆ ಎಂದು ತಮ್ಮ ಭಾಷಣದಲ್ಲಿ ಬಣ್ಣಿಸಿದರು.
ಯುಎನ್ಐ ಎಎಚ್ 1806
More News

ಕೆವಾಡಿಯಾ ಜಾಗತಿಕ ಪ್ರವಾಸಿ ತಾಣ: ಮೋದಿ

17 Jan 2021 | 10:23 PM

 Sharesee more..

ಜಿ-7 ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

17 Jan 2021 | 9:04 PM

 Sharesee more..
ಜೂನ್‌ನಲ್ಲಿ ಬ್ರಿಟನ್‌ ಜಿ-7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ

ಜೂನ್‌ನಲ್ಲಿ ಬ್ರಿಟನ್‌ ಜಿ-7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ

17 Jan 2021 | 8:26 PM

ನವದೆಹಲಿ, ಜ 17 (ಯುಎನ್‌ಐ) ನೈಋತ್ಯ ಇಂಗ್ಲೆಂಡ್‌ನ ಸಣ್ಣ ಕಡಲತೀರದ ರೆಸಾರ್ಟ್‌ ಕಾರ್ನ್‌ವಾಲ್‌ನಲ್ಲಿ ಜೂನ್ 11 ರಿಂದ 13ರವರೆಗೆ ನಡೆಯಲಿರುವ ವಿಶ್ವದ ಏಳು ಕೈಗಾರಿಕೀಕರಣಗೊಂಡ ದೇಶಗಳ ಜಿ -7 ರ 47 ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

 Sharesee more..