Sunday, Nov 29 2020 | Time 18:36 Hrs(IST)
 • ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ: ಡಿ ಕೆ ಶಿವಕುಮಾರ್
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
 • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
 • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
 • ಮಾರಕಾಸ್ತ್ರಗಳಿಂದ ಕೊಚ್ಚಿ‌ ಯುವಕನ ಕೊಲೆ
 • ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ನಿಂದ ಮಹತ್ವದ ಕ್ರಮ
 • ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ಲೈನ್ ಮನ್ ಸಾವು: ಮತ್ತೋರ್ವ ಚಿಂತಾಜನಕ
 • ವಿದ್ಯುತ್ ಸ್ಪರ್ಶ: ಕಂಟೈನರ್ ಕ್ಲೀನರ್ ಗೆ ಗಂಭೀರ ಗಾಯ
 • ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ ಕೆ ಶಿವಕುಮಾರ್ ಪ್ರಶ್ನೆ
 • ಪ್ರಧಾನಿ ಭೇಟಿ ಹಿನ್ನೆಲೆ: ಸ್ವಾಗತಕ್ಕೆ ವಾರಾಣಸಿ ಸಜ್ಜು
 • ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ
National Share

ಕೃಷಿ ಬಜೆಟ್ ಹತ್ತು ವರ್ಷಗಳಲ್ಲಿ 11 ಪಟ್ಟು ಹೆಚ್ಚಳ; 1.34 ಲಕ್ಷ ಕೋಟಿ ರೂ.ಗೆ ಏರಿಕೆ: ಸಚಿವ ಸಂತೋಷ್ ಗಂಗ್ವಾರ್

ಕೃಷಿ ಬಜೆಟ್ ಹತ್ತು ವರ್ಷಗಳಲ್ಲಿ 11 ಪಟ್ಟು ಹೆಚ್ಚಳ; 1.34 ಲಕ್ಷ ಕೋಟಿ ರೂ.ಗೆ ಏರಿಕೆ: ಸಚಿವ ಸಂತೋಷ್ ಗಂಗ್ವಾರ್
ಕೃಷಿ ಬಜೆಟ್ ಹತ್ತು ವರ್ಷಗಳಲ್ಲಿ 11 ಪಟ್ಟು ಹೆಚ್ಚಳ; 1.34 ಲಕ್ಷ ಕೋಟಿ ರೂ.ಗೆ ಏರಿಕೆ: ಸಚಿವ ಸಂತೋಷ್ ಗಂಗ್ವಾರ್

ನವದೆಹಲಿ, ಅ 3 [ ಯುಎನ್ಐ] ಹೊಸ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಸುಧಾರಣಾ ಕಾನೂನುಗಳು ರೈತರಿಗೆ ಮತ್ತು ಕಾರ್ಮಿಕರಿಗೆ ಅಪಾರ ಪ್ರಯೋಜನ ನೀಡಲಿವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವರು, ಎನ್‌ಡಿಎ ಸರ್ಕಾರದ ರೈತ ಪರ ಕ್ರಮಗಳನ್ನು ಜಾರಿಗೊಳಿಸಿದೆ. ಯುಪಿಎ ಆಡಳಿತಾವಧಿಯ 2009-10ರಲ್ಲಿದ್ದ ಕೃಷಿ ಬಜೆಟ್ ಈಗ 11 ಪಟ್ಟು ಹೆಚ್ಚಿಸಲಾಗಿದ್ದು, 1.34 ಲಕ್ಷ ಕೋಟಿ ರೂ.ಗೆ ಏರಿಕಯಾಗಿದೆ. ಇದು ದೇಶದ ರೈತರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆ ತೋರಿಸುತ್ತದೆ ಎಂದು ಹೇಳಿದರು.

ಹೊಸ ಕೃಷಿ ಕಾನೂನುಗಳು ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತವೆ. ರೈತರು ಈಗ ತಮ್ಮ ಉತ್ಪನ್ನಗಳನ್ನು ಇತರ ರಾಜ್ಯಗಳಲ್ಲಿಯೂ ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಯುಪಿಎ ಆಡಳಿತಕ್ಕೆ ಹೋಲಿಸಿದರೆ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಕನಿಷ್ಠ ಬೆಂಬಲ ಬೆಲೆ ರದ್ದುಪಡಿಸುವುದಿಲ್ಲ, ಈ ಬಗ್ಗೆ ಆತಂಕ ಬೇಡ ಎಂದರು.

ಪಿಎಚ್‌ಡಿ ಚೇಂಬರ್ಸ್ ಆಫ್ ಕಾಮರ್ಸ್ ಸಭೆಯಲ್ಲಿ ಮತ್ತು ನಂತರ ನಡೆದ ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾರ್ಮಿಕರಿಗೆ ಪ್ರಮುಖ ಕಾರ್ಮಿಕ ಸಂಹಿತೆಗಳಿಂದಾಗುವ ಪ್ರಯೋಜನಗಳ ಬಗ್ಗೆ ಸಚಿವ ಗಂಗ್ವಾರ್ ಮಾತನಾಡಿದರು. ಈ ಸುಧಾರಣೆಗಳು ಮುಂದಿನ ದಿನಗಳಲ್ಲಿ ಕಾರ್ಮಿಕರು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ. ಮೂರು ಕಾರ್ಮಿಕ ಸಂಹಿತೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಅವರು ಹೇಳಿದರು.

ಕಾರ್ಮಿಕರ ಕಲ್ಯಾಣ ಮತ್ತು ಲಿಂಗ ಸಮಾನತೆ ಉತ್ತೇಜಿಸುವ ಜೊತೆಗೆ ಈ ಕಾರ್ಮಿಕ ಸಂಹಿತೆಗಳು ಸುಲಭ ವ್ಯವಹಾರಕ್ಕೂ ಸಹಾಯ ಮಾಡುತ್ತದೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಉದ್ಯಮ ಮತ್ತು ಕಾರ್ಮಿಕರು ಪರಸ್ಪರ ಪೂರಕವಾಗಿ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಸರ್ಕಾರಕ್ಕೆ ಬೆಂಬಲ ನೀಡುವಂತೆ ಅವರು ಉದ್ಯಮದ ಮುಖಂಡರಿಗೆ ಮನವಿ ಮಾಡಿದರು.

ಉದ್ಯಮಗಳ ಬೆಳವಣಿಗೆ ಮತ್ತು ವಿಸ್ತರಣೆಯು ಉದ್ಯೋಗ ಸೃಷ್ಟಿಯಲ್ಲಿ ಏರಿಕೆಗೆ ಸಹಕಾರಿಯಾಗಿದೆ. ಸಾರ್ವತ್ರಿಕ ಮತ್ತು ಕಡ್ಡಾಯ ಕನಿಷ್ಠ ವೇತನ, ಸಮಾನ ವೇತನ ಮತ್ತು ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶಗಳು, ನೇಮಕಾತಿ ಪತ್ರಗಳನ್ನು ಕಡ್ಡಾಯಗೊಳಿಸುವುದು, ಇಪಿಎಫ್ ಮತ್ತು ಐಎಸ್ಐಸಿಯ ಸಾಮಾಜಿಕ ಭದ್ರತಾ ಜಾಲವನ್ನು ದೇಶದ ವ್ಯಾಪಕ ಎಲ್ಲ ಕಾರ್ಮಿಕರಿಗೆ ಮುಕ್ತಗೊಳಿಸುವುದು, ಜಿಐಜಿ, ಪ್ಲಾಟ್‌ಫಾರ್ಮ್ ಮತ್ತು ಪ್ಲಾಂಟೇಶನ್ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಯಲ್ಲಿ ತರುವುದು ಮುಂತಾದ ಉಪಕ್ರಮಗಳ ಬಗ್ಗೆ ಸಚಿವರು ಉಲ್ಲೇಖಿಸಿದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ನಿಧಿ, ಉದ್ಯೋಗ ಕಳೆದುಕೊಳ್ಳುವವರಿಗಾಗಿ ಮರು ಕೌಶಲ್ಯ ನಿಧಿ, ವಲಸೆ ಕಾರ್ಮಿಕರ ವ್ಯಾಪಕ ವ್ಯಾಖ್ಯಾನ ಮತ್ತು ಕಲ್ಯಾಣ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಅವರ ದತ್ತಾಂಶ ಸಂಗ್ರಹಣೆ ಮುಂತಾದ ಉಪಕ್ರಮಗಳ ಪ್ರಯೋಜನಗಳನ್ನು ಸಚಿವರು ವಿವರಿಸಿದರು. 73 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಇದ್ದ ಕೆಲವು ಪುರಾತನ ಕಾನೂನುಗಳಿಗೆ ಸುಧಾರಣೆಯ ಅವಶ್ಯಕತೆ ಇತ್ತು. ಈ ಸುಧಾರಣೆಗಳು ಮಹತ್ವದ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದರು.’

ಒಂದು ನೋಂದಣಿ, ಒಂದು ಪರವಾನಗಿ ಮತ್ತು ಮೊದಲಿದ್ದ ಬಹುಸಂಖ್ಯೆಯ ರಿಟರ್ನ್ ಬದಲು ಒಂದೇ ರಿಟರ್ನ್ ಹೊಂದುವ ಮೂಲಕ ವ್ಯವಹಾರವನ್ನು ಸುಲಭಗೊಳಿಸುವ ಪ್ರಯತ್ನಗಳು ನಡೆದಿವೆ. ಈ ಸಂಹಿತೆಗಳನ್ನು ಅಂತಿಮಗೊಳಿಸುವ ಮೊದಲು ಎಲ್ಲಾ ಪಾಲುದಾರರೊಂದಿಗೆ ವ್ಯಾಪಕವಾಗಿ ಸಮಾಲೋಚನೆ ನಡೆಸಲಾಯಿತು ಎಂದು ಸಚಿವ ಗಂಗ್ವಾರ್ ಹೇಳಿದರು.

ಇದುವರೆಗೆ ಇವುಗಳ ವ್ಯಾಪ್ತಿಯಲ್ಲಿ ಬಾರದೆ ಉಳಿದಿದ್ದ ಹಾಗೂ ಈಗಾಗಲೇ ಇದರಡಿಯಲ್ಲಿರುವ ಕೋಟ್ಯಂತರ ಜನರಿಗೆ ಐತಿಹಾಸಿಕ ಪ್ರಯೋಜನಗಳನ್ನು ಒದಗಿಸುವ ಈ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚಿಸದಿರಲು ಪ್ರತಿಪಕ್ಷಗಳು ನಿರ್ಧರಿಸಿದ್ದವು. ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪಿಂಚಣಿ ಯೋಜನೆ, ಪಿಎಂ ಶ್ರಮಯೋಗಿ ಮಾನ್ ಧನ್, ಮಾತೃತ್ವ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸುವುದು, ಪೋರ್ಟಬಿಲಿಟಿ ಮತ್ತು ಇಪಿಎಫ್ ಮತ್ತು ಇಎಸ್ಐಸಿ ಸೇವೆಗಳ ವಿಸ್ತರಣೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅಧಿಕಾರ ನೀಡುವುದು ಮುಂತಾದ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಜಾರಿಗೆ ಬಂದ ವೇತನದ ಸಂಹಿತೆಯಲ್ಲದೆ, ಇನ್ನೂ 3 ಪ್ರಮುಖ ಸಂಹಿತೆಗಳಾದ ಸಾಮಾಜಿಕ ಭದ್ರತೆ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆಯನ್ನು ಸಂಸತ್ತು ಇತ್ತೀಚೆಗೆ ಅಂಗೀಕರಿಸಿತ್ತು ಮತ್ತು ಅವುಗಳನ್ನು ಈಗ ಜಾರಿಗೆ ತರಲಾಗಿದೆ.

ಯುಎನ್ಐ ವಿಎನ್ 2000

More News
ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ

ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ

29 Nov 2020 | 6:20 PM

ತಿರುಪತಿ, ನ 29 (ಯುಎನ್‌ಐ) ಕಳೆದ ವಾರ ತಮಿಳುನಾಡು ಕರಾವಳಿಯನ್ನು ಅಪ್ಪಳಿಸಿದ ನಿವಾರ್ ಚಂಡಮಾರುತ, ಚಿತ್ತೂರು ಜಿಲ್ಲೆಯ 21 ಮಂಡಲಗಳ 245 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ.

 Sharesee more..
ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

29 Nov 2020 | 5:15 PM

ಚೆನ್ನೈ, ನ 29 (ಯುಎನ್‌ಐ) ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಾಳೆ ರಜಿನಿ ಮಕ್ಕಳ್‍ ಮಂದಿರಂ (ಆರ್ ಎಂಎಂ) ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನಾಲ್ಕೈದು ತಿಂಗಳಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸಲಿದ್ದಾರೆ.

 Sharesee more..
ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

29 Nov 2020 | 5:10 PM

ನವದೆಹಲಿ, ನ 29 (ಯುಎನ್ಐ) ಹಣದ ಕೊರತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ವೇತನ ತಡೆಹಿಡಿದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ, ಎಸ್‌ಸಿ ಮತ್ತು ಎಸ್‌ಟಿ ಯಾವಾಗಲೂ ಹಿಂದುಳಿದಿರಬೇಕು ಎಮದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತದೆ ಎಂದು ಆರೋಪಿಸಿದ್ದಾರೆ.

 Sharesee more..