NationalPosted at: Jan 21 2021 6:54PM Shareಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಸಾಲದ ಬಡ್ಡಿದರ ಏರಿಕೆ ಇಲ್ಲ; ಕೇಂದ್ರ ಸರ್ಕಾರನವದೆಹಲಿ, ಜ 21 (ಯುಎನ್ಐ) ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಪಡೆಯುವ ಸಾಲಗಳ ಬಡ್ಡಿದರ ಏರಿಕೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೇಲೆ ರೈತರು ಪಡೆಯುವ ಸಾಲದ ಬಡ್ಡಿದರನ್ನು ಈಗಿರುವ ಶೇ.7ರಿಂದ ಶೇ.12ಕ್ಕೆ ಏರಿಕೆ ಮಾಡಲಾಗಿದೆ ಎನ್ನುವ ಸುದ್ದಿ ಹರಡಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂಡಳಿ ಹೇಳಿದೆ.ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಹೇಳಿಕೆ ಹೊರಡಿಸಿಲ್ಲ. ರೈತರು ಗೊಂದಲಕ್ಕೀಡಾಗಬೇಕಿಲ್ಲ ಎಂದು ಭರವಸೆ ನೀಡಿದೆ.ಯುಎನ್ಐ ಎಸ್ಎಚ್ 1852