Friday, May 29 2020 | Time 16:27 Hrs(IST)
 • ಧೋನಿಗಾಗಿ 2011ರ ವಿಶ್ವಕಪ್‌ ಫೈನಲ್‌ನಲ್ಲಿ 2 ಬಾರಿ ಟಾಸ್‌: ಸಂಗಕ್ಕಾರ
 • ಅಧಿಕಾರಿಯ ಮೇಲೆ ಶಾಸಕರ ದೌರ್ಜನ್ಯ ಪ್ರಕರಣ: ಸೂಕ್ತ ತನಿಖೆಗೆ ಸಿದ್ದರಾಮಯ್ಯ ಆಗ್ರಹ
 • ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ: ಭ್ರಷ್ಟಾಚಾರದಲ್ಲಿ ಸರಕಾರ ಭಾಗಿ- ಸಲೀಮ್ ಅಹ್ಮದ್
 • ಐದನೆ ಹಂತದ ಲಾಕ್ ಡೌನ್ ವಿಸ್ತರಣೆ: ಸದ್ಯವೇ ತೀರ್ಮಾನ
 • ಬೋಧ್ ಗಯಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೆರೆ
 • ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಜನರಿಗೆ ಮಾಹಿತಿ ನೀಡಿ; ರಾಹುಲ್ ಗಾಂಧಿ
 • ಜಲ್ಲಿಕಲ್ಲು ವ್ಯಾಪಾರಿ ಭೀಕರ ಕೊಲೆ
 • ಠೇವಣಿದಾರರ ಖಾತೆಗೆ ಬ್ಯಾಂಕ್​​ ಉದ್ಯೋಗಿಯಿಂದಲೇ ಕನ್ನ; 13 39 ಲಕ್ಷ ರೂ ದೋಖಾ
 • ಪರಿಷತ್ತಿನ ಆಯ್ಕೆ ಮುಖ್ಯಮಂತ್ರಿಗಳ ಪರಮಾಧಿಕಾರ: ಸಹಕಾರ ಸಚಿವ
 • ಅಂಬಿ ಹುಟ್ಟು ಹಬ್ಬಕ್ಕೆ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ
 • ಭಾರತದಲ್ಲಿ ಒಂದೇ ದಿನ 7476 ಜನರಿಗೆ ಸೋಂಕು, ಸೋಂಕಿತರ ಸಂಖ್ಯೆ 1 06 ಲಕ್ಷಕ್ಕೇರಿಕೆ
 • ಮೇ 31ಕ್ಕೆ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ನಿರ್ಧಾರ: ಎಸ್‌ ಟಿ ಸೋಮಶೇಖರ್
 • ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ- ಮುಖ್ಯಮಂತ್ರಿ
 • ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ- ಬಿ ಸಿ ಪಾಟೀಲ್
 • ಕೊರೋನ ಸೋಂಕಿತ ದೇಶಗಳ ಪೈಕಿ ಈಗ ಭಾರತಕ್ಕೆ 9 ನೆ ಸ್ಥಾನ
Entertainment Share

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ
ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಬೆಂಗಳೂರು, ಏ 06 (ಯುಎನ್‍ಐ) ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಕಳೆದ ಒಂದು ತಿಂಗಳಿನಿಂದ ಯಕೃತ್ತು ಮತ್ತು ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ.ಕೆಲದಿನಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕೂಡ ಬಳಲುತ್ತಿದ್ದ ಅವರು, ಕನ್ನಿಂಗ್‌ಹ್ಯಾಮ್ ರೋಡ್‌ನಲ್ಲಿರುವ ಪೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ವೆಂಟಿಲೇಟರ್ ನಲ್ಲಿ ಇದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ನೆನಪಿರಲಿ ಪ್ರೇಮ್, ದುನಿಯಾ ವಿಜಯ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ "ಬುಲೆಟ್ ಪ್ರಕಾಶ್ ಚೇತರಿಸಿಕೊಳ್ಳುವರೆಂಬ ವಿಶ್ವಾಸವಿದೆ. ಆದರೆ ಕೆಲವರು ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ನಂಬಬೇಡಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸುಮಾರು 325 ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ನಟಿಸಿದ್ದಾರೆ.ಆಂಗಿಕ ಭಾಷೆ, ಡೈಲಾಗ್ ಡೆಲಿವರಿ ಮೂಲಕ ಸೆಳೆದಿದ್ದು,. ಇತ್ತೀಚೆಗಷ್ಟೇ ಅವರು 5 ತಿಂಗಳಲ್ಲಿ 35 ಕೆಜಿ ತೂಕ ಇಳಿಸಿಕೊಂಡಿದ್ದರು.ದರ್ಶನ್ ನಟನೆಯ 'ಧ್ರುವ' ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ತಮಿಳು ಮುಂತಾದ ಭಾಷೆಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ರಾಯಲ್ ಎನ್‌ಫೀಲ್ಡ್ ಬೈಕ್ ಓಡಿಸುತ್ತಿದ್ದಕ್ಕೆ ಇವರಿಗೆ ಬುಲೆಟ್ ಅಂತ ಹೆಸರು ಬಂತು. 2015ರಲ್ಲಿ ಇವರು ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಬುಲೆಟ್ ಪ್ರಕಾಶ್ ಭಾಗವಹಿಸಿದ್ದರು.

ಯುಎನ್ಐ ಎಸ್‍ಎ ವಿಎನ್ 1525