Tuesday, Jun 25 2019 | Time 13:59 Hrs(IST)
 • ಲೋಕಸಭಾ ಸದಸ್ಯರಾಗಿ ನುಸ್ರತ್ ಜಹಾನ್, ಮಿಮಿ ಚಕ್ರವರ್ತಿ ಪ್ರಮಾಣ ವಚನ
 • ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೋ, ಕಡ್ಡಾಯವಾಗಬೇಕೋ? ಸಲಹೆಗಾಗಿ ರಾಜ್ಯಗಳಿಗೆ ಕೇಂದ್ರ ಮನವಿ
 • ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ: ಯಡಿಯೂರಪ್ಪ
 • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
 • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
 • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
 • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
business economy Share

ಗೋ ಏರ್‌ನಿಂದ ಆರಂಭಿಕ 899 ರೂ ಪ್ರಯಾಣ ದರ; ಮೇ 27 – 29 ಬುಕ್ಕಿಂಗ್ ಗೆ ಅವಕಾಶ

ಹೈದರಾಬಾದ್, ಮೇ 24 (ಯುಎನ್‌ಐ) ಅತಿವೇಗವಾಗಿ ಪ್ರಗತಿ ಸಾಧಿಸುತ್ತಿರುವ ಭಾರತದ ವಿಮಾನಯಾನ ಸಂಸ್ಥೆ ಗೋ ಏರ್‌ ದೇಶೀಯ ಮಾರ್ಗಗಗಳಲ್ಲಿ ಕೊಡುಗೆ ಘೋಷಿಸಿದೆ; ತೆರಿಗೆ ಸೇರಿ ಆರಂಭಿಕ ದರ 899 ರೂ ನಷ್ಟಿದೆ.

ಜೂನ್ 15 ರಿಂದ ಡಿಸೆಂಬರ್ 31 ರವರೆಗೆ ಒಟ್ಟು 10 ಲಕ್ಷ ಪ್ರಯಾಣಿಕರು ಈ ಕೊಡುಗೆಯ ಲಾಭ ಪಡೆಯಬಹುದಾಗಿದೆ.
ಮೇ 27 ರಿಂದ 29 ರವರೆಗೆ ಮೂರು ದಿನಗಳು ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಕೊಡುಗೆಯನ್ನು ವರ್ಗಾಯಿಸಲಾಗುವುದಿಲ್ಲ, ಬದಲಿಸಲಾಗುವುದಿಲ್ಲ ಅಥವಾ ಹಣ ಮರುಪಾವತಿ ಮಾಡಲಾಗುವುದಿಲ್ಲ. ನಿಗದಿತ ಶುಲ್ಕ ಪಾವತಿಸಿ ಸ್ಥಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಇನ್ನೂ ಅನೇಕ ವಿಶೇಷ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಗೋ ಏರ್ 24 ತಾಣಗಳಿಗೆ ವಿಮಾನ ಸೇವೆ ಒದಗಿಸಿದೆ. ಅಹಮದಾಬಾದ್, ಬಾಗದೋಗ್ರಾ, ಬೆಂಗಳೂರು, ಭುವನೇಶ್ವರ, ಚಂಡೀಗಢ, ಚೆನ್ನೈ, ದೆಹಲಿ, ಗೋವಾ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕೊಚ್ಚಿ, ಕೋಲ್ಕತಾ, ಕಣ್ಣೂರು, ಲೇಹ್, ಲಕ್ನೋ, ಮುಂಬೈ, ನಾಗ್ಪುರ, ಪಾಟ್ನಾ, ಪೋರ್ಟ್‌ ಬ್ಲೇರ್, ಪುಣೆ, ರಾಂಚಿ ಮತ್ತು ಶ್ರೀನಗರಗಳಿಗೆ ಗೋ ಏರ್ ವಿಮಾನ ಸೇವೆ ನೀಡುತ್ತಿದೆ.
ಫುಕೆಟ್, ಮಾಲೆ, ಮಸ್ಕಟ್ ಮತ್ತು ಅಬುಧಾಬಿ ನಾಲ್ಕು ವಿದೇಶೀ ತಾಣಗಳಿಗೂ ಗೋ ಏರ್ ವಿಮಾನ ಸೇವೆ ಲಭ್ಯವಿದೆ.

ಗೋ ಏರ್ ನಿಂದ 270 ವಿಮಾನಗಳ ದೈನಂದಿನ ಹಾರಾಟವಿದ್ದು ವಾರಕ್ಕೆ 1900 ಹಾರಾಟಗಳಿರುತ್ತವೆ.
ಯುಎನ್ಐ ಜಿಎಸ್ಆರ್ ವಿಎನ್ 2040
More News