Monday, Feb 24 2020 | Time 16:16 Hrs(IST)
 • ಭೂಗತ ಪಾತಕಿ ರವಿ ಪೂಜಾರಿಗೆ ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ
 • ಗೌತಮ್ ಸ್ಪಿನ್ ಮೋಡಿ : ಸತತ ಮೂರನೇ ಬಾರಿ ಸೆಮಿಫೈನಲ್ ತಲುಪಿದ ಕರ್ನಾಟಕ
 • ಮೂರು ಶತಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ನಾಳೆ ಸಹಿ: ಟ್ರಂಪ್
 • ಬನ್ನೇರುಘಟ್ಟ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕುಗ್ಗಿಸುವ ಪ್ರಸ್ತಾವನೆಗೆ ಬೆಂಗಳೂರು ಪ್ರತಿಷ್ಠಾನ ವಿರೋಧ
 • ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ
 • ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ನೂರು ಕೋಟಿ : ದೇಶಕ್ಕೆ ಲಾಭವಿಲ್ಲ -ರಾಜ್ಭರ್
 • ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಯುವಜನತೆಗೆ ಉಪರಾಷ್ಟ್ರಪತಿ ಕರೆ
 • ಡಿ ವೈ ಪಾಟೀಲ್ ಟಿ20 ಆಡಲು ಸಜ್ಜಾದ ಹಾರ್ದಿಕ್ ಪಾಂಡ್ಯ
 • ಕಾರನ್ನು ವಿದ್ಯುತ್ ಕಂಬಕ್ಕೆ ಗುದ್ದಿ, ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾದ ಶಾಸಕರ ಮೊಮ್ಮಗ
 • ರಸ್ತೆ ಅಪಘಾತ: ಇಬ್ಬರು ಸಾವು
 • ವಿಚಾರಣೆಗೆ ಹಾಜರಾಗುವಂತೆ ವಾರಿಸ್ ಪಠಾಣ್ ಗೆ ನೋಟಿಸ್
 • ಟ್ರಂಪ್ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ: ಸಿದ್ದರಾಮಯ್ಯ
 • ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಸರಿಯಲ್ಲ: ಕೆ ಬಿ ಕೋಳಿವಾಡ
 • ಮಾರ್ಚ್ 5 ರಿಂದ 7ರವರೆಗೆ ಹೊನ್ನಾಳಿಯಲ್ಲಿ ರಾಜ್ಯಮಟ್ಟದ ಕೃಷಿಮೇಳ
 • ಬೌದ್ಧಿಕವಾಗಿಯೂ ಸರ್ಕಾರ ದಿವಾಳಿ: ಸಿ ಟಿ ರವಿ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ
National Share

ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್

ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್
ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್

ನವದೆಹಲಿ, ಜ. 18 (ಯುಎನ್‌ಐ) ನ್ಯಾಯ ವಿಳಂಬ ನ್ಯಾಯದ ನಿರಾಕರಣೆಯಾಗಿದೆ. ನ್ಯಾಯದ ವಿಳಂಬವನ್ನು ನಿವಾರಿಸಲು ಕಾಯ್ದೆಗಳಿಗೆ ತಿದ್ದುಪಡಿ ಅಗತ್ಯವಿದೆ ಎಂಬುದು 2013 ರ 'ಗುಡಿಯಾ' ಅತ್ಯಾಚಾರ ಪ್ರಕರಣದ ತೀರ್ಪಿನಿಂದ ಸ್ಪಷ್ಟವಾಗಿದೆ ಎಂದು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ಕು ತಿಂಗಳ ನಂತರ, ಅಂದರೆ 2013 ರ ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ಐದು ವರ್ಷ ಪ್ರಾಯದ ಬಾಲಕಿಯನ್ನು ಇಬ್ಬರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರವೆಸಗಿದ್ದರು. ಇಬ್ಬರನ್ನೂ ಇಂದು ನಗರ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣ ಕುರಿತ ವಾದಗಳು ಜನವರಿ 30, ಮಂಗಳವಾರ ನಡೆಯಲಿದೆ.

ಗುಡಿಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಬ್ಬರೂ ತಪ್ಪಿತಸ್ಥರೆಂದು ಸಾಬೀತಾಗಿದೆ. ಇದಕ್ಕೆ ಏಳು ವರ್ಷಗಳು ಬೇಕಾಯಿತು. ಒಟ್ಟಾರೆ ನಾವು ಈ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ವಿರುದ್ಧ ಯಾರೂ ಕೂಡ ಕೆಟ್ಟದಾಗಿ ನಡೆದುಕೊಳ್ಳದಂತೆ, ಅವರ ಮೇಲೆ ದೌರ್ಜನ್ಯವೆಸಗದಂತೆ ನಾವು ಖಚಿತಪಡಿಸಿಕೊಳ್ಳಬೇಕಾದರೆ ನಾವು ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಆರೋಪಿಗಳಿಗೆ ಆರು ತಿಂಗಳೊಳಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರದ ಬಳಿಕ ಮಗು ಮೃತಪಟ್ಟಿದೆ ಎಂದು ಭಾವಿಸಿ ಆರೋಪಿಗಳು ಪರಾರಿಯಾಗಿದ್ದರು. ಎರಡು ದಿನಗಳ ನಂತರ 2013 ರ ಏಪ್ರಿಲ್ 17 ರಂದು ಮಗುವನ್ನು ರಕ್ಷಿಸಲಾಗಿತ್ತು.

ಪ್ರಕರಣದ ಸಂಬಂಧ ಆರೋಪಿಗಳಾದ ಮನೋಜ್ ಶಾ ಮತ್ತು ಪ್ರದೀಪ್ ಕುಮಾರ್ ಎಂಬವರನ್ನು 2013 ರಲ್ಲಿ ದೆಹಲಿ ಪೊಲೀಸರು ಮುಜಫರ್ ಪುರ್ ಮತ್ತು ಬಿಹಾರದ ದರ್ಭಂಗಾದಲ್ಲಿ ಬಂಧಿಸಿದ್ದರು. ಇದೀಗ ನ್ಯಾಯಾಲಯ ಕೂಡ ಅವರನ್ನು ಅಪರಾಧಿಗಳು ಎಂದು ಘೋಷಿಸಿದೆ.

ಯುಎನ್ಐ ಎಎಚ್ 2033

More News
ಅಹಮದಾಬಾದ್ ನಲ್ಲಿ ಡೊನಾಲ್ಡ್ ಟ್ರಂಪ್ ಬೃಹತ್ ರೋಡ್ ಶೋ: ಸಬರಮತಿ ಆಶ್ರಮಕ್ಕೆ ಭೇಟಿ

ಅಹಮದಾಬಾದ್ ನಲ್ಲಿ ಡೊನಾಲ್ಡ್ ಟ್ರಂಪ್ ಬೃಹತ್ ರೋಡ್ ಶೋ: ಸಬರಮತಿ ಆಶ್ರಮಕ್ಕೆ ಭೇಟಿ

24 Feb 2020 | 3:45 PM

ಅಹಮದಾಬಾದ್, ಫೆ 24 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಮತ್ತು ವರ್ಣರಂಜಿತ ಸ್ವಾಗತ ಪಡೆಯುವುದರ ಮೂಲಕ ತಮ್ಮ ಮೊದಲ ಅಧಿಕೃತ ಭಾರತ ಭೇಟಿಯನ್ನು ಆರಂಭಿಸಿದರು.

 Sharesee more..