Wednesday, Oct 28 2020 | Time 17:00 Hrs(IST)
 • ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ
 • ಕೋವಿಡ್‍-19: 4 39 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ರಾಜ್ಯದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಕೆ
 • ಕಾಶ್ಮೀರದಲ್ಲಿ 370ನೇವಿಧಿ ರದ್ದಾದ ಮೇಲೆ ಏನು ಬದಲಾಗಿದೆ: ಶಿವಸೇನೆ ಪ್ರಶ್ನೆ
 • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
 • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
 • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
 • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
 • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
 • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
 • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
 • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
 • ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೇಲಿನ ನಿಷೇಧ ವಿಸ್ತರಣೆ
Entertainment Share

ಗ್ರಾಫಿಕ್ಸ್ ಆಧರಿತ ಚಿತ್ರ ನಿರ್ಮಿಸಲಿರುವ ಸಂಜಯ್ ಗುಪ್ತಾ

ಮುಂಬೈ, ಸೆ.18 (ಯುಎನ್ಐ)- ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಸಂಜಯ್ ಗುಪ್ತಾ 'ರಕ್ಷಕ್' ಎಂಬ ಗ್ರಾಫಿಕ್ ಆಧಾರಿತ ಚಿತ್ರ ಮಾಡಲು ಹೊರಟಿದ್ದಾರೆ.

ಸಂಜಯ್ ಗುಪ್ತಾ 'ರಕ್ಷಕ್' ಎಂಬ ಗ್ರಾಫಿಕ್ ಚಿತ್ರ ಮಾಡಲು ಹೊರಟಿದ್ದಾರೆ. 'ರಕ್ಷಕ್' ಜನರನ್ನು ರಕ್ಷಿಸುವ ಸೂಪರ್ ಹೀರೋ. ಗ್ರಾಫಿಕ್ ಆಧಾರಿತ ಭಾರತದ ಮೊದಲ ಚಲನಚಿತ್ರ ಇದಾಗಿದೆ. ಕಳೆದ ವರ್ಷ, ಸಂಜಯ್ ಗುಪ್ತಾ ತಮ್ಮ ನಿರ್ಮಾಣ ಬ್ಯಾನರ್ ವೈಟ್ ಫೆದರ್ ಫಿಲ್ಮ್ಸ್ 'ರಕ್ಷಕ್ - ಎ ಹೀರೋ ಅಮಾಂಗ್ ಅಸ್' ಎಂಬ ಗ್ರಾಫಿಕ್ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ಘೋಷಿಸಿದ್ದರು. ಚಿತ್ರದ ಚಿತ್ರಕಥೆಯನ್ನು ಸಂಜಯ್ ಗುಪ್ತಾ, ಸಮೀರ್ ಹಫೀಜ್ ಮತ್ತು ಶಾಮಿಕ್ ದಾಸ್‌ಗುಪ್ತಾ ಬರೆದಿದ್ದಾರೆ.

ಸಂಜಯ್ ಗುಪ್ತಾ, "ನಾನು ನನ್ನ ಮತ್ತೊಂದು ಚಿತ್ರದ ಕೆಲಸ ಮಾಡುವಾಗ, 'ರಕ್ಷಕ್' ನ ಲೇಖಕ ಶಾಮಿಕ್ ದಾಸ್‌ಗುಪ್ತಾ ಅವರನ್ನು ಭೇಟಿಯಾದೆ. ಆ ಸಮಯದಲ್ಲಿ, ಅವರು ನನ್ನೊಂದಿಗೆ ಎಲ್ಲಾ ಪುಸ್ತಕಗಳನ್ನು ತೋರಿಸಿದ್ದರು ಆದರೆ ನನ್ನ ಇತರ ಪ್ರಮುಖ ಕೆಲಸಗಳ ಒತ್ತಡದಲ್ಲಿ ನಾನು ಅದನ್ನು ಮರೆತಿದ್ದೆ. ಆದರೆ ನನ್ನ ಮುಂಬರುವ 'ಮುಂಬೈ ಸಾಗಾ' ಚಿತ್ರದ ಸೆಟ್ ನಲ್ಲಿ ಶಮಿಕ್ ಬಂದಾಗ, ಜಾನ್ ಅಬ್ರಹಾಂ ಇದ್ದರು. ಆಗ ಅವರು ಇದನ್ನು ನನಗೆ ನೆನಪಿಸಿದರು" ಎಂದಿದ್ದಾರೆ.

"ಈ ಚಿತ್ರಕ್ಕಾಗಿ ಯಾವುದೇ ಕಲಾವಿದರನ್ನು ಇನ್ನೂ ನಿರ್ಧರಿಸಲಾಗಿಲ್ಲ. "ನಾಯಕ ಮಾತ್ರವಲ್ಲ, ಸಮರ ಕಲೆಗಳಂತಹ ಕಲೆಗಳಲ್ಲಿ ನುರಿತ ಒಬ್ಬ ಪ್ರಬಲ ಮೇಲ್ವಿಚಾರಕನನ್ನೂ ನಾನು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಯುಎನ್ಐ ವಿಎನ್ಎಲ್ 1502