Sunday, May 31 2020 | Time 20:07 Hrs(IST)
 • ಚೀನಾ ಗಡಿಯಲ್ಲಿ ಸೇನೆ ಮೇಲಿನ ಹಿಂಸಾಚಾರದ ವಿಡಿಯೋ ಸತ್ಯಕ್ಕೆ ದೂರವಾದುದು; ವಕ್ತಾರ
 • ಜೂನ್‌ 1ರ ಬದಲು 8ರಿಂದ ದೇವಸ್ಥಾನ ತೆರೆಯಲು ನಿರ್ಧಾರ; ಕೋಟ ಶ್ರೀನಿವಾಸ ಪೂಜಾರಿ
 • ಬಾಕ್ಸರ್ ಡಿಂಕೊ ಸಿಂಗ್ ಗೆ ಕೋವಿಡ್ ದೃಢ
 • ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಟ್ಟಡಗಳ ನೆಲಸಮಕ್ಕೆ ಜಿಲ್ಲಾಧಿಕಾರಿ ಆದೇಶ
 • ಪೊಲೀಸ್ ಪೇದೆಗೆ ಕೋವಿಡ್ ದೃಢ: ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್
 • ಜೂನ್ 4 ರವರೆಗೆ ಆಳ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
 • ದಕ್ಷಿಣ ಕನ್ನಡದಲ್ಲಿ ಕಂಡುಬಂದ ಮಿಡತೆ ಲೋಕಸ್ಟ್ ಮಿಡತೆಯಲ್ಲ: ಕೃಷಿ ಇಲಾಖೆ ಸ್ಪಷ್ಟನೆ
 • ಮದುವೆಗೂ ಮುನ್ನವೇ ತಂದೆಯಾಗುವ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ‌
 • ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ
 • 3 ಬಾರಿ ಒಲಿಂಪಿಕ್ ಚಾಂಪಿಯನ್ ಬಾಬಿ ನಿಧನ
 • ಇಂದಿನಿಂದ ಲಂಕಾ ಕ್ರಿಕೆಟಿಗರ ಅಭ್ಯಾಸ ಶುರು
 • ಅಮೇರಿಕಾ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹರಿಸುವಂತೆ ಸಿದ್ದರಾಮಯ್ಯ ಒತ್ತಾಯ
 • ರಾಜ್ಯದಲ್ಲಿ ಒಂದೇ ದಿನ 299 ಕೊರೋನಾ ಸೋಂಕಿತರು ಪತ್ತೆ, ಒಟ್ಟು ಸಂಖ್ಯೆ 3221ಕ್ಕೇರಿಕೆ
 • ತಮ್ಮ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಇಬ್ಬರು ಭಾರತೀಯರನ್ನು ಹೆಸರಿಸಿದ ಅಂಪೈರ್ ಇಯಾನ್
 • ರಾಜ್ಯ ಸರ್ಕಾರದ ಲಾಕ್‌ ಡೌನ್‌ 5 0 ಹೊಸ ಮಾರ್ಗಸೂಚಿ ಪ್ರಕಟ; ಮೂರು ಹಂತಗಳಲ್ಲಿ ನಿರ್ಬಂಧ ಸಡಿಲಿಕೆ
Sports Share

ಗೆಲುವಿನ ಗುರಿಯೊಂದಿಗೆ ಅಂಗಳಕ್ಕೆ ಇಳಿದಿದ್ದೇವು: ರೋಹಿತ್

ಗೆಲುವಿನ ಗುರಿಯೊಂದಿಗೆ ಅಂಗಳಕ್ಕೆ ಇಳಿದಿದ್ದೇವು: ರೋಹಿತ್
ಗೆಲುವಿನ ಗುರಿಯೊಂದಿಗೆ ಅಂಗಳಕ್ಕೆ ಇಳಿದಿದ್ದೇವು: ರೋಹಿತ್

ರಾಜ್ ಕೋಟ್, ನ.8 (ಯುಎನ್ಐ)- ಬಾಂಗ್ಲಾದೇಶ ವಿರುದ್ಧದ ಮಹತ್ವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿದ್ದು, ಪರಿಸ್ಥಿತಿಗಳ ಲಾಭವನ್ನು ಪಡೆದುಕೊಳ್ಳುವುದು ಮತ್ತು ಗೆಲ್ಲುವುದೇ ನಮ್ಮ ಗುರಿಯಾಗಿತ್ತು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.ದೆಹಲಿಯಲ್ಲಿ ನಡೆದ ಮೊದಲ ಟಿ -20 ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು. ಆದರೆ ಎರಡನೇ ಪಂದ್ಯ ಗೆಲ್ಲುವ ಮೂಲಕ, ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮನಾಗಿಸಿದೆ. ರೋಹಿತ್ ಅವರ ವೃತ್ತಿಜೀವನದ 100 ನೇ ಟಿ -20 ಪಂದ್ಯವಾಗಿತ್ತು."ವಾಷಿಂಗ್ಟನ್ ಸುಂದರ್ ಮತ್ತು ಚಹಾಲ್ ಇಬ್ಬರೂ ಉತ್ತಮ ಬೌಲಿಂಗ್ ನಡೆಸಿದರು. ಕಳೆದ ಪಂದ್ಯದಲ್ಲಿನ ಕಹಿಯನ್ನು ಮರೆತು ಆಡಿದ್ದೇವೆ. ಚಹಾಲ್ ಕಠಿಣ ಸಂದರ್ಭಗಳಲ್ಲಿ ತಂಡವನ್ನು ಬೌಲ್ ಮಾಡಿದ್ದಾರೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ” ಎಂದು ರೋಹಿತ್ ತಿಳಿಸಿದ್ದಾರೆ.“ನಾವು ಅನೇಕ ತಪ್ಪುಗಳನ್ನು ಮಾಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮ ಸಂಪೂರ್ಣ ಗಮನವು ಪಂದ್ಯವನ್ನು ಗೆಲ್ಲುವತ್ತ ಇತ್ತು. ರಾಜ್‌ಕೋಟ್‌ನ ಟ್ರ್ಯಾಕ್ ತುಂಬಾ ಚೆನ್ನಾಗಿದೆ ಎಂದು ನಮಗೆ ತಿಳಿದಿತ್ತು, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ತೊಂದರೆ ಉಂಟಾಗುತ್ತದೆ ಎಂದು ನಮಗೆ ತಿಳಿದಿತ್ತು. ನಾವು ಅದರ ಲಾಭವನ್ನು ಪಡೆದುಕೊಂಡಿದ್ದೇವೆ ಮತ್ತು ಪವರ್‌ಪ್ಲೇನಲ್ಲಿಯೂ ಉತ್ತಮವಾಗಿ ಆಡಿದ್ದೇವೆ ” ಎಂದಿದ್ದಾರೆ.ಯುಎನ್ಐ ವಿಎನ್ಎಲ್ 1655

More News

3 ಬಾರಿ ಒಲಿಂಪಿಕ್ ಚಾಂಪಿಯನ್ ಬಾಬಿ ನಿಧನ

31 May 2020 | 7:11 PM

 Sharesee more..

ಇಂದಿನಿಂದ ಲಂಕಾ ಕ್ರಿಕೆಟಿಗರ ಅಭ್ಯಾಸ ಶುರು

31 May 2020 | 6:49 PM

 Sharesee more..
2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್

2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್

31 May 2020 | 6:29 PM

ನವದೆಹಲಿ,ಮೇ 31(ಯುಎನ್ಐ) ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ 2007ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನುಂಗಲಾರದ ತುತ್ತು. ಟೂರ್ನಿಯಲ್ಲಿ ಪ್ರಶಸ್ತಿ ಫೇವರಿಟ್‌ ತಂಡವಾಗಿ ಕಣಕ್ಕಿಳಿದಿದ್ದ ಭಾರತ ತಂಡ 'ಬಿ' ಗುಂಪಿನ ಲೀಗ್‌ ಹಂತದ ಸ್ಪರ್ಧೆ ದಾಟುವಲ್ಲಿಯೇ ವಿಫಲವಾಗಿ ಅತ್ಯಂತ ಹೀನಾಯ ಪ್ರದರ್ಶನ ನೀಡಿತ್ತು.

 Sharesee more..