Sunday, Nov 29 2020 | Time 18:22 Hrs(IST)
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
 • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
 • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
 • ಮಾರಕಾಸ್ತ್ರಗಳಿಂದ ಕೊಚ್ಚಿ‌ ಯುವಕನ ಕೊಲೆ
 • ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ನಿಂದ ಮಹತ್ವದ ಕ್ರಮ
 • ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ಲೈನ್ ಮನ್ ಸಾವು: ಮತ್ತೋರ್ವ ಚಿಂತಾಜನಕ
 • ವಿದ್ಯುತ್ ಸ್ಪರ್ಶ: ಕಂಟೈನರ್ ಕ್ಲೀನರ್ ಗೆ ಗಂಭೀರ ಗಾಯ
 • ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ ಕೆ ಶಿವಕುಮಾರ್ ಪ್ರಶ್ನೆ
 • ಪ್ರಧಾನಿ ಭೇಟಿ ಹಿನ್ನೆಲೆ: ಸ್ವಾಗತಕ್ಕೆ ವಾರಾಣಸಿ ಸಜ್ಜು
 • ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ
 • ಜನತೆಗೆ ಗುರುನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ
National Share

ಗೋವಾದಲ್ಲಿ ಸಮುದ್ರದಲ್ಲಿ ಮುಳುಗಿದ್ದ ಮೂವರು ಪ್ರವಾಸಿಗರ ರಕ್ಷಣೆ: ಓರ್ವ ಸಾವು

ಪಣಜಿ, ಅ 3 (ಯುಎನ್‌ಐ) ಬಾಗಾ, ಕ್ಯಾಂಡೋಲಿಮ್ ಮತ್ತು ಅಶ್ವೆಮ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಪುರುಷ ಪ್ರವಾಸಿಗರನ್ನು ‘ದೃಷ್ಟಿ’ ಜೀವ ರಕ್ಷಕರು ಕಾಪಾಡಿದ್ದು, ಮತ್ತೊಂದು ಬೈನಾದಲ್ಲಿ ನಡೆದ ಘಟನೆಯಲ್ಲಿ ಮೀನು ಹಿಡಿಯುತ್ತಿದ್ದ ಓರ್ವ ಪುರುಷ ಸಾವನ್ನಪ್ಪಿದ್ದಾನೆ.
ಕರಾವಳಿ ರಾಜ್ಯದ ಕಡಲತೀರಗಳನ್ನು ನಿರ್ವಹಿಸಲು ರಾಜ್ಯ ನಿಯೋಜಿಸಿರುವ ‘ದೃಷ್ಟಿ’ ಸಂಸ್ಥೆಯ ಹೇಳಿಕೆಯಂತೆ, ಸಮುದ್ರದಲ್ಲಿ ಮುಳುಗುತ್ತಿದ್ದ ಉಗಾಂಡಾದ 23 ವರ್ಷದ ಪ್ರವಾಸಿಗನನ್ನು ಜೀವ ರಕ್ಷಕ ಮಂಗೇಶ್ ಗವಾಸ್ ರಕ್ಷಿಸಿದ್ದಾರೆ. ಡ್ರಿಫ್ಟಿಂಗ್ ಮಾಡುತ್ತಿದ್ದ ವ್ಯಕ್ತಿ ಸಹಾಯಕ್ಕೆ ಕೂಗುತ್ತಿರುವುದನ್ನು ಮಹೇಶ್ ಗಮನಿಸಿದ್ದಾರೆ. ತಕ್ಷಣ ಸಮುದ್ರಕ್ಕೆ ಜಿಗಿದು ವ್ಯಕ್ತಿಯನ್ನು ಪಾರು ಮಾಡಿ ದಡ ಸೇರಿಸಿದ್ದಾರೆ.
ಕ್ಯಾಂಡೋಲಿಮ್‍ ನಲ್ಲಿ ನಡೆದ ಇಂತಹುದೇ ಘಟನೆಯಲ್ಲಿ, ಯುನೈಟೆಡ್ ಕಿಂಗ್ ಡಮ್‍ ಮೂಲದ 60 ವರ್ಷದ ಪ್ರವಾಸಿಗ ಭಾರೀ ಅಲೆಗಳಿಗೆ ಸಿಲುಕಿದ್ದಾನೆ. ಜೀವರಕ್ಷಕ ಚಂದನ್ ಗಿರಿ ಸಮುದ್ರಕ್ಕೆ ಇಳಿದು ಆತನನ್ನು ಕಾಪಾಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಸಂಜೆ ಅಶ್ವೆಮ್ ನಲ್ಲಿ ಮುಂಬೈನ 34 ವರ್ಷದ ಪುರುಷ ಪ್ರವಾಸಿಗನನ್ನು ಜೀವರಕ್ಷಕ ನಾಗೇಶ್ ಸಾರಂಗ್ ರಕ್ಷಿಸಿದ್ದಾರೆ.
ದುರದೃಷ್ಟಕರ ಘಟನೆಯಲ್ಲಿ ಬೈನಾದಲ್ಲಿ ಕಲ್ಲಿನ ಪ್ರದೇಶದಿಂದ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬ ಸಮುದ್ರಕ್ಕೆ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ವ್ಯಕ್ತಿಯನ್ನು 33 ವರ್ಷದ ಬೆಳಗಾವಿ ನಿವಾಸಿಯೆಂದು ಗುರುತಿಸಲಾಗಿದೆ. ಗೋವಾದಲ್ಲಿ ಗಡಿಗಳನ್ನು ತೆರೆಯುವುದರೊಂದಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಮುಂಗಾರು ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿನ ಕಡಲತೀರಗಳಿಗೆ ಧಾವಿಸುತ್ತಿದ್ದಾರೆ.
ಯುಎನ್ಐ ಎಸ್‍ಎಲ್ಎಸ್ 1102
More News
ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

29 Nov 2020 | 5:15 PM

ಚೆನ್ನೈ, ನ 29 (ಯುಎನ್‌ಐ) ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಾಳೆ ರಜಿನಿ ಮಕ್ಕಳ್‍ ಮಂದಿರಂ (ಆರ್ ಎಂಎಂ) ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನಾಲ್ಕೈದು ತಿಂಗಳಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸಲಿದ್ದಾರೆ.

 Sharesee more..
ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

29 Nov 2020 | 5:10 PM

ನವದೆಹಲಿ, ನ 29 (ಯುಎನ್ಐ) ಹಣದ ಕೊರತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ವೇತನ ತಡೆಹಿಡಿದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ, ಎಸ್‌ಸಿ ಮತ್ತು ಎಸ್‌ಟಿ ಯಾವಾಗಲೂ ಹಿಂದುಳಿದಿರಬೇಕು ಎಮದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತದೆ ಎಂದು ಆರೋಪಿಸಿದ್ದಾರೆ.

 Sharesee more..
ಕೋವಿಡ್‌: ಯಾವುದೇ ನಿರ್ಲಕ್ಷ್ಯ ಮಾರಣಾಂತಿಕವಾಗಬಹುದು-ಮೋದಿ

ಕೋವಿಡ್‌: ಯಾವುದೇ ನಿರ್ಲಕ್ಷ್ಯ ಮಾರಣಾಂತಿಕವಾಗಬಹುದು-ಮೋದಿ

29 Nov 2020 | 5:00 PM

ನವದೆಹಲಿ, ನ 29 (ಯುಎನ್ಐ) ಕೋರೋನಾ ವೈರಸ್‌ ಸೋಂಕನ್ನು ನಿರ್ಲಕ್ಷ್ಯಿಸುವುದು ಮಾರಣಾಂತಿಕವಾಗಿ ಪರಿಗಣಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

 Sharesee more..