Monday, Nov 30 2020 | Time 09:36 Hrs(IST)
  • ವಾರಾಣಸಿಗೆ ಇಂದು ಪ್ರಧಾನಿ ಭೇಟಿ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ
  • ನೈಜೀರಿಯಾದಲ್ಲಿ ನರಮೇಧ: ಕನಿಷ್ಠ 110 ನಾಗರಿಕರು ಬಲಿ
  • ಎಫ್ ಬಿ ಐ ವಿರುದ್ದ ಡೊನಾಲ್ಡ್ ಟ್ರಂಪ್ ಆಕ್ರೋಶ
  • ನಾಯಿಯೊಂದಿಗೆ ಆಟ- ಬೈಡೆನ್ ಕಾಲಿನ ಮೂಳೆ ಮುರಿತ !!
  • ಸಾಕು ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು ಗಾಯಗೊಂಡ ಜೋ ಬೈಡನ್
  • ಶಿವಸೇನೆಗೆ ಉರ್ಮಿಳಾ ಮಾತೋಂಡ್ಕರ್ ?
  • ನ್ಯೂಯಾರ್ಕ್ ನಲ್ಲಿ ಡಿಸೆಂಬರ್ 7ರಿಂದ ಶಾಲೆಗಳು ಪುನರಾರಂಭ
  • ಇಂದು ವಾರಣಾಸಿಗೆ ಪ್ರಧಾನಿ ಮೋದಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ
National Share

ಚಕ್ರ ಬಡ್ಡಿ ಮನ್ನಾ, ಸಾಲಗಾರರಿಗೆ ಕೇಂದ್ರದಿಂದ ಕೊಂಚ ರಿಲೀಫ್

ಚಕ್ರ ಬಡ್ಡಿ ಮನ್ನಾ, ಸಾಲಗಾರರಿಗೆ ಕೇಂದ್ರದಿಂದ ಕೊಂಚ ರಿಲೀಫ್
ಚಕ್ರ ಬಡ್ಡಿ ಮನ್ನಾ, ಸಾಲಗಾರರಿಗೆ ಕೇಂದ್ರದಿಂದ ಕೊಂಚ ರಿಲೀಫ್

ನವದೆಹಲಿ, ಅ 3 (ಯುಎನ್ಐ) ಶಿಕ್ಷಣ, ಮನೆ, ಗ್ರಾಹಕ, ವಾಹನ ಸಾಲಗಳಿಗೆ ಅನ್ವಯವಾಗುವ ಸಾಲದ ಮೇಲಿನ ಚಕ್ರಬಡ್ಡಿ ಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸುಪ್ರೀಂ ಕೋರ್ಟ್ ಗೆ ಹೇಳಿದೆ.ಈ ಮೂಲಕ ಕೇಂದ್ರ ಸಾಲ ಗಾರರಿಗೆ ದೊಡ್ಡ ಪರಿಹಾರ ಘೋಷಿಸಿದೆ. ಎಂಎಸ್ ಎಂಇ ಸಾಲ, ಶಿಕ್ಷಣ, ವಸತಿ, ಗ್ರಾಹಕ, ಆಟೋ, ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಬಳಕೆ ಸಾಲಗಳಿಗೆ ಅನ್ವಯವಾಗುವ ಚಕ್ರಬಡ್ಡಿ (ಬಡ್ಡಿ ಮೇಲಿನ ಬಡ್ಡಿ) ಮನ್ನಾ ಮಾಡಲಾಗುವುದು ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

ಕರೋನಾ ವೈರಸ್ ಸಾಂಕ್ರಾಮಿಕ ರೋಗ ಕಂಡು ಬಂದ ಸಂದರ್ಭದಲ್ಲಿ ಸರ್ಕಾರ ಬಡ್ಡಿ ಹೊರೆ ಯನ್ನು ಹೊರಬೇಕು ಎಂದು ಕೋರ್ಟ್ ಹೇಳಿತ್ತು ಇದೇ ವೇಳೆ, ಸೂಕ್ತ ಅನುದಾನಕ್ಕೆ ಸಂಸತ್ತಿನಿಂದ ಅನುಮತಿ ಕೋರುವುದಾಗಿ ಹೇಳಿದೆ.

ಇಎಂಐ ಮರುಪಾವತಿ ಮಾಡದ ಸ್ಥಿತಿಯಲ್ಲಿ ಹಲವರು ಇದ್ದರು. ಹೀಗಾಗಿ ಯೇ ಆರು ತಿಂಗಳವರೆಗೆ ಇಎಂಐಗಳನ್ನು ಪಾವತಿಸದಂತೆ ಆರ್ ಬಿಐ ಆದೇಶ ನೀಡಿದೆ.ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯುವವರು ಇನ್ನು ಮುಂದೆ ಬಡ್ಡಿಗೆ ಹೆಚ್ಚುವರಿ ಹಣ ಪಾವತಿಸಬೇಕಿಲ್ಲ. ಆದರೆ ಅಂತಹ ಗ್ರಾಹಕರು ಸಾಲದ ಮೇಲಿನ ಸಾಮಾನ್ಯ ಬಡ್ಡಿಯನ್ನು ಮಾತ್ರ ನೀಡಬೇಕಿದೆ.

ಯುಎನ್ಐ ಕೆಎಸ್ಆರ್ 1316

More News
ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

29 Nov 2020 | 8:35 PM

ಕಾಬೂಲ್, ನ 29 (ಯುಎನ್‍ಐ)- ಆಫ್ಥಾನಿಸ್ತಾನದ ಪೂರ್ವ ಪ್ರಾಂತ್ಯವಾದ ಲಾಗ್ಮಾನ್‌ನಲ್ಲಿ ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಆರು ಕಮಾಂಡರ್‌ಗಳು ಸೇರಿದಂತೆ 30 ತಾಲಿಬಾನ್ ಉಗ್ರರು ಹತರಾಗಿದ್ದು, ಇತರ 17 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನ ಸೇನೆಯ ಪೂರ್ವ ವಿಭಾಗ ಭಾನುವಾರ ತಿಳಿಸಿದೆ.

 Sharesee more..