Thursday, Jan 21 2021 | Time 04:49 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Special Share

ಚಂಡಮಾರುತ: ದೇವರ ನಾಡು ಕೇರಳಕ್ಕೆ ಮತ್ತೆ ವರುಣನ ಕಾಟ..!!

ಚಂಡಮಾರುತ: ದೇವರ ನಾಡು ಕೇರಳಕ್ಕೆ ಮತ್ತೆ ವರುಣನ ಕಾಟ..!!
ಚಂಡಮಾರುತ: ದೇವರ ನಾಡು ಕೇರಳಕ್ಕೆ ಮತ್ತೆ ವರುಣನ ಕಾಟ..!!

ತಿರುವನಂತಪುರ, ಡಿ 1 (ಯುಎನ್ಐ) ನಿವಾರ್ ಚಂಡಮಾರುತ ಅಬ್ಬರಿಸಿದ ಬೆನ್ನಲ್ಲೇ, ಇದೀಗ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಈ ವಾರ ರಾಜ್ಯದ ಕೆಲ ಭಾಗದಲ್ಲಿ ಮತ್ತೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೀಗಾಗಿ ದೇವರ ನಾಡು ಕೇರಳದ ನಾಲ್ಕು ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪತ್ತಂತಿಟ್ಟ, ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಡಿಸೆಂಬರ್ 3ರವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಅದೇ ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.



ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ತೀವ್ರಗೊಂಡಿದ್ದು, ಇಂದಿನಿಂದ ತಮಿಳುನಾಡು, ಕೇರಳ ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದೂ ಇಲಾಖೆ ವರದಿ ಹೇಳಿದೆ.

ಮತ್ತೊಂದೆಡೆ ತಮಿಳುನಾಡು ರಾಜ್ಯಕ್ಕೆ ನಿವಾರ್ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಭೀತಿ ಎದುರಾಗಿದ್ದು, ತಮಿಳುನಾಡಿನ ಕರಾವಳಿಯಲ್ಲೂ ಮತ್ತೆ ಕಟ್ಟೆಚ್ಚರ ಘೋಷಿಸಲಾಗಿದೆ.

ಯುಎನ್ಐ ಕೆಎಸ್ ಆರ್ 0932

More News
ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

20 Jan 2021 | 3:56 PM

ನವದೆಹಲಿ, ಜ 20(ಯುಎನ್ಐ)- ಸ್ವಯಂ ಘೋಷಿತ ಆಧ್ಯಾತ್ಮಿಕ ಗುರುಗಳು ನಡೆಸುತ್ತಿರುವ ಆಶ್ರಮಗಳ ವಿರುದ್ಧ ಕ್ರಮ ಜರುಗಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಖಟ್ಲೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

 Sharesee more..