Monday, Sep 23 2019 | Time 01:49 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
International Share

ಚೀನಾದಲ್ಲಿ ಭಾರಿ ಮಳೆ: ಏಳು ಸಾವು, 24 ಮಂದಿ ನಾಪತ್ತೆ

ಚೆಂಗ್ಡು, ಆಗಸ್ಟ್ 21 (ಕ್ಸಿನ್ಹುವಾ) ಚೀನಾದ ಸಿಚುವಾನ್ ಪ್ರಾಂತ್ಯದ ಅಬಾ ಟಿಬೆಟಿಯನ್ ಮತ್ತು ಕಿಯಾಂಗ್ ಸ್ವಾಯತ್ತ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದ ಪರಣಾಮ ಏಳು ಜನರು ಸಾವನ್ನಪ್ಪಿದ್ದು, 24 ಮಂದಿ ನಾಪತ್ತೆಯಾಗಿದ್ದಾರೆ.
17 ನಗರಗಳಲ್ಲಿ ಮಂಗಳವಾರ ಸಂಜೆ ತನಕ ಧಾರಾಕಾರ ಮಳೆ ಸುರಿದ ಪರಿಣಾಮ ಕನಿಷ್ಠ ಆರು ಜನ ಗಾಯಗೊಂಡಿದ್ದು, ಮೂರು ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಧಾರಾಕಾರ ಮಳೆಯಿಂದಾಗಿ ವೆಂಚುವಾನ್ ಕೌಂಟಿಯಲ್ಲಿ ಭೂಕುಸಿತವಾಗಿದ್ದು, 34 ಸಾವಿರಕ್ಕೂ ಹೆಚ್ಚು ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ. ಇನ್ನೂ 13 ಸಾವಿರ ಪ್ರವಾಸಿಗರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಸ್ಥೆ ತಿಳಿಸಿದೆ.
ವೆಂಚುವಾನ್‌ನ ವೊಲಾಂಗ್ ವಿಶೇಷ ಆಡಳಿತ ಪ್ರದೇಶದಲ್ಲಿ 12,000 ಪ್ರವಾಸಿಗರು ಸಿಲುಕಿದ್ದು ಅವರನ್ನು ಸ್ಥಳಾಂತರಿಸಲು ಸ್ಥಳೀಯ ಆಡಳಿತ ಸಜ್ಜುಗೊಳ್ಳುತ್ತಿದೆ. ಮಳೆಯಿಂದಾಗಿ ವೊಲಾಂಗ್‌ನ ಜೇಂಗ್ಡಾ ಪಟ್ಟಣದಲ್ಲಿ ವಿದ್ಯುತ್ ಕಡಿತಗೊಂಡಿದ್ದು, ತುರ್ತು ಸಂವಹನ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ.
ಯುಎನ್ಐ ಪಿಕೆ ಎಎಚ್ 1614