Friday, Nov 15 2019 | Time 12:53 Hrs(IST)
  • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
  • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
  • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
  • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
  • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
  • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
International Share

ಚಿಲಿ ಪ್ರತಿಭಟನೆ : ಮೃತರ ಸಂಖ್ಯೆ 10 ಕ್ಕೆ ಏರಿಕೆ

ಸ್ಯಾಂಟಿಗೋ, ಅ 21 (ಸ್ಫುಟ್ನಿಕ್) ಚಿಲಿಯಲ್ಲಿ ಮಾರುಕಟ್ಟೆ ತಾಣಗಳ ಬೆಂಕಿ ಅವಘಡದ ಸಂತ್ರಸ್ತರು ನಡೆಸಿರುವ ಪ್ರತಿಭಟನೆಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ.
ಚಿಲಿ ರಾಜಧಾನಿ ಸ್ಯಾಂಟಿಗೋದಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ಭಾನುವಾರ ವರದಿಯಾಗಿತ್ತು. ಮಾರುಕಟ್ಟೆಗೆ ಬೆಂಕಿ ತಗುಲುವ ಮುನ್ನ ಮಾರುಕಟ್ಟೆಯನ್ನು ದೋಚಲಾಗಿತ್ತು ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರ ಸಬ್ ವೇ ದರಗಳನ್ನು ಹೆಚ್ಚಳ ಮಾಡಿದ ನಂತರ ಅಕ್ಟೋಬರ್ 6 ರಂದು ಚಿಲಿಯಲ್ಲಿ ಹಿಂಸಾಚಾರದ ವಾತಾವರಣವಿದೆ. ಇದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಗಳು ಆರಂಭವಾದರು, ಕ್ರಮೇಣ ಅವು ಹಿಂಸಾಚಾರಕ್ಕೆ ತಿರುಗಿದವು. ಶುಕ್ರವಾರ ಪ್ರತಿಭಟನಾಕಾರರು ಅನೇಕ ಸಬ್ ವೇ ನಿಲ್ದಾಣಗಳು, ಬಸ್ ಮತ್ತು ಕಚೇರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದರು. ವಾರಾಂತ್ಯದ ದಿನದಂದು ಸಬ್ ವೇ ಬಂದ್ ಮಾಡಲಾಗಿತ್ತು.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಅಲ್ಲಿನ ಆಡಳಿತ ತುರ್ತು ಪರಿಸ್ಥಿತಿ ಘೋಷಿಸಿ ಕೆಲವೆಡೆ ಕರ್ಫ್ಯೂ ವಿಧಿಸಿದೆ.
ಯುಎನ್ಐ ಜಿಎಸ್ಆರ್ 0929