Saturday, Jul 11 2020 | Time 09:09 Hrs(IST)
International Share

ಜಗತ್ತಿನಾದ್ಯಂತ ಒಂದು ಕೋಟಿಗೂ ಅಧಿಕ ಕೊರೊನಾ ಸೋಂಕು ಪ್ರಕರಣ; 5 ಲಕ್ಷಕ್ಕೂ ಹೆಚ್ಚು ಸಾವು

ಜಗತ್ತಿನಾದ್ಯಂತ ಒಂದು ಕೋಟಿಗೂ ಅಧಿಕ ಕೊರೊನಾ ಸೋಂಕು ಪ್ರಕರಣ; 5 ಲಕ್ಷಕ್ಕೂ ಹೆಚ್ಚು ಸಾವು
ಜಗತ್ತಿನಾದ್ಯಂತ ಒಂದು ಕೋಟಿಗೂ ಅಧಿಕ ಕೊರೊನಾ ಸೋಂಕು ಪ್ರಕರಣ; 5 ಲಕ್ಷಕ್ಕೂ ಹೆಚ್ಚು ಸಾವು

ವಾಷಿಂಗ್ಟನ್, ಜೂನ್ 28 (ಯುಎನ್ಐ) ಜಗತ್ತಿನಾದ್ಯಂತ ಒಂದು ಕೋಟಿಗೂ ಅಧಿಕ ಕೊರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿದ್ದು ಐದು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.



ಸೋಮವಾರ ಬೆಳಗಿನ ವೇಳೆಗೆ 1,01,14,726 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು 5,01,206 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ವಿಶ್ವವಿದ್ಯಾಲಯದ ಅಂಕಿಅಂಶ ತಿಳಿಸಿದೆ.



ಅಮೆರಿಕದಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗಿವೆ. ಅಮೆರಿಕದಲ್ಲಿ 25,47,621 ಸೋಂಕು ಪ್ರಕರಣ ವರದಿಯಾಗಿದ್ದು 1,25,793 ಜನರು ಸಾವನ್ನಪ್ಪಿದ್ದಾರೆ. ನಂತರದ ಸ್ಥಾನದಲ್ಲಿ ಬ್ರೆಜಿಲ್ ಇದ್ದು 13,44,143 ಜನರಿಗೆ ಸೋಂಕು ತಗುಲಿದ್ದು 57,622 ಜನರು ಮೃತಪಟ್ಟಿದ್ದಾರೆ. ಬ್ರಿಟನ್, ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಮೆಕ್ಸಿಕೋಗಳಲ್ಲೂ 20 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ.



ವಿಶ್ವಾದ್ಯಂತ ಕಳೆದ 24 ಗಂಟೆಗಳಲ್ಲಿ 1,89,077 ಪ್ರಕರಣಗಳು ದೃಢಪಟ್ಟಿದ್ದು ಇದು ಒಂದೇ ದಿನದಲ್ಲಿ ವರದಿಯಾಗಿರುವ ಅತಿ ಹೆಚ್ಚು ಪ್ರಕರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಹೇಳಿದೆ.



ಹೊಸ ಪ್ರಕರಣಗಳು ಹೆಚ್ಚಾಗಿ ಬ್ರೆಜಿಲ್ ಮತ್ತು ಅಮೆರಿಕದಿಂದ ವರದಿಯಾಗಿದೆ. 19,906 ಹೊಸ ಪ್ರಕರಣಗಳು ಭಾರತದಿಂದ ವರದಿಯಾಗಿದೆ. ಭಾನುವಾರ 4612 ಜನರು ಸೋಂಕು ಸಂಬಂಧಿತ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಡಬ್ಲ್ಯು ಎಚ್ ಒ ದೃಢಪಡಿಸಿದೆ.

ಯುಎನ್ಐ ಜಿಎಸ್ಆರ್ 0721

More News

ದಕ್ಷಿಣ ಫಿಲಿಪೈನ್ಸ್ನಲ್ಲಿ 5 2-ತೀವ್ರತೆಯ ಭೂಕಂಪನ

11 Jul 2020 | 8:39 AM

 Sharesee more..
ಅಮೆರಿಕದಲ್ಲಿ ಒಂದೇ ದಿನದಲ್ಲಿ ಅತಿಹೆಚ್ಚು 63,200 ಕರೋನವೈರಸ್ ಪ್ರಕರಣಗಳು ವರದಿ

ಅಮೆರಿಕದಲ್ಲಿ ಒಂದೇ ದಿನದಲ್ಲಿ ಅತಿಹೆಚ್ಚು 63,200 ಕರೋನವೈರಸ್ ಪ್ರಕರಣಗಳು ವರದಿ

10 Jul 2020 | 8:57 PM

ವಾಷಿಂಗ್ಟನ್, ಜುಲೈ 10 (ಸ್ಪುಟ್ನಿಕ್) ಅಮೆರಿಕದಲ್ಲಿ ಒಂದೇ ದಿನದಲ್ಲಿ ಕೊರೊನವೈರಸ್‍ ಪ್ರಕರಣಗಳು ಹೊಸ ಎತ್ತರವನ್ನು ತಲುಪಿದ್ದು, ಕಳೆದ 24 ಗಂಟೆಗಳಲ್ಲಿ ಆರೋಗ್ಯ ಅಧಿಕಾರಿಗಳು 63,000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳನ್ನು ವರದಿ ಮಾಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ.

 Sharesee more..
ಸಿಂಗಾಪುರ ಸಾರ್ವತ್ರಿಕ ಚುನಾವಣೆಗೆ ಮತದಾನ ಆರಂಭ: ಕೊವಿಡ್‍ ಸೋಂಕಿತರಿಗೆ ಅವಕಾಶವಿಲ್ಲ

ಸಿಂಗಾಪುರ ಸಾರ್ವತ್ರಿಕ ಚುನಾವಣೆಗೆ ಮತದಾನ ಆರಂಭ: ಕೊವಿಡ್‍ ಸೋಂಕಿತರಿಗೆ ಅವಕಾಶವಿಲ್ಲ

10 Jul 2020 | 3:12 PM

ಸಿಂಗಾಪುರ, ಜುಲೈ 10 (ಯುಎನ್‌ಐ) ಸಿಂಗಾಪುರದಲ್ಲಿ ಸಾರ್ವತ್ರಿಕ ಚುನಾವಣೆಗೆ ಶುಕ್ರವಾರ ಮತದಾನ ಆರಂಭವಾಗಿದ್ದು, ಸ್ವಾತಂತ್ರ್ಯಾನಂತರದ 13ನೇ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.

 Sharesee more..