Thursday, Oct 22 2020 | Time 21:01 Hrs(IST)
 • ಶ್ರೀನಗರದಲ್ಲಿ ‘ಕಾಶ್ಮೀರ್ ಟೈಮ್ಸ್’ ಕಚೇರಿಗಳಿಗೆ ಮೊಹರು: ಎಡಿಟರ್ಸ್‍ ಗಿಲ್ಡ್ ಖಂಡನೆ
 • ಭಾರತದ ಈ ಕ್ರಮಗಳು ಚೀನಾ ದೇಶವನ್ನು ನಡುಗುವಂತೆ ಮಾಡಿವೆ: ಜೆ ಪಿ ನಡ್ಡಾ
 • ಅ 24ರಂದು ಪ್ರಧಾನಿಯಿಂದ ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ
 • ಪ್ರಾದೇಶಿಕ ಭಾಷೆಗಳಲ್ಲಿ ಜೆ ಇ ಇ ಮುಖ್ಯ ಪರೀಕ್ಷೆ: ರಮೇಶ್ ಪೋಖ್ರಿಯಾಲ್
 • ಪದವಿಪೂರ್ವ ಪಠ್ಯ ಶೇ 30 ರಷ್ಟು ಕಡಿತ
 • ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
 • ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ: ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು… !!!
 • ಬಿಹಾರಿಗಳ ಆತ್ಮಗೌರವ ಮಾರಾಟಕ್ಕಿಲ್ಲ , ತೇಜಸ್ವಿ ಯಾದವ್ ವಾಗ್ದಾಳಿ
 • ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
National Share

ಜನರಿಗೆ ಕೊವಿಡ್ ಲಸಿಕೆಗಳು ತ್ವರಿತವಾಗಿ ಲಭ್ಯವಾಗುವಂತೆ ಪ್ರಧಾನಿ ಮೋದಿ ಕರೆ

ಜನರಿಗೆ ಕೊವಿಡ್ ಲಸಿಕೆಗಳು ತ್ವರಿತವಾಗಿ ಲಭ್ಯವಾಗುವಂತೆ ಪ್ರಧಾನಿ ಮೋದಿ ಕರೆ
ಜನರಿಗೆ ಕೊವಿಡ್ ಲಸಿಕೆಗಳು ತ್ವರಿತವಾಗಿ ಲಭ್ಯವಾಗುವಂತೆ ಪ್ರಧಾನಿ ಮೋದಿ ಕರೆ

ನವದೆಹಲಿ, ಅ 17 (ಯುಎನ್‌ಐ) ಕೊವಿಡ್‍ ಸೋಂಕಿಗೆ ಲಸಿಕೆ ಸಿದ್ಧವಾದ ನಂತರ ದೇಶದ ಜನರಿಗೆ ತ್ವರಿತವಾಗಿ ಇದು ಲಭ್ಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.

ದೇಶದ ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಲಸಿಕೆ ವಿತರಣೆ, ವಿತರಣೆ ಮತ್ತು ಆಡಳಿತದ ಸನ್ನದ್ಧತೆಯನ್ನು ಪರಿಶೀಲಿಸುವ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ, ದೇಶದ ಭೌಗೋಳಿಕ ವ್ಯಾಪ್ತಿ ಮತ್ತು ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವೇಗವಾಗಿ ಲಸಿಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಆರೋಗ್ಯ ಸಚಿವ ಹರ್ಷವರ್ಧನ್, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ, ನೀತಿ ಆಯೋಗದ ಸದಸ್ಯ (ಆರೋಗ್ಯ), ಪ್ರಧಾನ ವೈಜ್ಞಾನಿಕ ಸಲಹೆಗಾರ, ಹಿರಿಯ ವಿಜ್ಞಾನಿಗಳು, ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಮತ್ತು ಸರ್ಕಾರದ ಇತರ ಇಲಾಖೆಗಳು ಭಾಗವಹಿಸಿದ್ದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಪ್ರತಿ ಹಂತದಲ್ಲೂ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆ , ವಿತರಣೆ ಮತ್ತು ಆಡಳಿತವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಕೋವಿಡ್‍ ಗೆ ಮೂರು ಲಸಿಕೆಗಳು ಭಾರತದಲ್ಲಿ ಅಭಿವೃದ್ಧಿಯ ಮುಂದುವರಿದ ಹಂತಗಳಲ್ಲಿವೆ. ಈ ಪೈಕಿ ಎರಡು ಔಷಧಗಳು ಎರನೇ ಹಂತದಲ್ಲಿ ಒಂದು ಮೂರನೇ ಹಂತದಲ್ಲಿವೆ. ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧನಾ ತಂಡಗಳು ನೆರೆಯ ರಾಷ್ಟ್ರಗಳಾದ ಆಫ್ಘಾನಿಸ್ತಾನ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಮಾರಿಷಸ್, ನೇಪಾಳ ಮತ್ತು ಶ್ರೀಲಂಕಾದಲ್ಲಿ ಸಂಶೋಧನಾ ಸಾಮರ್ಥ್ಯವನ್ನು ಬಲಪಡಿಸುತ್ತಿದ್ದು, ಇದಕ್ಕಾಗಿ ಸಹಕರಿಸುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ಜಾಗತಿಕ ಸಮುದಾಯಕ್ಕೆನೆರವು ನೀಡುವ ಪ್ರಯತ್ನವಾಗಿ ನಾವು ನೆರೆಹೊರೆ ದೇಶಗಳಿಗೆ ಇದನ್ನು ಸೀಮಿತಗೊಳಿಸಬಾರದು. ಲಸಿಕೆ ವಿತರಣಾ ವ್ಯವಸ್ಥೆಯಡಿ ಲಸಿಕೆಗಳು,ಔಷಧಿಗಳು ಇಡೀ ವಿಶ್ವದ ದೇಶಗಳು ಸೇರ್ಪಡೆಯಾಗುವಂತಾಗಬೇಕು ಎಂದು ಅವರು ಹೇಳಿದ್ದಾರೆ.

ಯುಎನ್‍ಐ ಎಸ್‍ಎಲ್ಎಸ್ 2031

More News
ಅ 24ರಂದು ಪ್ರಧಾನಿಯಿಂದ ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ

ಅ 24ರಂದು ಪ್ರಧಾನಿಯಿಂದ ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ

22 Oct 2020 | 8:45 PM

ನವದೆಹಲಿ, ಅ 22 (ಯುಎನ್‍ಐ)- ಗುಜರಾತ್‌ನ ರೈತರಿಗಾಗಿ ‘ಕಿಸಾನ್ ಸೂರ್ಯೋದಯ ಯೋಜನೆ’ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅ 24 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಗುರುವಾರ ತಿಳಿಸಿದೆ.

 Sharesee more..