Friday, Nov 15 2019 | Time 13:35 Hrs(IST)
 • ಎಟಿಪಿ ಫೈನಲ್ಸ್: ಜೊಕೊವಿಚ್ ಮಣಿಸಿ ಸೆಮಿಫೈನಲ್ ತಲುಪಿದ ಫೆಡರರ್
 • ದೇಶದ ರಫ್ತು ವಲಯದಲ್ಲಿ ಕರ್ನಾಟಕದಿಂದ ಮೂರನೇ ಒಂದರಷ್ಟು ಕೊಡುಗೆ: ಎಲ್ಲಾ ವಲಯಗಳಲ್ಲೂ ಬೆಂಗಳೂರು ಮಂಚೂಣಿಯಲ್ಲಿ – ಗೌರವ್ ಗುಪ್ತಾ
 • ಇಸ್ಲಾಮಿಕ್ ಸ್ಟೇಟ್ ಯೋಧರ ವಿಚಾರಣೆಗೆ ಅಂತರರಾಷ್ಟ್ರೀಯ ನ್ಯಾಯಮಂಡಳಿಗೆ ಅಮೆರಿಕಾ ವಿರೋಧ
 • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
 • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
 • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
 • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
 • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
 • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
International Share

ಜಪಾನ್ ಗೆ ಅಪ್ಪಳಿಸಲಿದೆ ಮತ್ತೆರಡು ಚಂಡಮಾರುತ

ಟೋಕಿಯೋ, ಅ 21 (ಸ್ಫುಟ್ನಿಕ್) ಹಗಿಬಿಸ್ ಚಂಡಮಾರುತದಿಂದ ಜಪಾನ್ ಚೇತರಿಸಿಕೊಳ್ಳೂವ ಮುನ್ನವೇ ಎರಡು ಹೊಸ ಚಂಡಮಾರುತಗಳು ಜಪಾನ್ ನತ್ತ ಬೀಸಲಿವೆ.
ಹಗಿಬಿಸ್ ಚಂಡಮಾರುತದಿಂದಾದ ಮಳೆ ಇನ್ನೂ ತಗ್ಗುವ ಮೊದಲೇ ಪ್ರವಾಹ ಮತ್ತು ಭೂಕುಸಿತಗಳಿಂದಾದ ಹಾನಿಯನ್ನು ಸರಿಪಡಿಸುವ ಮುನ್ನವೇ ಇದೀಗ ಮತ್ತೆರಡು ಚಂಡಮಾರುತಗಳು ಜಪಾನ್ ನಲ್ಲಿ ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅ 22 ರ ಬೆಳಗ್ಗೆ ಟೋಕಿಯೋದ ದಕ್ಷಿಣ ಮತ್ತು ನೈಋತ್ಯ ಕರಾವಳಿಯಲ್ಲಿ ಈ ವರ್ಷದ 20 ನೇ ಚಂಡಮಾರುತ ನಿಗೌರಿ ಬೀಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಗಂಟೆಗೆ 162 ಕಿಲೋಮೀಟರ್ ವೇಗದಲ್ಲಿ ಪ್ರಬಲ ಬಿರುಗಾಳೀ ಬೀಸಲಿದೆ. ಅಲ್ಲದೇ ಜಪಾನ್ ನ ನಾಮಾಂಕಿತದ ಪ್ರಕಾರ 21 ನೇ ಚಂಮಾರುತ ಬ್ಯುಲೋಯ್ ಸಹ ಅಕ್ಟೋಬರ್ 26 ರ ರಾತ್ರಿ ಜಪಾನ್ ಪೂರ್ವ ಕರಾವಳಿಯನ್ನು ಅಪ್ಪಳಿಸಲಿದೆ.
ಕಳೆದ ವಾರ ಅಪ್ಪಳಿಸಿದ ಹಗಿಬಿಸ್ ಚಂಡಮಾರುತದಿಂದ ಉಂಟಾದ ಭಾರಿ ಮಳೆ ಮತ್ತು ಬೀಸಿದ ಬಿರುಗಾಳಿಯ ಪರಿಣಾಮ 140 ಕ್ಕೂ ಹೆಚ್ಚು ಭೂಕುಸಿತಗಳಾಗಿದ್ದು ಸುಮಾರು 79 ಸಾವಿರ ಮನೆಗಳು ನೀರಿನಲ್ಲಿ ಮುಳುಗಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹಗಿಬಿಸ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 78 ಕ್ಕೆ ಏರಿಕೆಯಾಗಿದ್ದು ಸುಮಾರು 400 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಯುಎನ್ಐ ಜಿಎಸ್ಆರ್ 0923