Monday, Sep 23 2019 | Time 01:50 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
International Share

ಜಮ್ಮು ಕಾಶ್ಮೀರ : ಭಾರತದ ನಿಲುವಿಗೆ ಬಾಂಗ್ಲಾದೇಶ ಬೆಂಬಲ

ಜಮ್ಮು ಕಾಶ್ಮೀರ : ಭಾರತದ ನಿಲುವಿಗೆ ಬಾಂಗ್ಲಾದೇಶ ಬೆಂಬಲ
ಜಮ್ಮು ಕಾಶ್ಮೀರ : ಭಾರತದ ನಿಲುವಿಗೆ ಬಾಂಗ್ಲಾದೇಶ ಬೆಂಬಲ

ಢಾಕಾ, ಆ 21 (ಯುಎನ್ಐ) ಜಮ್ಮು ಕಾಶ್ಮೀರದ ವಿಷಯದಲ್ಲಿ ಭಾರತ ತಳೆದಿರುವ ನಿಲುವಿಗೆ ಬಾಂಗ್ಲಾದೇಶ ಬುಧವಾರ ಬೆಂಬಲ ಸೂಚಿಸಿದೆ

“ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುತ್ತಿದ್ದ 370ನೇ ವಿಧಿಯ ರದ್ದತಿ ಭಾರತ ಸರ್ಕಾರದ ಆಂತರಿಕ ವಿಚಾರ” ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ

“ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅಭಿವೃದ್ಧಿಗೆ ಕೂಡ ಎಲ್ಲ ದೇಶಗಳೂ ಆದ್ಯತೆ ನೀಡಬೇಕು ಎಂದು ಬಾಂಗ್ಲಾದೇಶ ಯಾವಾಗಲೂ ತಾತ್ವಿಕವಾಗಿ ಪ್ರತಿಪಾದಿಸಿದೆ” ಎಂದು ಸಚಿವಾಲಯದ ಹೇಳಿಕೆ ಸ್ಪಷ್ಟಪಡಿಸಿದೆ.

ಜಮ್ಮು ಕಾಶ್ಮೀರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದ್ದ 370ನೇ ವಿಧಿ ಹಾಗೂ 35 ಎ ಪರಿಚ್ಛೇದವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಗಸ್ಟ್ 5ರಂದು ರದ್ದುಪಡಿಸಿತು.

ಯುಎನ್ಐ ಎಸ್ಎ ವಿಎನ್ 1254