Sunday, Apr 18 2021 | Time 07:55 Hrs(IST)
National Share

ಜಲಸಂರಕ್ಷಣೆ, ಸ್ವಾವಲಂಬಿ ಭಾರತಕ್ಕೆ ಮೋದಿ ಕರೆ

ನವದೆಹಲಿ, ಫೆ .28 (ಯುಎನ್‌ಐ) "ಆತ್ಮನಿರ್ಭರ ಭಾರತ" ಕೇವಲ ಸರ್ಕಾರ ಪ್ರಯತ್ನವಲ್ಲ, ಬದಲಿಗೆ ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಭಾರತದ ರಾಷ್ಟ್ರೀಯ ಮನೋಭಾವವಾಗಿದೆ ಎಂದು
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೊ ಪ್ರಸಾರದ 74 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೆಲವೇ ದಿನಗಳಲ್ಲಿ ಜಲ ಶಕ್ತಿ ಸಚಿವಾಲಯ, ಮಳೆ ನೀರು ಸಂಗ್ರಹಿಸುವ ಗುರಿ ಹೊಂದಿರುವ "ಮಳೆ ನೀರು ಸಂಗ್ರಹಿಸಿ" ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ ಎಂದರು.
`` ಈ ಮಾಘಮಾಸದಲ್ಲಿ ತಿಂಗಳಲ್ಲಿ, ಹರಿದ್ವಾರದಲ್ಲಿ ವರ್ಷದ ಕುಂಭ ಮೇಳ ಆಯೋಜಿಸಲಾಗುತ್ತಿದೆ. ಅಂತೆಯೇ, ಮಾರ್ಚ್ 22 ರಂದು ವಿಶ್ವ ನೀರಿನ ದಿನವನ್ನು ಆಚರಿಸಲಾಗುವುದು. `ಮಾಘ 'ತಿಂಗಳನ್ನು ನೀರಿನೊಂದಿಗೆ ಸಂಯೋಜಿಸುವುದು ಸೂಕ್ತ. ಏಕೆಂದರೆ, ಈ ತಿಂಗಳ ನಂತರ ಚಳಿಗಾಲ ಕೊನೆಗೊಂಡು, ಬೇಸಿಗೆ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ತಮ್ಮ 33 ನಿಮಿಷಗಳ ರೇಡಿಯೊ ಭಾಷಣದಲ್ಲಿ, ಮೋದಿ ಕರೋನಾ ವೈರಸ್, ನೀರಿನ ಸಂರಕ್ಷಣೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಋತುಮಾನ, ಭಾರತದಾದ್ಯಂತ ವಿಜ್ಞಾನವನ್ನು ಹೆಚ್ಚು ಜನಪ್ರಿಯಗೊಳಿಸುವ ಪ್ರಯತ್ನಗಳು ಸೇರಿದಂತೆ ದೇಶಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಇಂದಿನಿಂದ, ಜನರು ಮಳೆನೀರು ಕೊಯ್ಲು ವ್ಯವಸ್ಥೆ ಹೊಂದುವ, ಈಗಾಗಲೇ ಜಾರಿಯಲ್ಲಿದ್ದರೆ ಅದನ್ನು ಕಾರ್ಯರೂಪಕ್ಕೆ ತರುವ ಮನಸ್ಸು ಮಾಡಬೇಕು ಎಂದು ಕರೆ ನೀಡಿದರು.
ಯುಎನ್ಐ ಎಸ್ಎಚ್ 1624
More News
ದಾಖಲೆಯ ಮತದಾನಕ್ಕೆ ಪ್ರಧಾನಿ ಮೋದಿ ಮನವಿ

ದಾಖಲೆಯ ಮತದಾನಕ್ಕೆ ಪ್ರಧಾನಿ ಮೋದಿ ಮನವಿ

17 Apr 2021 | 5:37 PM

ನವದೆಹಲಿ, ಎಪ್ರಿಲ್ 17(ಯುಎನ್ಐ) ಐದನೇ ಹಂತದ ಬಂಗಾಳ ವಿಧಾನಸಭೆಗೆ ಶನಿವಾರ ಐದನೇ ಹಂತದ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಜನತೆಗೆ ಮಾಡಿದ್ದಾರೆ.

 Sharesee more..

ಪಶ್ಚಿಮ ಬಂಗಾಳ, 12 ರಾಜ್ಯಗಳಲ್ಲಿ ಮತದಾನ ಆರಂಭ

17 Apr 2021 | 8:39 AM

 Sharesee more..
ಸೆನ್ಸೆಕ್ಸ್ 28 35 ಅಂಕ ಸಾಧಾರಣ ಏರಿಕೆ

ಸೆನ್ಸೆಕ್ಸ್ 28 35 ಅಂಕ ಸಾಧಾರಣ ಏರಿಕೆ

16 Apr 2021 | 9:32 PM

ಮುಂಬೈ, ಎಪ್ರಿಲ್ 16 (ಯುಎನ್ಐ) ಆರೋಗ್ಯ ರಕ್ಷಣೆ, ಗ್ರಾಹಕ ಬಳಕೆ ವಸ್ತುಗಳು, ವಿದ್ಯುತ್ ಹಾಗೂ ಸಾಮಗ್ರಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆಯಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ದಿನದ ಅಂತ್ಯಕ್ಕೆ 28.05 ಅಂಕ ಸಾಧಾರಣ ಏರಿಕೆ ಕಂಡು 48,832.03ರಲ್ಲಿತ್ತು.

 Sharesee more..

ಪವನ್ ಕಲ್ಯಾಣ್ಗೆ ಕೊರೋನಾ ಪಾಸಿಟೀವ್

16 Apr 2021 | 5:46 PM

 Sharesee more..