EntertainmentPosted at: Nov 22 2019 4:01PM Shareಜವಾನಿ ಜಾನೆಮನ್ ಚಿತ್ರದಲ್ಲಿ ಪೂಜಾ ಬೇದಿ ಸುಪುತ್ರಿಮುಂಬೈ, ನ 22 (ಯುಎನ್ಐ) ಚಿರಪರಿಚಿತ ನಟಿ ಪೂಜಾ ಬೇದಿ ಅವರ ಸುಪುತ್ರಿ ಆಲಿಯಾ ಬೇದಿ ಫರ್ನಿಚರ್ ವಾಲಾ ಬಾಲಿವುಡ್ ನ 'ಜವಾನಿ ಜಾನೆ ಮನ್' ಚಿತ್ರದ ಮೂಲಕ ಬಣ್ಣಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಟ ಸೈಫ್ ಅಲಿ ಖಾನ್ ಅಭಿನಯದ ಈ ಚಿತ್ರವು ಇದೇ ತಿಂಗಳ 29 ರಂದು ಬಿಡುಗಡೆಯಾಗಬೇಕಿತ್ತು. ಆದರೀಗ 2020 ರ ಫೆಬ್ರವರಿ 7 ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಹೊರತಾಗಿ ನಟಿ ಟಬು ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಿತಿನ್ ಕಕ್ಕಡ್ ನಿರ್ದೇಶಿಸಲಿದ್ದು, ಸೈಫ್ ಅಲಿ ಖಾನ್ ಸಹಾಯಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರಂತೆ. ಕಳೆದ ಕೆಲ ಸಮಯದ ಹಿಂದಷ್ಟೇ ಆಲಿಯಾ, ಜವಾನಿ ಜಾನೆ ಮನ್ ಚಿತ್ರದ ಕಲಾವಿದರೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋ ಒಂದನ್ನು ಇನ್ಸ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿ, ಚಿತ್ರೀಕರಣದ ವೇಳೆ ಹಲವು ವಿಷಯಗಳನ್ನು ಕಲಿತುಕೊಂಡಿದ್ದು, ದೊಡ್ಡ ಕಲಾವಿದರೊಂದಿಗೆ ನಟಿಸಿದ್ದು, ವಿಶೇಷವಾಗಿತ್ತು ಎಂದು ಬರೆದುಕೊಂಡಿದ್ದರು. ಯುಎನ್ಐ ಪಿಕೆ ಎಎಚ್ 1600