Sunday, Aug 25 2019 | Time 01:33 Hrs(IST)
Special Share

ಜೆಇಇ ಮುಖ್ಯ ಪರೀಕ್ಷೆ-ಆಂಧ್ರದ ನಾಲ್ವರಿಗೆ ಅಗ್ರಸ್ಥಾನ

ಜೆಇಇ ಮುಖ್ಯ ಪರೀಕ್ಷೆ-ಆಂಧ್ರದ ನಾಲ್ವರಿಗೆ ಅಗ್ರಸ್ಥಾನ
ಜೆಇಇ ಮುಖ್ಯ ಪರೀಕ್ಷೆ-ಆಂಧ್ರದ ನಾಲ್ವರಿಗೆ ಅಗ್ರಸ್ಥಾನ

ನವದೆಹಲಿ, ಮೇ 15(ಯುಎನ್‌ಐ) ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು ಆಂಧ್ರ ಪ್ರದೇಶದ ನಾಲ್ವರು ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ

ಗೊಲ್ಲಪುಡಿ ಎನ್‌.ಲಕ್ಷ್ಮಿನಾರಾಯಣ, ಕೊರಪತಿ ನಿಖಿಲ್‌ ರತ್ನ, ರಿತೀಶ್‌ ರೆಡ್ಡಿ ಮತ್ತು ಗುಡ್ಲ ರಘುನಂದನ ರೆಡ್ಡಿ ಅಗ್ರ ಶ್ರೇಯಾಂಕಿತರು ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ.

ಮೊದಲ ಸಲ ಜೆಇಇ ಮುಖ್ಯ ಪರೀಕ್ಷೆಯ ಪತ್ರಿಕೆ-2ರ ಪರೀಕ್ಷೆ ಆನ್‌ಲೈನ್‌ನಲ್ಲಿ 2 ಬಾರಿ ನಡೆದಿತ್ತು ಎಂದು ಎನ್‌ಟಿಎ ತಿಳಿಸಿದೆ.

ಜ.8ರಂದು ನಡೆದ ಪರೀಕ್ಷೆಯಲ್ಲಿ 2.27 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪೇಪರ್‌-2ರ ಪರೀಕ್ಷೆ ಏ.7ರಂದು ನಡೆದಿತ್ತು. 61,510 ಅಭ್ಯರ್ಥಿಗಳು ಎರಡೂ ಪರೀಕ್ಷೆಗೆ ಹಾಜರಾಗಿದ್ದು, 27, 624 ಅಭ್ಯರ್ಥಿಗಳು ಅಂಕ ಗಳಿಕೆಯಲ್ಲಿ ಪ್ರಗತಿ ತೋರಿದ್ದಾರೆ ಎಂದು ಮಂಡಳಿ ಹೇಳಿದೆ.

ಯುಎನ್‌ಐ ಕೆಎಸ್‌ವಿ ವಿಎನ್‌ 2020