Sunday, Dec 6 2020 | Time 00:11 Hrs(IST)
business economy Share

ಜಿಎಸ್ ಟಿ ಪರಿಹಾರ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ6,000 ಕೋಟಿ ರೂ. ಬಿಡುಗಡೆ

ಜಿಎಸ್ ಟಿ ಪರಿಹಾರ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ6,000 ಕೋಟಿ ರೂ. ಬಿಡುಗಡೆ
ಜಿಎಸ್ ಟಿ ಪರಿಹಾರ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ6,000 ಕೋಟಿ ರೂ. ಬಿಡುಗಡೆ

ನವದೆಹಲಿ, ಅ 23 [ಯುಎನ್ಐ] 2020-2021ನೇ ಸಾಲಿಗೆ ಜಿಎಸ್ ಟಿ ಪರಿಹಾರದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ಅಡಿ ಸಾಲ ಮಂಜೂರು ಮಾಡಿದೆ. ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಹಣಕಾಸು ಸಚಿವಾಲಯದ ಜೊತೆ ಸಮನ್ವಯದಿಂದಾಗಿ ಕಂತಿನ ರೂಪದಲ್ಲಿ ಸಾಲ ಪಡೆಯಲು 21 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಈ ವಿಶೇಷ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದವು.

ಅವುಗಳ ಪೈಕಿ ಐದು ರಾಜ್ಯಗಳಿಗೆ ಜಿಎಸ್ ಟಿ ಪರಿಹಾರದಲ್ಲಿ ಯಾವುದೇ ಕೊರತೆ ಇರಲಿಲ್ಲ. ಇಂದು ಕೇಂದ್ರ ಸರ್ಕಾರ ಕರ್ನಾಟಕ ಸೇರಿ 16 ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಕೇಂದ್ರಾಡಳಿತ ಪ್ರದೇಶ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ.

ಈ ಸಾಲಕ್ಕೆ ಶೇ.5.1ರಷ್ಟು ಬಡ್ಡಿದರವಿರುತ್ತದೆ. ಸಾಲದ ಅವಧಿ 3 ರಿಂದ 5 ವರ್ಷಗಳ ಅವಧಿಯದ್ದಾಗಿದೆ.

ಯುಎನ್ಐ ವಿಎನ್ 2016

More News
ಸೆನ್ಸೆಕ್ಸ್: ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079 55ರಲ್ಲಿ ದಿನದ ವಹಿವಾಟು ಅಂತ್ಯ

ಸೆನ್ಸೆಕ್ಸ್: ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079 55ರಲ್ಲಿ ದಿನದ ವಹಿವಾಟು ಅಂತ್ಯ

04 Dec 2020 | 5:28 PM

ಮುಂಬೈ, ಡಿ 4 (ಯುಎನ್ಐ) ರಿಸರ್ವ್ ಬ್ಯಾಂಕ್ ತನ್ನ ನೀತಿಗಳಲ್ಲಿ ಯತಾಸ್ಥಿತಿ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಶುಕ್ರವಾರ ದಿನದ ವಹಿವಾಟಿನ ಅಂತ್ಯಕ್ಕೆ 446.90 ಅಂಕ ಏರಿಕೆ ಕಂಎಉ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079.55ರಲ್ಲಿ ವಹಿವಾಟು ಮುಗಿಸಿದೆ.

 Sharesee more..