Saturday, Jan 18 2020 | Time 20:08 Hrs(IST)
 • ಪಣಂಬೂರ್‌ ಬೀಚ್‌ನಲ್ಲಿ ಗಮನ ಸೆಳೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
 • ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ: ರಾಜ್ಯದಲ್ಲಿ 64 65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
 • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
 • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
 • ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?
 • ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು ಸುಳ್ಳು ಹೇಳಲು: ಸಿದ್ದರಾಮಯ್ಯ
 • ಸೊಮಾಲಿಯಾ ದಕ್ಷಿಣ ಪ್ರಾಂತ್ಯದಲ್ಲಿ ಸೇನಾ ಪಡೆಗಳಿಂದ 16 ಅಲ್-ಷರಾಬ್ ಉಗ್ರರ ಹತ್ಯೆ
 • ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ಓಪನ್‌ಗೆ ಅರ್ಹತೆ ಪಡೆದ ಪ್ರಜ್ಞೇಶ್ ಗುಣೇಶ್ವರನ್
 • ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ
 • ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಹಾದಿ ತಪ್ಪುವುದಿಲ್ಲ: ಅಮಿತ್ ಷಾ
 • ಶೀಘ್ರವೇ ಮೈಸೂರು ವಿಮಾನ ನಿಲ್ದಾಣದಿಂದ ಊಟಿ, ಮಡಿಕೇರಿಗೆ ಶೀಘ್ರವೇ ಫ್ಲೈ ಬಸ್ ಸೇವೆ
 • ‘ಕರಾವಳಿ ಗೌರವ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಆಯ್ಕೆ
 • ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ
 • ಬುರ್ಕಿನಾ ಫಾಸೊದಲ್ಲಿ ರಸ್ತೆ ಬದಿಯ ಬಾಂಬ್ ಸ್ಫೋಟಿಸಿ ಐವರು ಸೈನಿಕರು ಸಾವು
International Share

ಜೆಕ್‌ ಗಣರಾಜ್ಯದ ಆಸ್ಪತ್ರೆಯಲ್ಲಿ ಗುಂಡಿನ ದಾಳಿ: ಆರು ಮಂದಿ ಸಾವು

ಪ್ರೇಗ್ಯು, ಡಿ.10 (ಯುಎನ್ಐ) ಜೆಕ್‌ ಗಣರಾಜ್ಯದ ಆಸ್ಪತ್ರೆಯೊಂದರಲ್ಲಿ ಅಪರಿಚಿತ ಬಂದೂಕುದಾರಿಯೊಬ್ಬ ಮಂಗಳವಾರ ಏಕಾಏಕಿ ಗುಂಡು ಹಾರಿಸಿದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 7.19 ರ ಸುಮಾರಿಗೆ ಒಸ್ಟ್ರಾವಾ ನಗರದಲ್ಲಿ ಈ ದಾಳಿ ನಡೆದಿದೆ ಎಂದು ಜೆಕ್ ಆಂತರಿಕ ಸಚಿವ ಜಾನ್ ಹಮಾಸೆಕ್ ಹೇಳಿದ್ದಾರೆ.
ಸಾವು-ನೋವನ್ನು ದೃಢಪಡಿಸಿರುವ ಅವರು, ಘಟನಾ ಸ್ಥಳಕ್ಕೆ ತಕ್ಷಣ ತುರ್ತು ಸೇವೆಗಳ ಘಟಕದ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.
ಸಣ್ಣ ಕೂದಲಿನ ಶ್ವೇತ ವರ್ಣದ ವ್ಯಕ್ತಿಯೊಬ್ಬ ಕೆಂಪು ಜಾಕೆಟ್‌ ಧರಿಸಿದ್ದ ಚಿತ್ರವನ್ನು ಪೊಲೀಸರು ಟ್ವೀಟ್‌ನಲ್ಲಿ ಹಾಕಿದ್ದಾರೆ.
ಶಂಕಿತನನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಾಯವನ್ನು ಪೊಲೀಸರು ಕೋರಿದ್ದಾರೆ.
ಯುಎನ್ಐ ಎಎಚ್ 1431