Friday, Jan 22 2021 | Time 10:53 Hrs(IST)
  • ಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪ
  • ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
  • ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ
  • ಸರ್ಕಾರದ ಪ್ರಸ್ತಾಪ ತಿರಸ್ಕರಿದ ರೈತರು, ಇಂದು 11 ನೇ ಸುತ್ತಿನ ಸಂಧಾನ ಸಭೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ; ಮುಖ್ಯಮಂತ್ರಿ
  • ಶಿವಮೊಗ್ಗ ದುರಂತ; ಪ್ರಧಾನಿ ಮೋದಿ ಸಂತಾಪ
  • ಶಿವಮೊಗ್ಗ ದುರಂತ; ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ
  • ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೈಟ್, ಜಿಲೆಟಿನ್ ಸ್ಫೋಟ; 8ಕ್ಕೂ ಅಧಿಕ ಮಂದಿ ಸಾವು
National Share

ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಲು ಎಂಟು ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ ಭಾರತ

ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಲು ಎಂಟು ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ ಭಾರತ
ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಲು ಎಂಟು ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ ಭಾರತ

ನವದೆಹಲಿ, ಜ 13 (ಯುಎನ್‌ಐ) ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಭಾರತ ಎಂಟು ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದೆ ಮತ್ತು ಈ ಕುರಿತು ಮಾತುಕತೆ ನಡೆಸಲು ವಿಶ್ವ ಸಮುದಾಯ ಮುಂದಾಗಬೇಕು ಮತ್ತು ಶೂನ್ಯ ಸಹಿಷ್ಣುತೆ ಹೊಂದಬೇಕು ಎಂದು ಕರೆ ನೀಡಿದೆ.

ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ (ಯುಎನ್ಎಸ್ಸಿ) ನಿರ್ಣಯ 1373 ರ 20 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ , ಭಯೋತ್ಪಾದನೆಯ ಭೀತಿಯನ್ನು ಪರಿಹರಿಸಿ ಮತ್ತು ಪರಿಣಾಮಕಾರಿ ಕ್ರಮವನ್ನು ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕ್ರಿಯಾ ಯೋಜನೆಯ ಎಂಟು ಅಂಶಗಳೆಂದರೆ, . ಭಯೋತ್ಪಾದನೆಯನ್ನು ಎದುರಿಸಲು ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಳ್ಳುವುದು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಿನ್ನ ನೀತಿ ಇರಬಾರದು. ಭಯೋತ್ಪಾದರಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎಂಬ ವ್ಯತ್ಯಾಸವಿಲ್ಲ. ನಿರ್ಬಂಧಗಳು ಮತ್ತು ಭಯೋತ್ಪಾದನೆಯನ್ನು ಎದುರಿಸುವ ಸಮಿತಿಗಳ ಕಾರ್ಯ ವಿಧಾನಗಳ ಸುಧಾರಣೆ. ಜಗತ್ತನ್ನು ವಿಭಜಿಸುವ ಮತ್ತು ಸಾಮಾಜಿಕ ಬಟ್ಟೆಗೆ ಹಾನಿ ಮಾಡುವ ಪ್ರತ್ಯೇಕವಾದ ಚಿಂತನೆಯನ್ನು ದೃಢವಾಗಿ ತಡೆಯಬೇಕು. ವಿಶ್ವಸಂಸ್ಥೆಯ ನಿರ್ಬಂಧಗಳ ಅಡಿಯಲ್ಲಿ ವ್ಯಕ್ತಿಗಳು ಮತ್ತು ಘಟಕಗಳನ್ನು ಪಟ್ಟಿ ಮಾಡಬೇಕು. ಭಯೋತ್ಪಾದನೆ ಮತ್ತು ದೇಶೀಯ ಸಂಘಟಿತ ಅಪರಾಧಗಳ ನಡುವಿನ ಸಂಬಂಧವನ್ನು ಸಂಪೂರ್ಣವಾಗಿ ಗುರುತಿಸುವುದು ಮತ್ತು ಪರಿಹರಿಸುವುದು ಮತ್ತಿತರರ ಪ್ರಮುಖ ವಿಷಯಗಳಾಗಿವೆ.

ಯುಎನ್ಐ ಎಸ್ಎಚ್ 2020

More News

ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ

22 Jan 2021 | 10:13 AM

 Sharesee more..
ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

21 Jan 2021 | 7:22 PM

ನವದೆಹಲಿ, ಜ 21 (ಯುಎನ್ಐ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಂಗಾಪುರದ ರಕ್ಷಣಾ ಸಚಿವ ಡಾ.ಎನ್.ಜಿ. ಎಂಗ್ ಹೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

 Sharesee more..