Monday, Sep 23 2019 | Time 01:48 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
Special Share

ಜೇಟ್ಲಿ ಜತೆಗೆಗಿನ ವೈಯಕ್ತಿಕ ಸಂಬಂಧ, ಕ್ರೀಡಾ ಮನೋಭಾವಕ್ಕೆ ವಿರೋಧ ಪಕ್ಷ ನಾಯಕರ ಪ್ರಶಂಸೆ

ಜೇಟ್ಲಿ ಜತೆಗೆಗಿನ ವೈಯಕ್ತಿಕ ಸಂಬಂಧ, ಕ್ರೀಡಾ ಮನೋಭಾವಕ್ಕೆ ವಿರೋಧ ಪಕ್ಷ ನಾಯಕರ ಪ್ರಶಂಸೆ
ಜೇಟ್ಲಿ ಜತೆಗೆಗಿನ ವೈಯಕ್ತಿಕ ಸಂಬಂಧ, ಕ್ರೀಡಾ ಮನೋಭಾವಕ್ಕೆ ವಿರೋಧ ಪಕ್ಷ ನಾಯಕರ ಪ್ರಶಂಸೆ

ನವದೆಹಲಿ, ಸೆಪ್ಟೆಂಬರ್ 10 (ಯುಎನ್‌ಐ) ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಗೌರವ ಸಲ್ಲಿಸಲಾಯಿತು.

ಪಕ್ಷಬೇಧವಿಲ್ಲದೆ ಎಲ್ಲ ನಾಯಕರು ದಿವಂಗತ ನಾಯಕನ ಕ್ರೀಡಾ ಮನೋಭಾವ ಮತ್ತು ಸ್ನೇಹಪರ ಗುಣವನ್ನು ಶ್ಲಾಘಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖಂಡ ದಿನೇಶ್ ತ್ರಿವೇದಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಾತ್ರ ತಮ್ಮ ಸ್ನೇಹಿತ ಅರುಣ್ ಜೇಟ್ಲಿ ಸ್ನೇಹಿತನನ್ನು ಕಳೆದುಕೊಂಡಿಲ್ಲ. ಆದರೆ ತೃಣಮೂಲ ಕಾಂಗ್ರೆಸ್‍ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸಹ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ರಾಜಕಾರಣದ ದಟ್ಟಣೆಯ ವಾತಾವರಣದಲ್ಲಿ ರಾಜಕಾರಣಿ ಆಗಾಗ್ಗೆ ಒಬ್ಬಂಟಿಯಾಗಿರುತ್ತಾನೆ. ಆದರೆ ಅರುಣ್ ಜೇಟ್ಲಿ ಅವರಲ್ಲಿ ಯಾವಾಗಲೂ ಸ್ನೇಹಿತನನ್ನು ಕಂಡುಕೊಂಡಿದ್ದೆ ಎಂದು ಅವರು ಹೇಳಿದರು.

ಸಮಾಜವಾದಿ ಮುಖಂಡ ರಾಮ್ ಗೋಪಾಲ್ ಯಾದವ್ ಮಾತನಾಡಿ, ತಾವು ಸದನದ ಸಭಾ ನಾಯಕ ಸ್ಥಾನವನ್ನು ಅಲಂಕರಿಸಿದಾಗಲೆಲ್ಲ ಅರುಣ್ ಜೇಟ್ಲಿ ಉಪಸ್ಥಿತಿ ಬಯಸುತ್ತಿದ್ದೆ ಎಂದು ಹೇಳಿದರು. ಸಿಪಿಐನ ಡಿ ರಾಜಾ, ಡಿಎಂಕೆಯ ತಿರುಚ್ಚಿ ಶಿವ, ಬಿಜೆಡಿಯ ಪಿನಾಕಿ ಮಿಶ್ರಾ ಮತ್ತು ಬಿಎಸ್‍ಪಿಯ ಸತೀಶ್ ಮಿಶ್ರಾ ಸಹ ಗೌರವ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಕಾರ್ಯಧ್ಯಕ್ಷ ಜೆ ಪಿ ನಡ್ಡಾ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು. ಯುಎನ್‍ಐ ಎಸ್‍ಎಲ್‍ಎಸ್ ಕೆವಿಆರ್ 2037

More News
ಪಾಕ್ ನೊಂದಿಗೆ ಮಾತುಕತೆ ನಡೆದಲ್ಲಿ ಅದು ಪಿಒಕೆ ಬಗ್ಗೆ ಮಾತ್ರ; ರಾಜನಾಥ್

ಪಾಕ್ ನೊಂದಿಗೆ ಮಾತುಕತೆ ನಡೆದಲ್ಲಿ ಅದು ಪಿಒಕೆ ಬಗ್ಗೆ ಮಾತ್ರ; ರಾಜನಾಥ್

22 Sep 2019 | 8:25 PM

ಪಾಟನಾ, ಸೆ 22 (ಯುಎನ್ಐ) ಪಾಕಿಸ್ತಾನದೊಂದಿಗೆ ಭಾರತ ಯಾವುದೇ ಮಾತುಕತೆ ನಡೆಸಲು ಇಚ್ಛಿಸುವುದಿಲ್ಲ. ಒಂದೊಮ್ಮೆ ಮಾತುಕತೆ ನಡೆದರೂ, ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಸ್ವಾಯತತ್ತೆ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 370ನೇ ವಿಧಿಯ ರದ್ದತಿ ಐತಿಹಾಸಿಕ ನಡೆ ಎಂದು ಬಣ್ಣಿಸಿದರು.

 Sharesee more..