Thursday, Jan 21 2021 | Time 03:09 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Sports Share

ಜೈವಿಕ ಸುರಕ್ಷತಾ ಪ್ರೋಟೋ ಕಾಲ್‌ ಮುರಿದಿದ್ದಕ್ಕಾಗಿ ಕ್ಷಮೆಯಾಚಿಸಿದ ಮುರ್ತಾಜ

ನವದೆಹಲಿ, ಡಿ.1 (ಯುಎನ್ಐ)- ಬಂಗಬಂಧು ಟಿ-20 ಕಪ್‌ಗಾಗಿ ಸಿದ್ಧಪಡಿಸಿದ ಜೈವಿಕ ಸುರಕ್ಷತಾ ಪ್ರೋಟೋ ಕಾಲ್‌ ಮುರಿದಿದ್ದಕ್ಕಾಗಿ ಬಾಂಗ್ಲಾದೇಶದ ಮಾಜಿ ನಾಯಕ ಮಶ್ರಫೆ ಮುರ್ತಾಜ ಕ್ಷಮೆಯಾಚಿಸಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧಿಕಾರಿಗಳು ಈ ಮಾಹಿತಿ ನೀಡಿದರು.

ಮುರ್ತಾಜಾ ಜೈವಿಕ ಸುರಕ್ಷತೆಯ ಭಾಗವಾಗಿರಲಿಲ್ಲ ಆದರೆ ಇದ್ದಕ್ಕಿದ್ದಂತೆ ಬಿಸಿಬಿ ಅಕಾಡೆಮಿ ಕ್ಯಾಂಪಸ್‌ಗೆ ವೈಯಕ್ತಿಕ ತರಬೇತಿಗಾಗಿ ಮಂಗಳವಾರ ಬಂದರು. ಅವರು ಅಲ್ಲಿಗೆ ಬಂದು ಆಟಗಾರರನ್ನು ಭೇಟಿಯಾದರು. ಅವರು ಕೊನೆಯದಾಗಿ ಎಂಟು ತಿಂಗಳ ಹಿಂದೆ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದರು.

ಬಿಸಿಬಿ ಮುಖ್ಯಸ್ಥ ಫಿಸಿಯೋ ದೇಬಾಶಿಶ್ ಚೌಧರಿ ಈ ಬಗ್ಗೆ ಮಾತನಾಡಿ, "ಮುರ್ತಾಜಾ ಅಜಾಗರೂಕತೆಯಿಂದ ಈ ತಪ್ಪನ್ನು ಮಾಡಿದ್ದಾರೆ ಮತ್ತು ಅದಕ್ಕೆ ಕ್ಷಮೆಯಾಚಿಸಿದ್ದಾರೆ. ಈ ತಪ್ಪನ್ನು ಅವರಿಂದ ಪುನರಾವರ್ತಿಸದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಆದರೆ ಆಟಗಾರರೊಂದಿಗಿನ ಸಭೆಯಲ್ಲಿ ಅವರು ಆರು ಅಡಿಗಳಷ್ಟು ದೂರವನ್ನು ಇಟ್ಟುಕೊಂಡಿದ್ದರು ಎಂದು ನಾವು ಹೇಳಲು ಬಯಸುತ್ತೇವೆ. ಮುರ್ತಾಜಾ ಯಾರನ್ನೂ ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ನಾನು ಭಾವಿಸುವುದಿಲ್ಲ" ಎಂದಿದ್ದಾರೆ.

"ಅವರು ಒಳಾಂಗಣ ಅಭ್ಯಾಸವನ್ನು ಮಾತ್ರ ಮಾಡಬೇಕಾಗಿತ್ತು ಆದರೆ ತಪ್ಪಾಗಿ ಅವರು ಇತರ ಕ್ರಿಕೆಟಿಗರು ತರಬೇತಿ ಪಡೆಯುತ್ತಿದ್ದ ಅಕಾಡೆಮಿ ಕ್ಯಾಂಪಸ್‌ನೊಳಗೆ ಬಂದರು" ಎಂದು ಅವರು ಹೇಳಿದರು.

ಯುಎನ್ಐ ವಿಎನ್ಎಲ್ 1930
More News

ಸ್ಮಿತ್ ಅವರನ್ನು ಕೈ ಬಿಟ್ಟ ರಾಜಸ್ಥಾನ

20 Jan 2021 | 7:09 PM

 Sharesee more..

ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಅಭಿನಂದನೆ

19 Jan 2021 | 6:28 PM

 Sharesee more..
ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ 5 ಕೋಟಿ ಬೋನಸ್ ನೀಡಿದ ಬಿಸಿಸಿಐ

ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ 5 ಕೋಟಿ ಬೋನಸ್ ನೀಡಿದ ಬಿಸಿಸಿಐ

19 Jan 2021 | 4:29 PM

ಬ್ರಿಸ್ಬೇನ್, ಜ.19 (ಯುಎನ್ಐ) ಆಸ್ಟ್ರೇಲಿಯಾದಲ್ಲಿ ಕಾಂಗರೂಗಳನ್ನ ಬಗ್ಗುಬಡಿದು ಐಸಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

 Sharesee more..