Tuesday, Aug 11 2020 | Time 19:18 Hrs(IST)
 • ಸಚಿನ್‌ ವೃತ್ತಿಬದುಕಿನ ಅತ್ಯಂತ ಅದೃಷ್ಟಶಾಲಿ ಇನಿಂಗ್ಸ್‌ ಬಗ್ಗೆ ಮಾತನಾಡಿದ ನೆಹ್ರಾ
 • ಪ್ರಣಬ್‌ ಮುಖರ್ಜಿ ಆರೋಗ್ಯ ವಿಚಾರಿಸಿದ ನಾಯ್ಡು
 • ದೇಶದಲ್ಲಿ ರೈಲುಗಳ ಸಂಚಾರ ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ
 • 50 ಓವರ್ ಗಳ ಸ್ಪರ್ಧೆಗೆ 'ರಚೇಲ್ ಹೆಹೋ ಫ್ಲಿಂಟ್ ಟ್ರೋಫಿ' ಹೆಸರು
 • ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ : ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯಿಂದ ಕಾರ್ಯಾರಂಭ
 • ಸುಶಾಂತ್‌ ಪ್ರಕರಣ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
 • ಕೆ ಎಲ್‌ ರಾಹುಲ್‌ ನಾಯಕತ್ವದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದ ಶೆಲ್ಡನ್‌ ಕಾಟ್ರೆಲ್
 • ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿಶೇಷ ಚೇತನ ಮೇಘನಾರನ್ನು ಅಭಿನಂದಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್
 • ಅಶೋಕ್ ಗೆಹ್ಲೋಟ್ ಜತೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ !: ಸಚಿನ್ ಪೈಲೆಟ್
 • ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೇ 80 ರಷ್ಟು ಸೋಂಕು: ಪ್ರಧಾನಿ ಮೋದಿ
 • ಕೋವಿಡ್‌; 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ
 • ಸೂಪರ್‌ ಓಪವರ್‌ನಲ್ಲಿ ಬೌಲಿಂಗ್‌ ಮಾಡಲು ಬುಮ್ರಾ ಅತ್ಯುತ್ತಮ ಆಯ್ಕೆ: ಆಕಾಶ್ ಚೋಪ್ರ
 • ಪುರುಷರ ರಾಷ್ಟ್ರೀಯ ಹಾಕಿ ಶಿಬಿರ ಅನಿಶ್ಚಿತ
 • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
 • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
International Share

ಜ್ವಾಲಾಮುಖಿ ಸ್ಫೋಟಕ್ಕೆ ಕನಿಷ್ಠ 24 ಸಾವು, ಹಲವರ ನಾಪತ್ತೆ ?

ಜ್ವಾಲಾಮುಖಿ ಸ್ಫೋಟಕ್ಕೆ ಕನಿಷ್ಠ 24 ಸಾವು, ಹಲವರ ನಾಪತ್ತೆ ?
ಜ್ವಾಲಾಮುಖಿ ಸ್ಫೋಟಕ್ಕೆ ಕನಿಷ್ಠ 24 ಸಾವು, ಹಲವರ ನಾಪತ್ತೆ ?

ವೆಲಿಂಗ್ಟನ್ , ಡಿ10 (ಯುಎನ್ಐ) ನ್ಯೂಜಿಲೆಂಡಿನಲ್ಲಿ ಪ್ರಸಿದ್ಧ ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟ ದುರಂತದಲ್ಲಿ , ಕನಿಷ್ಠ 24 ಜನರು ಮೃತಪಟ್ಟಿದ್ದಾರೆ ಎಂದೂ ಶಂಕಿಸಲಾಗಿದ್ದು , ಹಲವರು ಕಾಣೆಯಾಗಿದ್ದಾರೆ, ಇನ್ನು ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಹಲವು ಜನರು ನಾಪತ್ತೆಯಾಗಿದ್ದಾರೆ. ಮೃತಪಟ್ಟವರಲ್ಲಿ ಹಲವು ವಿದೇಶಿ ಪ್ರವಾಸಿಗರು ಕೂಡ ಸೇರಿದ್ದಾರೆ ಎಂದೂ ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.18 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಪೈಕಿ ಕೆಲವರು ತೀವ್ರ ಸುಟ್ಟ ಗಾಯಕ್ಕೆ ಒಳಗಾಗಿದ್ದು ಸಾವಿನ ಸಂಖ್ಯೆ ಮತ್ತುಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಜ್ವಾಲಾಮುಖಿಯಲ್ಲಿ ಸಿಕ್ಕಿ ಹಾಕಿಕೊಂಡವರ ಪೈಕಿ ಹಲವು ವಿದೇಶಿಯರೂ ಇದ್ದಾರೆ ಎಂಬುದನ್ನೂ ಪ್ರಧಾನಿ ಜಸಿಂಡ ಆರ್ಡರ್ನ್ ಖಚಿತಪಡಿಸಿದ್ದಾರೆ.'ಜ್ವಾಲಾಮುಖಿ ಸ್ಫೋಟದ ಸಂದರ್ಭದಲ್ಲಿ ದ್ವೀಪದ ಸುತ್ತಮುತ್ತ ನ್ಯೂಜಿಲ್ಯಾಂಡ್ ಮತ್ತು ವಿದೇಶಿ ಪ್ರವಾಸಿಗರಿದ್ದರು ಎಂದು ಅವರು ಹೇಳಿದ್ದಾರೆ. .

ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸುವುದು ತೀರಾ ಅಪಾಯಕಾರಿ ಎಂದು ಪೊಲೀಸರು ಹೇಳಿದ್ದಾರೆ.

ಜ್ವಾಲಾಮುಖಿ ಸ್ಫೋಟಿಸಿದಾಗ ಆಗ ಆ ಸ್ಥಳದಲ್ಲಿ ಸುಮಾರು 50 ಜನರಿದ್ದರು ಎನ್ನಲಾಗಿದ್ದು, ರಾತ್ರಿಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ಬಹಳ ಕಷ್ಟವಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಯುಎನ್ಐ ಕೆಎಸ್ಆರ್ 0905