Thursday, Jan 21 2021 | Time 03:31 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
National Share

ಟೈಮ್ ಮ್ಯಾಗಜಿನ್ ನ ವರ್ಷದ ಬಾಲಕಿ ಹೆಗ್ಗಳಿಕೆಗೆ ಪಾತ್ರಳಾದ ಗೀತಾಂಜಲಿ ರಾವ್

ನವದೆಹಲಿ, ಡಿಸೆಂಬರ್ 4 (ಯುಎನ್‌ಐ) ಕುಡಿಯುವ ನೀರಿನಲ್ಲಿ ಸೀಸದ ಪ್ರಮಾಣವನ್ನು ಪರೀಕ್ಷಿಸುವ ಮೊಬೈಲ್ ಸಾಧನವನ್ನು ಸಂಶೋಧನೆ ಮಾಡಿದ ಭಾರತೀಯ - ಅಮೆರಿಕನ್ ಹದಿಹರೆಯದ ವಿಜ್ಞಾನಿ ಗೀತಾಂಜಲಿ ರಾವ್ ಅವರನ್ನು ಟೈಮ್ ನಿಯತಕಾಲಿಕೆಯ ವರ್ಷದ ಮೊದಲ ಬಾಲಕಿ ಎಂದು ಹೆಸರಿಸಿದೆ.
ಜಗತ್ತಿನ ನೈಜ ಸಮಸ್ಯೆಗಳಿಗೆ ವೈಜ್ಞಾನಿಕ ಅಂಶಗಳನ್ನು ಅನ್ವಯಿಸುವ ಸಾಮರ್ಥ್ಯ ಮತ್ತು ಇತರ ಮಕ್ಕಳಲ್ಲಿ ಇದೇ ರೀತಿಯ ಕಾರ್ಯ ಕೈಗೊಳ್ಳಲು ಪ್ರೇರೇಪಿಸುವ ಹೆಗ್ಗುರುತು ಶೀರ್ಷಿಕೆಗಾಗಿ 5,000ಕ್ಕೂ ಹೆಚ್ಚು ಅಮೆರಿಕನ್ ನಾಮನಿರ್ದೇಶಿತರ ಪೈಕಿ ಗೀತಾಂಜಲಿಯನ್ನು ಆಯ್ಕೆ ಮಾಡಲಾಗಿದೆ.
ಸೈಬರ್ ಬೆದರಿಕೆಯನ್ನು ಪತ್ತೆಹಚ್ಚುವಂತಹ ಆ್ಯಪ್ ಅನ್ನು ಸಹ ಕಂಡುಹಿಡಿದಿರುವ 15 ವರ್ಷದ ರಾವ್, "ವಿಶ್ವದ ಸಮಸ್ಯೆಗಳನ್ನು ಪರಿಹರಿಸುವ ಆಲೋಚನೆಗಳೊಂದಿಗೆ ಬರಲು ಇತರರನ್ನು ಪ್ರೇರೇಪಿಸುವ ಭರವಸೆ ಹೊಂದಿದ್ದಾರೆ.
"ನನ್ನ ಗುರಿ ನಿಜವಾಗಿಯೂ ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ನನ್ನ ಸ್ವಂತ ಸಾಧನಗಳನ್ನು ರಚಿಸುವುದು ಮಾತ್ರವಲ್ಲ, ಇತರರಿಗೂ ಅದೇ ರೀತಿ ಮಾಡಲು ಪ್ರೇರೇಪಿಸುವುದಾಗಿದೆ. ಏಕೆಂದರೆ, ವೈಯಕ್ತಿಕ ಅನುಭವದಿಂದ, ನಿಮ್ಮಂತೆ ಬೇರೆಯವರನ್ನು ನೀವು ನೋಡದಿದ್ದಾಗ ಅದು ಸುಲಭವಲ್ಲ ಎಂದು ಬಾಲಕಿ ಹೇಳಿದ್ದಾಳೆ.
"ನಾನು ಅದನ್ನು ಮಾಡಲು ಸಾಧ್ಯವಾದರೆ, ನೀವು ಕೂಡ ಇದನ್ನು ಮಾಡಬಹುದು, ಮತ್ತು ಯಾರಾದರೂ ಇದನ್ನು ಮಾಡಬಹುದು" ಎಂದು ಟೈಮ್ ನಿಯತಕಾಲಿಕೆಗೆ ಏಂಜಲೀನಾ ಜೋಲಿಗೆ ನೀಡಿದ ಸಂದರ್ಶನದಲ್ಲಿ ರಾವ್ ಹೇಳಿದ್ದಾಳೆ.
"ನಿಮ್ಮ ಸಾಮಾನ್ಯ ವಿಜ್ಞಾನಿ" ಯಂತೆ ತಮ್ಮನ್ನು ಕಾಣಬೇಡಿ ಎಂದು ರಾವ್ ಹೇಳಿದರು.
"ನಾನು ಟಿವಿಯಲ್ಲಿ ನೋಡುವ ಪ್ರತಿಯೊಬ್ಬ ವಿಜ್ಞಾನಿ ವೃದ್ಧ ಮತ್ತು ಸಾಮಾನ್ಯವಾಗಿ ಬಿಳಿ ಮನುಷ್ಯನಾಗಿರುತ್ತಾರೆ ಎಂದು ಅವರು ಹೇಳಿದರು.
ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಸವಾಲು ನಮ್ಮ ಮುಂದಿದೆ ಎಂದು ರಾವ್ ಹೇಳಿದರು.
"ನಮ್ಮ ಪೀಳಿಗೆಯು ನಾವು ಹಿಂದೆಂದೂ ನೋಡಿರದಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಅದೇ ಸಮಯದಲ್ಲಿ ನಾವು ಇನ್ನೂ ಹಳೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ" ಎಂದು ಅವರು ಟೈಮ್‌ಗೆ ತಿಳಿಸಿದರು.
ನಾವು ಇಲ್ಲಿ ಹೊಸ ಜಾಗತಿಕ ಸಾಂಕ್ರಾಮಿಕದ ಮಧ್ಯದಲ್ಲಿ ಬದುಕುತ್ತಿದ್ದೇವೆ, ಮತ್ತು ನಾವು ಇನ್ನೂ ಮಾನವ ಹಕ್ಕುಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಾವು ಸೃಷ್ಟಿಸದ ಅನೇಕ ಸಮಸ್ಯೆಗಳಿವೆ, ನಾವು ತಂತ್ರಜ್ಞಾನದ ಬಳಕೆಯೊಂದಿಗೆ ಹವಾಮಾನ ಬದಲಾವಣೆ ಮತ್ತು ಸೈಬರ್ ಬೆದರಿಕೆಯಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದು ಬಾಲಕಿ ಹೇಳಿದ್ದಾಳೆ.
ಟೈಮ್ ಪ್ರಶಸ್ತಿ ರಾವ್ ಅವರ ಇತ್ತೀಚಿನ ಪುರಸ್ಕಾರವಾಗಿದೆ. ಸೀಸ-ಕಲುಷಿತ ನೀರನ್ನು ಪತ್ತೆಹಚ್ಚಲು ತ್ವರಿತ, ಕಡಿಮೆ-ವೆಚ್ಚದ ಪರೀಕ್ಷೆಯನ್ನು ಕಂಡುಹಿಡಿದಿದ್ದಕ್ಕಾಗಿ ಬಾಲಕಿಯನ್ನು ಈ ಮೊದಲು "ಅಮೆರಿಕದ ಉನ್ನತ ಯುವ ವಿಜ್ಞಾನಿ" ಎಂದು ಹೆಸರಿಸಲಾಗಿತ್ತು.
ಟೈಮ್ ಹೊಸ ಕಿಡ್ ಆಫ್ ದಿ ಇಯರ್ ಶೀರ್ಷಿಕೆ "ಅಮೆರಿಕದ ಕಿರಿಯ ಪೀಳಿಗೆಯ ಉದಯೋನ್ಮುಖ ನಾಯಕರಿಗೆ ಮಾಪಕ" ಎಂದು ಬಣ್ಣಿಸಿದೆ.
ಯುಎನ್ಐ ಎಎಚ್ 1927