ವಾಷಿಂಗ್ಟನ್, ಜ 21( ಯುಎನ್ಐ) ಅಗ್ರರಾಷ್ಟ್ರ ಅಮೆರಿಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಜೋ ಬೈಡೆನ್ ಅವರಿಗೆ... ಅಧ್ಯಕ್ಷರ ಅಧಿಕೃತ ಖಾತೆ @POTUS ನಿಯಂತ್ರಣವನ್ನು ಟ್ವೀಟರ್ ನೀಡಿದೆ. ಪ್ರಸ್ತುತ ಈ ಖಾತೆಯಿಂದ ಟ್ವೀಟ್ ಮಾಡುತ್ತಿರುವ ಬೈಡನ್ .. ಕೇವಲ 12 ಮಂದಿಯನ್ನು ಟ್ವೀಟರ್ ನಲ್ಲಿ ಅನುಸರಿಸುತ್ತಿದ್ದಾರೆ. ಇವರಲ್ಲಿ ಪ್ರಥಮ ಮಹಿಳೆ ಜಿಲ್ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಅವರ ಪತಿ ಡಗ್ ಯೆಂಹಾಫ್ ಶ್ವೇತ ಭವನದ ಇತರ ಸಿಬ್ಬಂದಿಗಳ ಜತೆಗೆ ಸೆಲೆಬ್ರಿಟಿ ಇದ್ದಾರೆ. ಬೈಡನ್ .. ಆ ಒಬ್ಬ ಪ್ರಸಿದ್ದ ವ್ಯಕ್ತಿಯನ್ನು ಏಕೆ ಅನುಸರಿಸುತ್ತಿದ್ದಾರೆ..?
ಬೈಡೆನ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜನಪ್ರಿಯ ರೂಪದರ್ಶಿ, ಟೆಲಿವಿಷನ್ ಸ್ಟಾರ್, ಲೇಖಕಿ ಕ್ರಿಸ್ಸಿ ಟೈಗೆನ್ ಅವರನ್ನು ಅನುಸರಿಸುತ್ತಿದ್ದಾರೆ. ಆದರೆ ಇದಕ್ಕೆ ಒಂದು ವಿಶೇಷ ಕಾರಣವಿದೆ. ಟ್ವಿಟರ್ನಲ್ಲಿ ತುಂಬಾ ಸಕ್ರಿಯವಾಗಿರುವ ಕ್ರಿಸ್ಸಿ ... ಈ ಹಿಂದೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಲವಾರು ಬಾರಿ ಟೀಕಿಸಿದ್ದರು. ಇದಕ್ಕೆ ಅವರು ಕೂಡಾ ತೀವ್ರವಾಗಿಯೇ ಪ್ರತಿಕ್ರಿಯಿಸಿದ್ದರು. ಅಲ್ಲದೆ ಪೊಟಾಸ್ ಖಾತೆಯಿಂದ ಕ್ರಿಸ್ಸಿ ಅವರನ್ನು ನಿರ್ಬಂಧಿಸಿದ್ದರು.
ಆದರೆ, ಈಗ ಟ್ರಂಪ್ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿರುವುದರಿಂದ ಕ್ರಿಸ್ಸಿ ನಿನ್ನೆ ಒಂದು ಟ್ವೀಟ್ ಮಾಡಿದ್ದರು. "ಪೊಟಸ್ ಟ್ವೀಟರ್” ನಲ್ಲಿ ನಾಲ್ಕು ವರ್ಷಗಳಿಂದ ನನ್ನನ್ನು ನಿರ್ಬಂಧಿಸಿದ್ದರು. ದಯವಿಟ್ಟು ನೀವು ನನ್ನನ್ನು ಅನುಸರಿಸಬಹುದೇ? ' ಎಂದು ಬೈಡನ್ ಅವರಿಗೆ ಆಕೆ ಮನವಿ ಮಾಡಿದ್ದರು. ಈ ಮನವಿಯನ್ನು ಬೈಡನ್ ಅಂಗೀಕರಿಸಿದ್ದಾರೆ. . ಪ್ರಸ್ತುತ ಪೊಟಸ್ ಖಾತೆಯಲ್ಲಿ ಅನುಸರಿಸುತ್ತಿರುವ ಏಕೈಕ ಸೆಲೆಬ್ರಿಟಿ ವ್ಯಕ್ತಿ ಆಕೆ ಎಂಬುದು ವಿಶೇಷ. ತಮ್ಮ ಮನವಿಯನ್ನು ಅಧ್ಯಕ್ಷ ಬೈಡೆನ್ ಸ್ವೀಕರಿಸಿರುವುದಕ್ಕೆ ಕ್ರಿಸ್ಸಿ ಸಂತೋಷ ವ್ಯಕ್ತಪಡಿಸಿದ್ದಾರೆ. 'ಓ ದೇವರೇ. ಈಗ ನಾನು ಅಧ್ಯಕ್ಷರ ಟ್ವೀಟ್ಗಳನ್ನು ನೋಡಬಹುದು ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೈಡನ್ ಮೊದಲ ದಿನ 15 ಪ್ರಮುಖ ಆದೇಶಗಳಿಗೆ ಸಹಿ ಹಾಕಿದ್ದಾರೆ. ಈ ಆದೇಶಗಳು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿದ್ದ ನೀತಿಗಳಿಗೆ ತದ್ವಿರುದ್ಧವಾಗಿವೆ. ಮೆಕ್ಸಿಕನ್ ಗಡಿಯಲ್ಲಿ ಟ್ರಂಪ್ ಗೋಡೆ ನಿರ್ಮಿಸುವುದು ಸೇರಿದಂತೆ ಮುಸ್ಲಿಂ ದೇಶಗಳ ಪ್ರವಾಸಿಗರ ಮೇಲಿನ ನಿಷೇಧವನ್ನು ವಾಪಸ್ಸು ಪಡೆಯುವುದು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಪ್ಯಾರಿಸ್ ಒಪ್ಪಂದದಲ್ಲಿ ಅಮೆರಿಕಾ ಸೇರ್ಪಡೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗ ಟ್ವಿಟ್ಟರ್ ನಲ್ಲೂ ಟ್ರಂಪ್ ನಿರ್ಬಂಧಿಸಿದ ಕ್ರಿಸ್ ಅವರನ್ನು ಬೈಡನ್ ಈಗ ಅನುಸರಿಸುತ್ತಿದ್ದಾರೆ ಎಂಬುದು ಗಮನಾರ್ಹ.
ಯುಎನ್ಐ ಕೆವಿಆರ್ 1731