Thursday, Jan 21 2021 | Time 04:46 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Entertainment Share

ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್

ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್
ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್

ಬೆಂಗಳೂರು, ನ 28 (ಯುಎನ್‍ಐ) ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟ ಬೆಲಂಕೊಂಡ ಸಾಯಿ ಶ್ರೀನಿವಾಸ್​ ಇದೀಗ ಬಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿ ನಡೆಸಿದ್ದಾರೆ. ಈಗಾಗಲೇ ಸೌತ್​ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿರುವ ಪ್ರಭಾಸ್​ ನಟನೆಯ ಛತ್ರಪತಿ ಚಿತ್ರವನ್ನೇ ಹಿಂದಿಯಲ್ಲಿ ರಿಮೇಕ್​ ಮಾಡಲಾಗುತ್ತಿದ್ದು, ಬೆಲಂಕೊಂಡ ಸಾಯಿ ಶ್ರೀನಿವಾಸ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಪೆನ್ ಸ್ಟುಡಿಯೋಸ್ ಬ್ಯಾನರ್​ನಲ್ಲಿ ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರವನ್ನು ಡಾ. ಜಯಂತಿಲಾಲ್ ಗಡ ಬಂಡವಾಳ ಹೂಡುತ್ತಿದ್ದಾರೆ.



ಬೆಲಂಕೊಂಡ ಶ್ರೀನಿವಾಸ್ ಅವರ ಮೊದಲ ಸಿನಿಮಾ ‘ಅಲ್ಲುಡು ಸೀನು’ ಸಿನಿಮಾ ನಿರ್ದೇಶನ ಮಾಡಿದ್ದ ವಿವಿ ವಿನಾಯಕ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರದ್ದು, ಇವರಿಗೂ ಇದು ಮೊದಲ ಬಾಲಿವುಡ್ ಸಿನಿಮಾ ಎಂಬುದು ವಿಶೇಷ.



“ಬಾಲಿವುಡ್​ಗೆ ಪದಾರ್ಪಣೆ ಮಾಡುವುದಕ್ಕೆ ಇದು ಹೇಳಿಮಾಡಿಸಿದ ಕಥೆ. ಪೆನ್ ಸ್ಟುಡಿಯೋಸ್ ಅವರ ಜತೆ ಕೈ ಜೋಡಿಸುತ್ತಿರುವುದು ಒಂದೊಳ್ಳೆ ಅವಕಾಶ. ನನ್ನ ಸಿನಿಮಾ ಕರಿಯರ್​ನ ಮೊದಲ ನಿರ್ದೇಶರ ಜತೆ ಈ ಸಿನಿಮಾ ಮಾಡುತ್ತಿರುವುದು ಖುಷಿಯ ವಿಚಾರ. ಪ್ರಭಾಸ್​ ನಿಭಾಯಿಸಿದ ಪಾತ್ರವನ್ನು ತೆರೆಮೇಲೆ ತರುವುದೂ ಅಷ್ಟೇ ದೊಡ್ಡ ಜವಾಬ್ದಾರಿ. ಅದನ್ನೂ ಅಷ್ಟೇ ಸಲೀಸಾಗಿ ನಿಭಾಯಿಸುವ ವಿಶ್ವಾಸವಿದೆ” ಎಂದು ಬೆಲಂಕೊಂಡ ಶ್ರೀನಿವಾಸ್ ಹೇಳಿದ್ದಾರೆ.





ಮೂಲ ಛತ್ರಪತಿ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ಪ್ರಭಾಸ್, ಶ್ರೀಚರಣ್ ಸೇರಿ ಸಾಕಷ್ಟು ಮಂದಿ ಸ್ಟಾರ್ ಕಲಾವಿದರು ನಟಿಸಿದ್ದರು. ಇದೀಗ ಅದೇ ಚಿತ್ರವನ್ನು ವಿವಿ ವಿನಾಯಕ್ ಬಾಲಿವುಡ್​ನಲ್ಲಿ ನಿರ್ದೇಶನ ಮಾಡಲಿದ್ದು, ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಶೀಘ್ರದಲ್ಲಿ ಸಿನಿಮಾ ಕುರಿತ ಹೆಚ್ಚಿನ ಮಾಹಿತಿಯನ್ನು ತಂಡ ನೀಡಲಿದೆ.



ರಿಮೇಕ್ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರಾಗಿರುವ ನಿರ್ದೇಶಕ ವಿನಾಯಕ, ತಮಿಳಿನ ಕೈದಿ ಚಿತ್ರವನ್ನು ತೆಲುಗಿನಲ್ಲಿ ಕೈದಿ ನಂ.150 ಸಿನಿಮಾ ಮಾಡುವ ಮೂಲಕ ಮೆಗಾಸ್ಟಾರ್ ಚಿರಂಜೀವಿಯವರನ್ನು ಮರಳಿ ಚಿತ್ರರಂಗಕ್ಕೆ ಕರೆತಂದಿದ್ದರು. ಇದೀಗ ಛತ್ರಪತಿ ಸಿನಿಮಾ ಮೂಲಕ ಬಾಲಿವುಡ್​ಗೆ ಹೊರಟಿದ್ದಾರೆ.







ಯುಎನ್‍ಐ ಎಸ್‍ಎ 1734

More News

‘ಕುಂಬಳಕಾಯಿ’ ಒಡೆದು ದಾಖಲೆ ಬರೆದ’ ಸಾಲ್ಟ್’

20 Jan 2021 | 12:26 PM

 Sharesee more..
ಗಾಜನೂರು: ಇದು ಡಾ  ರಾಜ್ ಗಾಜನೂರಿನ ಕಥೆಯಲ್ಲ

ಗಾಜನೂರು: ಇದು ಡಾ ರಾಜ್ ಗಾಜನೂರಿನ ಕಥೆಯಲ್ಲ

19 Jan 2021 | 9:25 PM

ಬೆಂಗಳೂರು, ಜ 19 (ಯುಎನ್ಐ) ಗಾಜನೂರು ಹೆಸರಿನಲ್ಲಿ ಚಿತ್ರವೊಂದು ಸಿದ್ಧವಾಗುತ್ತಿದೆ. ಹಾಗೆಂದು ಗಾಜನೂರು ಶೀರ್ಷಿಕೆಯ ಚಿತ್ರಕ್ಕೂ ಅಣ್ಣಾವ್ರ ಹುಟ್ಟೂರು ಗಾಜನೂರಿಗೆ ಯಾವುದೇ ಸಂಬಂಧವಿಲ್ಲ,

 Sharesee more..
ಈ ವಾರ ಪ್ರೇಕ್ಷಕರಿಗೆ ‘ಲಡ್ಡು’

ಈ ವಾರ ಪ್ರೇಕ್ಷಕರಿಗೆ ‘ಲಡ್ಡು’

19 Jan 2021 | 9:22 PM

ಬೆಂಗಳೂರು, ಜ 19 (ಯುಎನ್‍ಐ) ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಚಿತ್ರ ‘ಲಡ್ಡು’ ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.

 Sharesee more..
ಡ್ರಗ್ ಪ್ರಕರಣ: ಆದಿತ್ಯ ಆಳ್ವಾ ಒಂದು ವಾರ

ಡ್ರಗ್ ಪ್ರಕರಣ: ಆದಿತ್ಯ ಆಳ್ವಾ ಒಂದು ವಾರ

19 Jan 2021 | 6:13 PM

ಬೆಂಗಳೂರು, ಜ 19 (ಯುಎನ್ಐ) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ, ಆರನೇ ಆರೋಪಿ ಆದಿತ್ಯ ಆಳ್ವಾ ಅವರನ್ನು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 Sharesee more..