Friday, Dec 4 2020 | Time 03:43 Hrs(IST)
Sports Share

ಟಾಸ್ ಗೆದ್ದು ನಾವು ಬೌಲಿಂಗ್ ಮಾಡಬೇಕಿತ್ತು: ಮಾರ್ಗನ್

ಅಬುದಾಬಿ, ಅ.22 (ಯುಎನ್ಐ)- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಟು ವಿಕೆಟ್ ಗಳ ಸೋಲಿನ ಬಳಿಕ ಮಾತನಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ನಾವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಬೇಕಿತ್ತು ಎಂದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ ಕೇವಲ 84 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್ ಸಿಬಿ, 13.3 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 85 ರನ್‌ ಕಲೆ ಹಾಕಿ ಜಯ ಸಾಧಿಸಿತು.
"ನಾವು ನಾಲ್ಕು 14 ರನ್ ಕಲೆ ಹಾಕುವಲ್ಲಿ ಮಹತ್ವದ 4 ವಿಕೆಟ್ ಗಳನ್ನು ಕಳೆದುಕೊಂಡೆವು. ಇಂತಹ ಪರಿಸ್ಥಿತಿಗೆ ನಾವು ಬರಲು ಬಯಿಸಿರಲಿಲ್ಲ. ಬೆಂಗಳೂರು ತಂಡ ಅದ್ಭುತವಾಗಿ ಬೌಲಿಂಗ್ ಮಾಡಿತು. ಮೈದಾನದ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಮೊದಲು ಬೌಲಿಂಗ್ ಮಾಡಬೇಕಾಗಿತ್ತು” ಎಂದು ಮಾರ್ಗನ್ ತಿಳಿಸಿದ್ದಾರೆ.
"ಬೆಂಗಳೂರು ಬೌಲರ್‌ಗಳು ತಮಗೆ ದೊರೆತ ಅವಕಾಶದ ಲಾಭವನ್ನು ಪಡೆದುಕೊಂಡಿದ್ದಾರೆ. ಸುನಿಲ್ ನರೈನ್ ಮತ್ತು ಆಂಡ್ರೆ ರಸ್ಸೆಲ್ ಶೀಘ್ರದಲ್ಲೇ ತಂಡ ಸೇರಿಕೊಳ್ಳುತ್ತಾರೆ ಎಂದು ಆಶಿಸುತ್ತೇವೆ. ತಂಡಕ್ಕೆ ಆಲ್ ರೌಂಡರ್ ಗಳ ಆಟದ ಲಾಭ ಪಡೆದು ಮುಂದಿನ ಪಂದ್ಯಗಳಲ್ಲಿ ಪುಟಿದೇಳುವ ಕನಸು ಹೊಂದಿದ್ದೇವೆ" ಎಂದು ಹೇಳಿದ್ದಾರೆ.
ಯುಎನ್ಐ ವಿಎನ್ಎಲ್ 1806