Friday, May 29 2020 | Time 08:51 Hrs(IST)
  • ಮೆಕ್ಸಿಕೋದಲ್ಲಿ ಕೊರೊನಾ ಸೋಂಕಿಗೆ ಮತ್ತೆ 447 ಬಲಿ, ಒಟ್ಟು 9,044 ಸಾವು
  • ಚಿಲಿಯಲ್ಲಿ 87 ಸಾವಿರ ಕೊರೊನಾ ಸೋಂಕು ಪ್ರಕರಣ
  • ರಾಜ್ಯಸಭಾ ಸದಸ್ಯ ವಿರೇಂದ್ರಕುಮಾರ್ ಇನ್ನಿಲ್ಲ
  • ಸೊಲ್ಲಾಪುರ; ಕೃಷಿ ಭೂಮಿಯಲ್ಲಿ ಸುಮಾರು ೭೦೦ ಪುರಾತನ ನಾಣ್ಯಗಳ ಪತ್ತೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ಲಾಕ್ ಡೌನ್; ರಾಜ್ಯಗಳ ಅಭಿಪ್ರಾಯ ಕೇಳಿದ ಗೃಹ ಸಚಿವ ಅಮಿತ್ ಶಾ
business economy Share

ಡಿಕೆ ಶಿವಕುಮಾರ್ ದೆಹಲಿ ನಿವಾಸದ ಮೇಲೆ ಸಿಬಿಐ ದಾಳಿ

ನವದೆಹಲಿ,ಅ 21(ಯುಎನ್ಐ) ಅಕ್ರಮ ಹಣ ಪತ್ತೆ ಪ್ರಕರಣದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿದ್ದು ತಿಹಾರ್​ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ದೆಹಲಿಯ ಸಫ್ದರ್​ ಜಂಗ್​ ರಸ್ತೆಯಲ್ಲಿರುವ ಡಿ.ಕೆ.ಶಿವಕುಮಾರ್​ ಒಡೆತನದ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಪ್ರಕರಣದ ಮಾಹಿತಿಯನ್ನು ಸಿಬಿಐ ಜತೆ ಹಂಚಿಕೊಂಡಿದ್ದೇವೆ ಎಂದು ಇ.ಡಿ.ಅಧಿಕಾರಿಗಳು ದೆಹಲಿಯ ಹೈ ಕೋರ್ಟ್ ಗೆ ತಿಳಿಸಿದ್ದರು.

ಡಿ.ಕೆ.ಶಿವಕುಮಾರ್​ ಅವರ ಫ್ಲ್ಯಾಟ್​​ ಮೇಲೆ 2017ರಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್​ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದರು.ಈಗ ಅದೇ ಮನೆಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇದೀಗ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಕೈಗೆತ್ತಿಕೊಂಡಿರುವುದು ಬಹುತೇಕ ಖಚಿತವಾಗಿದೆ.

ಕಳೆದ ಒಂದೂವರೆ ತಿಂಗಳಿಂದಲೂ ಡಿ.ಕೆ.ಶಿವಕುಮಾರ್​ ಇ.ಡಿ.ವಿಚಾರಣೆ ಎದುರಿಸುತ್ತ ತಿಹಾರ್​ ಜೈಲಿನಲ್ಲಿದ್ದಾರೆ. ದೆಹಲಿ ಕೋರ್ಟ್​ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.

ಡಿ.ಕೆ.ಶಿವಕುಮಾರ್​ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಬಗ್ಗೆ ಪ್ರತಿಕ್ರಿಯಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್​ ಮಾಡಿ ಪದೇ ಪದೇ ಕೇಂದ್ರೀಯ ತನಿಖಾ ಸಂಸ್ಥೆಗಳು ದಾಳಿ ನಡೆಸಲಾಗುತ್ತಿದೆ. ನಿಜವಾಗಿ ತಪ್ಪು ಮಾಡಿದ್ದರೆ ನಿಷ್ಪಕ್ಷಪಾತ ವಾಗಿ ತನಿಖೆ ನಡೆಯಲಿ.ಆದರೆ ದ್ವೇಷದ ರಾಜಕಾರಣಕ್ಕೆ ಇ.ಡಿ., ಸಿಬಿಐ ಬಳಕೆಯಾಗುವುದು ಬೇಡ ಎಂದಿದ್ದಾರೆ.

ಮಾಜಿ ಸಚಿವರ ರಾಮಲಿಂಗಾರೆಡ್ಡಿ ಮಾತನಾಡಿದ್ದು, ಡಿ.ಕೆ.ಶಿವಕುಮಾರ್​ ನಿವಾಸದ ಮೇಲೆ ಸಿಬಿಐ ದಾಳಿ ಆಗಿದ್ದು ಈಗಷ್ಟೇ ಗಮನಕ್ಕೆ ಬಂದಿದೆ.ಇನ್ನೂ ಸಂಪೂರ್ಣವಾಗಿ ಆ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಮಾತನಾಡಿ, ಇಡಿ,ಐಟಿ ,ಸಿಬಿಐ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ದಮನ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಇದು ಯಾವುದು ಆರೋಗ್ಯಕರ ಅಲ್ಲ,ಇದರಿಂದ ಪ್ರಜಾಪ್ರಭುತ್ವ ರಕ್ಷಣೆ ಮಾಡಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.


ಯುಎನ್ಐ ಎಸ್ಎಂಆರ್ ವಿಎನ್ 1625
More News
ಮೂಲಸೌಕರ್ಯ ಅಭಿವೃದ್ಧಿಗೆ ‘ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍’ ಕೊಡುಗೆ ಶ್ಲಾಘನೀಯ- ನಿರ್ಮಲಾ ಸೀತಾರಾಮನ್‍

ಮೂಲಸೌಕರ್ಯ ಅಭಿವೃದ್ಧಿಗೆ ‘ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍’ ಕೊಡುಗೆ ಶ್ಲಾಘನೀಯ- ನಿರ್ಮಲಾ ಸೀತಾರಾಮನ್‍

27 May 2020 | 9:22 PM

ನವದೆಹಲಿ, ಮೇ 27(ಯುಎನ್‍ಐ)- ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ನೆರವು ನೀಡುವಲ್ಲಿ ‘ನವ ಅಭಿವೃದ್ಧಿ ಬ್ಯಾಂಕ್ (ನ್ಯೂ ಡೆವಲಪ್‍ಮೆಂಟ್‍ ಬ್ಯಾಂಕ್‍-ಎನ್‌ಡಿಬಿ) ನೀಡುತ್ತಿರುವ ಕೊಡುಗೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಶ್ಲಾಘಿಸಿದ್ದಾರೆ.

 Sharesee more..